ಸಾಮೂಹಿಕ ಹೋರಾಟದ ಫಲವಾಗಿ ಖರೀದಿ ಕೇಂದ್ರ: ಕೆ.ಎಸ್.ಆನಂದ್

| Published : Mar 17 2024, 01:49 AM IST

ಸಾಮೂಹಿಕ ಹೋರಾಟದ ಫಲವಾಗಿ ಖರೀದಿ ಕೇಂದ್ರ: ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲ ಎದುರಿಸುತ್ತಿರುವ ಸಂಕಷ್ಟದ ದಿನಗಳಲ್ಲಿ ರೈತರ ಪರ ಮಾಡಿದ ಸಾಮೂಹಿಕ ಹೋರಾಟದ ಫಲವಾಗಿ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರ ಆರಂಭವಾಗಿರುವುದು ನಮ್ಮ ರೈತರಿಗೆ ಸ್ಪಲ್ಪ ಸಮಾಧಾನ ತಂದಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಬರಗಾಲ ಎದುರಿಸುತ್ತಿರುವ ಸಂಕಷ್ಟದ ದಿನಗಳಲ್ಲಿ ರೈತರ ಪರ ಮಾಡಿದ ಸಾಮೂಹಿಕ ಹೋರಾಟದ ಫಲವಾಗಿ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರ ಆರಂಭವಾಗಿರುವುದು ನಮ್ಮ ರೈತರಿಗೆ ಸ್ಪಲ್ಪ ಸಮಾಧಾನ ತಂದಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಶುಕ್ರವಾರ ಕಡೂರು ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಆರಂಭದಲ್ಲಿ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸುವ ಇರಾದೆ ಕೇಂದ್ರ ಸರ್ಕಾರಕ್ಕಿರಲಿಲ್ಲ. ನಾನು ಸೇರಿದಂತೆ ತೆಂಗು ಬೆಳೆಯುವ ಪ್ರದೇಶದ ಶಾಸಕರೆಲ್ಲರ ಸಾಂಘಿಕ ಹೋರಾಟ ಮತ್ತು ವಿರೋಧ ಪಕ್ಷದ ನಾಯಕರ ಸಹಕಾರದೊಂದಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರ ಫಲವಾಗಿ ಇಂದು ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಿದೆ. ಕೇಂದ್ರದ 12 ಸಾವಿರ ರು. ಜೊತೆಗೆ ನಮ್ಮ ರಾಜ್ಯ ಸರ್ಕಾರ 1500 ಸಾವಿರ ಸೇರಿಸಿ 1 ಕ್ವಿಂಟಾಲ್ ಕೊಬ್ಬರಿಗೆ 13500 ರು. ದೊರೆಯು ತ್ತಿದೆ. ರಾಗಿ ಒಂದು ಕ್ವಿಂಟಾಲಿಗೆ 3846 ರು. ದೊರೆಯುತ್ತಿರುವುದು ರೈತರಿಗೆ ಒಂದಿಷ್ಟು ಸಮಾಧಾನ ತಂದಿದೆ. ಈ ಖರೀದಿ ಕೇಂದ್ರದ ಸದುಪಯೋಗ ಕೇವಲ ರೈತರಿಗೆ ಮಾತ್ರ ದೊರೆಯಬೇಕು. ಯಾವುದೇ ಲೋಪವಾಗಬಾರದು. ವರ್ತಕರಿಗೆ ಅವಕಾಶ ಕಡ್ಡಾಯವಾಗಿ ನೀಡಬಾರದು. ಲಾರಿಗಳಲ್ಲಿ ತರುವ ಉತ್ಪನ್ನಗಳನ್ನು ಖರೀದಿಸಬೇಡಿ. ಯಾವುದೇ ಲೋಪ ವಾದರೂ ನಾನೇ ಖುದ್ದಾಗಿ ಬಂದು ತಪ್ಪೆಸಗಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಲು ಮುಂದಾಗುತ್ತೇನೆ ಎಚ್ಚರಿಕೆ ಎಂದು ವಾರ್ನಿಂಗ್ ನೀಡಿದರು. ಪುರಸಭೆ ಹಿರಿಯ ಸದಸ್ಯರಾದ ಭಂಡಾರಿ ಶ್ರೀನಿವಾಸ್, ತೋಟದ ಮನೆ ಮೋಹನ್, ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಲದ ನಿರ್ದೇಶಕ ದಿನೇಶ್, ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕ ಯೋಗಾನಂದ್, ತಾಲೂಕು ಆಹಾರ ನಿರೀಕ್ಷಕಿ ಶಿಲ್ಪಾ, ಎಪಿಎಂಸಿ ಕಾರ್ಯದರ್ಶಿ ಧರ್ಮರಾಜ್ ಮತ್ತಿತರರು ಇದ್ದರು.

16ಕೆಕೆಡಿಯು1.

ಕಡೂರು ಎಪಿಎಂಸಿ ಆವರಣದಲ್ಲಿ ಶಾಸಕ ಕೆ.ಎಸ್. ಆನಂದ್‌ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದರು.