ಬೊಂಬೆನಾಡಿಗೂ ಶ್ರೀರಾಮನಿಗೂ ಉಂಟು ಬಾಂಧವ್ಯ!

| Published : Jan 22 2024, 02:15 AM IST

ಸಾರಾಂಶ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಲೆ ತಾಲೂಕಿನಲ್ಲಿ ಶ್ರೀರಾಮನ ಪಾದಸ್ಪರ್ಶಿ ಸ್ಥಳಗಳೂ ಮಹತ್ವ ಪಡೆದುಕೊಂಡಿವೆ. ದೊಡ್ಡಮಳೂರು ಶ್ರೀರಾಮಾಪ್ರಮೇಯ ಸ್ವಾಮಿ ದೇವಸ್ಥಾನ, ಕೂಡ್ಲೂರು ಶ್ರೀರಾಮನ ಮಂದಿರ ಹಾಗೂ ಸಿಂಗರಾಜಿಪುರ, ಹನಿಯೂರು ಗ್ರಾಮಗಳ ನಡುವೆ ಇರುವ ಶ್ರೀ ಗವಿರಂಗಸ್ಥಾಮಿ ಬೆಟ್ಟಕ್ಕೂ ಶ್ರೀರಾಮನಿಗೂ ಬಾಂಧವ್ಯವಿರುವ ಕುರುಹುಗಳಿವೆ.

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಲೆ ತಾಲೂಕಿನಲ್ಲಿ ಶ್ರೀರಾಮನ ಪಾದಸ್ಪರ್ಶಿ ಸ್ಥಳಗಳೂ ಮಹತ್ವ ಪಡೆದುಕೊಂಡಿವೆ. ದೊಡ್ಡಮಳೂರು ಶ್ರೀರಾಮಾಪ್ರಮೇಯ ಸ್ವಾಮಿ ದೇವಸ್ಥಾನ, ಕೂಡ್ಲೂರು ಶ್ರೀರಾಮನ ಮಂದಿರ ಹಾಗೂ ಸಿಂಗರಾಜಿಪುರ, ಹನಿಯೂರು ಗ್ರಾಮಗಳ ನಡುವೆ ಇರುವ ಶ್ರೀ ಗವಿರಂಗಸ್ಥಾಮಿ ಬೆಟ್ಟಕ್ಕೂ ಶ್ರೀರಾಮನಿಗೂ ಬಾಂಧವ್ಯವಿರುವ ಕುರುಹುಗಳಿವೆ.

ರಾಮನ ಬಾಣದಿಂದ ಬಿಲ್ ಸೊಣೆ ನಿರ್ಮಾಣ:

ತಾಲೂಕಿನ ಸಿಂಗರಾಜಿಪುರ, ಹನಿಯೂರು ನಡುವಿನ ಗವಿರಂಗಸ್ವಾಮಿ ಬೆಟ್ಟಕ್ಕಿರುವ ಬಾಂಧವ್ಯವೆಂದರೆ, ಶ್ರೀರಾಮನ ವನವಾಸದ ದಿನಗಳಲ್ಲೊಮ್ಮೆ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣನೊಂದಿಗೆ ಗವಿರಂಗಸ್ವಾಮಿ ಬೆಟ್ಟದ ಮುಖಾಂತರ ಹಾದು ಹೋಗುತ್ತಿದ್ದ ವೇಳೆ ಸೀತಾಮಾತೆಗೆ ನೀರಡಿಕೆಯಾಗುತ್ತದೆ. ಆಗ ಶ್ರೀರಾಮ ಗಂಗಾಮಾತೆಯನ್ನು ಪ್ರಾರ್ಥಿಸಿ ಬೆಟ್ಟಕ್ಕೆ ಬಾಣ ಪ್ರಯೋಗ ಮಾಡಿದ್ದರಿಂದ ಇಲ್ಲಿ ಸೊಣೆ ಪುಟಿಯಿತು ಎಂಬ ಪ್ರತೀತಿ ಇದೆ. ಶ್ರೀರಾಮನ ಬಾಣಕ್ಕೆ ಬೆಟ್ಟ ಸೀಳಿಕೊಂಡು ಬಂದ ಈ ಸೊಣೆಯನ್ನು ಬಿಲ್ಲು ಸೊಣೆ ಎಂದೂ ಕರೆಯಲಾಗುತ್ತದೆ. ಬಿರು ಬೇಸಿಗೆ, ಸರ್ವ ಋತುಗಳಲ್ಲೂ ಈ ಸೊಣೆಯಲ್ಲಿ ನೀರು ಸಿಗುತ್ತದೆ. ಎಷ್ಟು ಮೊಗೆದರೂ ಸೊಣೆಯ ನೀರು ಮಾತ್ರ ಬತ್ತದಿರುವುದೇ ಇಲ್ಲಿನ ವಿಶೇಷ.

ಸೊಣೆಯಿಂದ ೨೦೦ ಮೀಟರ್ ದೂರದಲ್ಲಿ ಮತ್ತೊಂದು ಗುಹೆಯಿದ್ದು, ಇಲ್ಲಿ ಗವಿರಂಗಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಈ ಸೊಣೆಯಿಂದಲೇ ದೇವಸ್ಥಾನಕ್ಕೆ ನೀರು ತೆಗೆದುಕೊಂಡು ಹೋಗಲಾಗುತ್ತದೆ.

ತಾಲೂಕಿನಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಹನಿಯೂರು ತಾಲೂಕಿನ ಚಿರಾಪುಂಜಿಯಂತೆ. ಹನಿ ಬಿದ್ದೂರು ಬಳಿಕ ಹನಿಯೂರು ಆಗಿದೆ. ಶ್ರೀರಾಮ ಬಿಟ್ಟ ಬಾಣದಿಂದ ಸೊಣೆ ಉದ್ಭವಿಸಿದ್ದೇ ಇಲ್ಲಿ ಹೆಚ್ಚು ಮಳೆ ಬರಲು ಕಾರಣ ಎಂಬ ನಂಬಿಕೆ ಇದೆ.

ಜಟಾಯುವಿಗೆ ಮೋಕ್ಷ ಕರುಣಿಸಿದ ಶ್ರೀರಾಮ:

ಸೀತಾಪರಹರಣದ ವೇಳೆ ರಾವಣನಿಂದ ರೆಕ್ಕೆ ಕತ್ತರಿಸ್ಪಟ್ಟ ಜಟಾಯು ಪಕ್ಷಿಗೆ ಶ್ರೀರಾಮಚಂದ್ರ ಮೋಕ್ಷ ಕರುಣಿಸಿದ ಸ್ಥಳ ತಾಲೂಕಿನ ಕೂಡ್ಲೂರು ಗ್ರಾಮ. ಸೀತೆಯನ್ನು ಅಪಹರಿಸಿದ ರಾವಣ ಪುಷ್ಪಕ ವಿಮಾನದಲ್ಲಿ ಹೊತ್ತೊಯ್ಯುವಾಗ, ಇದನ್ನು ತಡೆಯಲು ಬಂದ ಜಟಾಯು ಪಕ್ಷಿಯ ಬಲಭಾಗದ ರೆಕ್ಕೆಯನ್ನು ಕತ್ತರಿಸುತ್ತಾನೆ. ಜಟಾಯು ತನಗೆ ಮೋಕ್ಷ ನೀಡುವಂತೆ ಶ್ರೀರಾಮಚಂದ್ರನನ್ನು ಪ್ರಾರ್ಥಿಸುತ್ತಾನೆ. ಜಟಾಯು ಪ್ರಾರ್ಥನೆ ಆಲಿಸಿದ ಶ್ರೀರಾಮ ಜಟಾಯುವಿಗೆ ಮೋಕ್ಷ ಕರುಣಿಸುತ್ತಾನೆ ಎಂಬ ಪುರಾಣ ಕತೆ ಇದೆ. ಬಾಕ್ಸ್................

ಅಪ್ರಮೇಯಸ್ವಾಮಿಗೆ ರಾಮನಿಂದ ಪೂಜೆ

ದೊಡ್ಡಮಳೂರು ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನಕ್ಕೆ ಶ್ರೀರಾಮ ಒಮ್ಮೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಐತಿಹ್ಯವಿದೆ. ರಾವಣನಿಂದ ಅಪಹರಣಗೊಂಡಿದ್ದ ಸೀತಾಮಾತೆಯನ್ನು ಹುಡುಕುತ್ತಾ ಹೊರಟಿದ್ದ ಶ್ರೀರಾಮ ಇಲ್ಲಿನ ಅಪ್ರಮೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದ. ಆದ್ದರಿಂದ ಈ ದೇವಸ್ಥಾನವನ್ನು ಶ್ರೀ ರಾಮಾಪ್ರಮೇಯಸ್ವಾಮಿ ದೇವಸ್ಥಾನ ಎಂದು ಕರೆಯಲಾಗುತ್ತದೆ. ಹಿಂದೆ ಇದನ್ನು ತೆಂಕಣ ಅಯೋಧ್ಯೆ ಎಂದೂ ಸಹ ಕರೆಯಲಾಗುತ್ತಿದ್ದು, ಇಲ್ಲಿ ಪಟ್ಟಾಭಿರಾಮನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ಪೊಟೋ೨೧ಸಿಪಿಟಿ೧:

ಸಿಂಗರಾಜಿಪುರದ ಗವಿರಂಗಸ್ವಾಮಿ ಬೆಟ್ಟದಲ್ಲಿರುವ ಸೊಣೆ.

ಪೊಟೋ೨೧ಸಿಪಿಟಿ೨: ಗವಿರಂಗಸ್ವಾಮಿ ಬೆಟ್ಟದಲ್ಲಿರುವ ದೇವರ ವಿಗ್ರಹ.

ಪೊಟೋ೨೧ಸಿಪಿಟಿ೩: ದೊಡ್ಡಮಳೂರು ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನ.

ಪೊಟೋ೨೧ಸಿಪಿಟಿ೪: ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನದಲ್ಲಿನ ಪಟ್ಟಾಭಿರಾಮ ವಿಗ್ರಹ.

ಪೊಟೋ೨೧ಸಿಪಿಟಿ೫: ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಶರಗುಣರಾಮ ದೇವಸ್ಥಾನ.

ಪೊಟೋ೨೧ಸಿಪಿಟಿ೬: ಶರಗುಣರಾಮ ದೇವಸ್ಥಾನದಲ್ಲಿನ ಶ್ರೀರಾಮನ ವಿಗ್ರಹ.