ಹಿಂದು ಸಮಾಜಕ್ಕೆ ತೊಂದರೆ ನೀಡುವವರನ್ನು ಶಿಕ್ಷಿಸುವ ಕೆಲಸ ರಕ್ಷಕರು ಮಾಡಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡದಿದ್ದಲ್ಲಿ ಇಂದು ಧ್ವಜ ಹಿಡಿದು ಬಂದವರು ನಾಳೆ ಆಯುಧ ಹಿಡಿದು ಬರಬಹುದು ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿ ಪ್ರಮುಖ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲುಹಿಂದು ಸಮಾಜಕ್ಕೆ ತೊಂದರೆ ನೀಡುವವರನ್ನು ಶಿಕ್ಷಿಸುವ ಕೆಲಸ ರಕ್ಷಕರು ಮಾಡಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡದಿದ್ದಲ್ಲಿ ಇಂದು ಧ್ವಜ ಹಿಡಿದು ಬಂದವರು ನಾಳೆ ಆಯುಧ ಹಿಡಿದು ಬರಬಹುದು ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿ ಪ್ರಮುಖ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ. ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ಬುಧವಾರ ಹಿಂದು ಜನಜಾಗೃತಿ ಜಾಥಾದ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಜಗತ್ತಿನಲ್ಲಿ ಕೊಡಗಿನ ವೀರಪುತ್ರರು ತಮ್ಮ ಪರಾಕ್ರಮ ಮೆರೆದು ಹೆಸರುವಾಸಿಯಾಗಿದ್ದಾರೆ. ಇಲ್ಲಿನ ಮಣ್ಣಿಗಾಗಿ, ಸಂಸ್ಕೃತಿಗಾಗಿ ದುಡಿದವರು ಕೊಡಗಿನ ವೀರಪುತ್ರರು. ಹಿಂದೂ ವಿರೋಧಿ ಶಕ್ತಿಗಳು ಸಮಾಜವನ್ನು ಕೆಣಕುವ ಮೊದಲು ಸಾವಿರ ಬಾರಿ ಯೋಚಿಸಬೇಕು ಎಂದರು.ನಾಪೋಕ್ಲು ಸುರಕ್ಷಾ ಸಮಿತಿ ಸಂಚಾಲಕ ಕರಮಂಡ ಲವ ನಾಣಯ್ಯ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದಾದ್ಯಂತ 80 ಮಂಡಲಗಳಲ್ಲಿ ಹಿಂದೂ ಸಮಾವೇಶ ಆಯೋಜಿಸಲಾಗಿದೆ ಎಂದರು.ಕರ್ನಾಟಕ ದಕ್ಷಿಣ ಪ್ರಾಂತ್ಯ ಸಮಿತಿ ಸದಸ್ಯ ಕೊಕ್ಕೇರ ಅಜಿತ್, ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿ ಸಹ ಸಂಚಾಲಕ ರಾಧಾಕೃಷ್ಣ ರೈ, ಪ್ರತಿಪ ಬಿ.ಎಂ ವೇದಿಕೆಯಲ್ಲಿದ್ದರು.ಮಾಜಿ ಶಾಸಕ ಕೆ. ಜಿ ಬೋಪಯ್ಯ , ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ಚಲನ್, ಎ.ಕೆ ಮನುಮುತ್ತಪ್ಪ, ಅಪ್ಪಚಿರ ಗೌತಮ್, ಕಲಿಯಂಡ ವಿಠಲ, ನರೇಂದ್ರ ಎಂ ಎಂ. ಬಿದ್ದಾಟಂಡ ರೋಜಿ ಚಿನ್ನಪ್ಪ, ಬಿದ್ದಂಡ ಉಷಾ ದೇವಮ್ಮ, ಹಿಂದೂ ಸುರಕ್ಷಾ ಸಮಿತಿ ಹಾಗೂ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು.

ಹೇಮಾ ಅಜಿತ್ ಮಾದಾಪುರ ಪ್ರಾರ್ಥಿಸಿದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಬೋಜೇಗೌಡ ಸ್ವಾಗತಿಸಿದರು. ಕೊಡಗು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುನಿಲ್ ಪ್ರಮಾಣವಚನ ಬೋಧಿಸಿದರು. ಸರಸ್ವತಿ ಮನೋಹರಿ ಭಾರತ್ ಮಾತಾ ಪೂಜನ ಗೀತೆ ಹಾಡಿದರು ಹಿಂದು ಸುರಕ್ಷಾ ಸಮಿತಿ ಸದಸ್ಯ ಚಂದ್ರ ಉಡೊತ್‌ ನಿರೂಪಿಸಿದರು. ಕಂಗಂಡ ಜಾಲಿ ಪೂವಪ್ಪ ವಂದಿಸಿದರು. ..............ಕಾರ್ಯಕ್ರಮಕ್ಕೆ ಮುನ್ನ ನಾಪೋಕ್ಲು ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಬಳಿಕ ಹಳೆ ತಾಲೂಕು ಜಂಕ್ಷನ್ ಬಳಿ ಶಿವಾಚಾಳಿಯಂಡ ಜಗದೀಶ್ ಈಡುಗಾಯಿ ಒಡೆದು ಮೆರವಣಿಗೆ ಚಾಲನೆ ನೀಡಲಾಯಿತು.

ಹಿಂದೂ ಸಮಾಜದ ಸಹಸ್ರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಭಾರತ ಮಾತೆ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.

ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ವಿವಿಧ ಕಡೆ ಬಸ್‌, ವಾಹನ ತಪಾಸಣೆ ಮಾಡಲಾಯಿತು.