ಸಾರಾಂಶ
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕ್ರಾಂತಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್ಗೆ ₹7280 ಹಾಗೂ ಹೆಸರುಕಾಳು ಪ್ರತಿ ಕ್ವಿಂಟಲ್ಗೆ ₹8682ಗಳಂತೆ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕ್ರಾಂತಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್ಗೆ ₹7280 ಹಾಗೂ ಹೆಸರುಕಾಳು ಪ್ರತಿ ಕ್ವಿಂಟಲ್ಗೆ ₹8682ಗಳಂತೆ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.ಈ ಕುರಿತು ಮಾಹಿತಿ ನೀಡಿದ ಅವರು, ಸೂರ್ಯಕಾಂತಿ ಉತ್ಪನ್ನವನ್ನು ಪ್ರತಿ ಎಕರೆಗೆ 3 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 15 ಕ್ವಿಂಟಲ್ ಖರೀದಿಸಲಾಗುತ್ತದೆ. ಖರೀದಿ ಹಾಗೂ ನೋಂದಣಿ ಪ್ರಕ್ರಿಯೆ ಆಗಸ್ಟ್ 27 ರಿಂದ ಪ್ರಾರಂಭಿಸಲಾಗಿದೆ. ಪ್ರಾರಂಭದಿಂದ 45 ದಿನಗಳವರೆಗೆ ರೈತರು ನೋಂದಣಿ ಮಾಡಿಕೊಳ್ಳಬಹುದು. ಖರೀದಿ ಅವಧಿಯನ್ನು 90 ದಿನಗಳವರೆಗೆ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.ಹೆಸರುಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 2 ಕ್ವಿಂಟಲ್ ಮತ್ತು ಗರಿಷ್ಠ ಪ್ರಮಾಣ ಪ್ರತಿ ರೈತರಿಂದ 10 ಕ್ವಿಂಟಲ್ ಖರೀದಿಸಲಾಗುತ್ತದೆ. ರೈತರ ನೋಂದಣಿ ಕಾರ್ಯ 45 ದಿನಗಳವರೆಗೆ ಹಾಗೂ ಖರೀದಿ ಅವಧಿ 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ಹೆಸರುಕಾಳು ಗುಣಮಟ್ಟದ ಪ್ರಕಾರ ಪ್ರತಿ ಕ್ವಿಂಟಲ್ ತೂಕದಲ್ಲಿ ಧೂಳು, ಹರಳು, ಹೊಟ್ಟು ಶೇ.2 ಬೆರೆಕೆ ಮಿಶ್ರಣ ಶೇ.3 ಹಾಳಾದ ಕಾಳುಗಳು ಶೇ.3, ಒಡೆದ ಕಾಳುಗಳು ಶೇ.4, ಅಪೂರ್ಣ ಮತ್ತು ಕುಗ್ಗಿದ ಕಾಳುಗಳು ಶೇ.3, ಹುಳುಕಾದ ಕಾಳುಗಳು ಶೇ.4 ಹಾಗೂ ತೇವಾಂಶ ಶೇ.12 ಇರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ ಎಫ್.ಐ.ಡಿ ನಂಬರ್ ಮತ್ತು ಆಧಾರ್ ಕಾರ್ಡ್ ಅನ್ನು ನೀಡಿ ನೋಂದಾಯಿಸತಕ್ಕದ್ದು, ಒಂದು ವೇಳೆ ಬೆಳೆ ದರ್ಶಕದಲ್ಲಿ ಮತ್ತು ಪ್ರೂಟ್ಸ್ ತಂತ್ರಾಂಶದಲ್ಲಿ ಬೆಳೆ ಬೆಳೆಯುವುದು ಕಂಡು ಬರದೇ ಇದ್ದಲ್ಲಿ ಹತ್ತಿರದ ಕೃಷಿ ಇಲಾಖೆಗೆ ಹೋಗಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ನೋಂದಣಿ ಸಮಯದಲ್ಲಿ ಆಧಾರ್ ಕಾರ್ಡ್, ಪಹಣಿ ಪತ್ರಿಕೆ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ಬುಕ್ ಪ್ರತಿ ಸಲ್ಲಿಸಬೇಕು ಎಂದರು.ಖರೀದಿ ಕೇಂದ್ರಗಳ ವಿವರ(ಸೂರ್ಯಕಾಂತಿ):
ಬಾಗಲಕೋಟೆ ತಾಲೂಕು ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಖಜ್ಜಿಡೋಣಿ, ಬಾದಾಮಿ ತಾಲೂಕು ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಕಗಲಗೊಂಬ, ಕೆಂದೂರ, ನಂದಿಕೇಶ್ವರ, ಹೆಬ್ಬಳ್ಳಿ, ಮುಧೋಳ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಜುನ್ನೂರ, ಬೀಳಗಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಸೊನ್ನ ಹಾಗೂ ಹುನಗುಂದ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.ಖರೀದಿ ಕೇಂದ್ರಗಳ ವಿವರ (ಹೆಸರುಕಾಳು):
ಬಾಗಲಕೋಟೆ ತಾಲೂಕಿನಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಬಾಗಲಕೋಟೆ (7353861868), ಪಿ.ಕೆ.ಪಿ.ಎಸ್ ಹಳ್ಳೂರು (9901325201), ಬೆನಕಟ್ಟಿ (9740406918), ಎಫ್.ಪಿ.ಒ ರೇಣುಕಾ, ಬಾದಾಮಿ ತಾಲೂಕಿನ ಟಿ.ಎ.ಪಿ.ಸಿ. ಬಾದಾಮಿ (9008116746), ಪಿ.ಕೆ.ಪಿ.ಎಸ್ ಬಾದಾಮಿ (9611358837), ಕೆರೂರ (9972301729), ಎಫ್.ಒ ಆಶಾಕಿರಣ (8073983080), ಮುಧೋಳ ತಾಲೂಕಿನ ಟಿ.ಎ.ಪಿ.ಎಂ.ಎಸ್ ಮುಧೋಳ (9242783318), ಎಫ್.ಓ.ಲೋಕಾಪೂರ (9880927310), ಎಫ್.ಓ.ಸರ್ವಬಂಧು (9844474344), ಇಳಕಲ್ಲ ಜಿ.ಎಫ್,ಪಿ.ಸಿ.ಎಲ್ (8660203311), ಹುನಗುಂದ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ (9480262655), ಎಫ್.ಒ. ಸುಳೇಭಾವಿ (9449762433, 9008215922), ಪಿ.ಕೆ.ಪಿ.ಎಸ್ ಮುಗನೂರ (8310324070) ನಂದವಾಡಗಿ (9902377067), ಜಮಖಂಡಿ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಜಮಖಂಡಿ (7019445935), ಎಫ್.ಒ.ತೊದಲಬಾಗಿ (9741998771), ಬೀಳಗಿ ಟಿ.ಎ.ಪಿ.ಸಿ.ಎಂ.ಎಸ್ (7019682890), ಪಿ.ಕೆ.ಪಿ.ಎಸ್ ಬೀಳಗಿ ಕ್ರಾಸ್ (9880376768).