ಸಾರಾಂಶ
ತುರುವೇಕೆರೆ: ವಿಜಯದಶಮಿಯ ಅಂಗವಾಗಿ ನಡೆಯಲಿರುವ ದಸರಾ ಉತ್ಸವದ ಪ್ರಯುಕ್ತ ಹಲವಾರು ಮನೆಗಳಲ್ಲಿ ಬೊಂಬೆ ಇಡುವ ಪದ್ದತಿ ಇದೆ. ಇದೇ ಪ್ರಕಾರವಾಗಿ ಇಲ್ಲಿಯ ಮನೆಯೊಂದರಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಬೊಂಬೆ ಹಬ್ಬವನ್ನು ಈ ಬಾರಿಯೂ ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ. ಈ ಬಾರಿಯೂ ಪಟ್ಟದ ಗೊಂಬೆಯೊಂದಿಗೆ ಮನೆಯ ಅಧಿದೇವತೆಗಳು, ದುರ್ಗಾ ದೇವಿ, ಶೃಂಗೇರಿ ಶಾರದಮ್ಮನವರು, ಇದುವರೆಗಿನ ಶಂಕರಾಚಾರ್ಯರ ಪರಂಪರೆ, ದಶಾವತಾರ, ಅಷ್ಟಲಕ್ಷ್ಮಿ, ಕೈಲಾಸ, ಪಟ್ಟಾಭಿರಾಮ, ರಾಮಾಂಜನೇಯ, ದತ್ತಾತ್ರೇಯ, ಗಾಯತ್ರಿ ದೇವಿ, ನವದುರ್ಗೆಯರು, ಮಧುರೆ ಮೀನಾಕ್ಷಿ ಕಲ್ಯಾಣ, ಪಳನಿ ಸುಬ್ರಹ್ಮಣ್ಯ, ಕೇರಳ ಅನಂತಪದ್ಮನಾಭ, ಮೈಸೂರು ದಸರಾ, ಜಂಬೂ ಸವಾರಿ, ಹಳ್ಳಿಯ ಸೊಗಡು, ಮದುವೆ ಮನೆಯ ಸಂಭ್ರಮ, ಯಕ್ಷಗಾನ, ವೀಣಾ ವಾದನ ಸೇರಿದಂತೆ ನೂರಾರು ಬೊಂಬೆಗಳು ಮೇಳೈಸಿವೆ. ನವರಾತ್ರಿ ಹಬ್ಬಕ್ಕಾಗಿ ನಡೆಯುವ ವಿಶೇಷ ದಿನಗಳಲ್ಲಿ ಪ್ರತಿದಿನವೂ ಮಕ್ಕಳು ಹಾಗೂ ಮುತ್ತೈದೆಯರನ್ನು ಮನೆಗೆ ಕರೆದು ಗೌರವಿಸಲಾಗುವುದು. ವಿಜಯದಶಮಿಯಂದು ಬನ್ನಿಸೊಪ್ಪನ್ನು ಈ ಬೊಂಬೆಗಳ ಮೇಲೆ ಇಡುವ ಮೂಲಕ ಈ ಬೊಂಬೆಹಬ್ಬ ಸಂಪನ್ನಗೊಳಿಸಲಾಯಿತು.