ಸಾರಾಂಶ
ದಾಬಸ್‍ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯ ಶೃಂಗೇರಿ ಶಾಖಾ ಮಠದ ಶ್ರೀ ಪುರುಪೋತ್ತಮ ಭಾರತಿ ಸ್ವಾಮೀಜಿ ಬಹುಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ 4.25ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ರಂಗದೊರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಪಾಸಣೆ ನಡೆಸಿದ ವೈದ್ಯರು ಬಹುಅಂಗಾಂಗ ವೈಫಲ್ಯದಿಂದ ಶ್ರೀಗಳು ಬ್ರಹ್ಮೀಭೂತರಾಗಿದ್ದು, ಸಂಜೆ 6 ಗಂಟೆಗೆ ಶಾರದಾ ಮಠದ ಆವರಣದಲ್ಲಿ ಸ್ವಾಮೀಜಿಯವರ ಅಂತ್ಯಸಂಸ್ಕಾರ ನೆರವೇರಿತು.ಪೂರ್ವಾಶ್ರಮದ ಹಿನ್ನೆಲೆ:
ಆಂಧ್ರಪ್ರದೇಶದ ವಿಜಯವಾಡದಲ್ಲಿ ಸೆ.09, 1953ರಲ್ಲಿ ಸೇತು ಮಾಧವ ಅವದಾನಿ, ತಾಯಿ ಕಲ್ಯಾಣಿ ಬಾಲಾ ತ್ರಿಪುರಸುಂದರಮ್ಮರ ದಂಪತಿಯ ದ್ವಿತೀಯ ಪುತ್ರರಾಗಿ ಜನಿಸಿದರು. ವಿಜಯವಾಡದಲ್ಲಿ ತಮ್ಮ ಲೌಕಿಕ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ವಿಜಯವಾಡದ ಶೃಂಗೇರಿ ಮಠದಲ್ಲಿ ತಮ್ಮ ತಂದೆಯವರಿಂದಲೇ ವೇದ ವಿದ್ಯೆ ಅಭ್ಯಾಸ ಮಾಡಿ, ಕೃಷ್ಣಯಜುರ್ವೇದ, ಕ್ರಮಂತಗಳನ್ನು ಪೂರ್ಣಗೊಳಿಸಿ ಹಲವಾರು ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ವಿದ್ವಾನ್ ಮಂಕಾಬೂಡಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಹಾಗೂ ವೇಮೂರಿ ವೆಂಕಟೇಶ್ವರ ಸಿದ್ಧಾಂತಿ ಮಾರ್ಗದರ್ಶನದಲ್ಲಿ ಪಂಚ ಕಾವ್ಯ, ಜೋತಿಷ್ಯ ಶಾಸ್ತ್ರವನ್ನು ಕರತಲಾಮಲಕಗೊಳಿಸಿಕೊಂಡಿದ್ದರು.ಗಣಿತ ಶಾಸ್ತ್ರದ (ವೇದಿಕ್ ಮ್ಯಾತ್ಸ್)ಲ್ಲಿ ಪ್ರಭುತ್ವ ಸಾಧಿಸಿದ್ದರು. ಲೀಲಾವತಿ ಗಣಿತ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿದ್ದು ಶ್ರೀ ಪುರುಪೋತ್ತಮ ಭಾರತೀ ಸ್ವಾಮೀಜಿಯ ಮತ್ತೊಂದು ವೈಶಿಷ್ಟ್ಯ, ತರ್ಕ ಶಾಸ್ತ್ರ, ವೇದಾಂತ ಶಾಸ್ತ್ರ ಗ್ರಂಥ, ಗೀತಾ ಭಾಷ್ಯ, ಉಪನಿಷತ್ ಭಾಷ್ಯ, ಸೂತ್ರ ಭಾಷ್ಯ, ಪ್ರಸ್ಥಾನ ತ್ರಯ ಮುಂತಾದವುಗಳಲ್ಲಿ ಅದ್ಭುತ ಜ್ಞಾನ ಸಂಪಾದಿಸಿಕೊಂಡಿದ್ದರು.
12 ವರ್ಷಗಳ ಸೇವೆ:2014ರಲ್ಲಿ ಶಿವಗಂಗೆ ಶೃಂಗೇರಿ ಶಾಖಾ ಮಠದ ಪೀಠಾಧಪತಿಗಳಾಗಿ ಸೇವೆ ಆರಂಭಿಸಿದ ಶ್ರೀಗಳು, ಶ್ರೀ ಶಂಕರಚಾರ್ಯರ ದೇವಾಲಯ ನಿರ್ಮಾಣ ಮಾಡಿದ್ದಲ್ಲದೇ ಹಲ ಧಾರ್ಮಿಕ ಕಾರ್ಯಗಳನ್ನು ನಡೆಸಿದ್ದಾರೆ. ಅನ್ನಪೂರ್ಣೆಶ್ವರಿ ದಾಸೋಹ ಭವನ, ಯಾತ್ರಿ ನಿವಾಸ, 110 ಗೋವುಗಳ ಗೋ ಶಾಲೆ, ಸಂಸ್ಕೃತ ಪಾಠಶಾಲೆ ಇತರ ಸಾಮಾಜಿಕ ಕಾರ್ಯ ಮಾಡಿದ್ದಾರೆ.
ಅಂತಿಮ ವಿಧಿ-ವಿಧಾನ:ಮಠದ ಆಡಳಿತಾಧಿಕಾರಿ ಗಣೇಶ್ ಕನ್ನಡಪ್ರಭದೊಂದಿಗೆ ಮಾತನಾಡಿ, ಶ್ರೀಗಳು ಗುರುತಿಸಿದ ಜಾಗದಲ್ಲಿ, ಹಿರಿಯ ಶ್ರೀಗಳ ಅಧಿಷ್ಟನಾದ ಪಕ್ಕದಲ್ಲಿ ಶೃಂಗೇರಿ ಮಠದ 15 ಜನ ಋತ್ವಿಕರ ತಂಡ ಹಾಗೂ ಮಠದ ಸಾವಿರಾರು ಭಕ್ತರ ಸಮ್ಮುಖದಲ್ಲಿ, ಹಲವಾರು ಶ್ರೀಗಳ ಉಪಸ್ಥಿತಿಯಲ್ಲಿ ಅಂತಿಮ ನಮನ ನಡೆಯಲಿದ್ದು, ಸಂಜೆ 6 ಗಂಟೆಗೆ ಸಂಪೂರ್ಣ ಅಂತ್ಯ ಸಂಸ್ಕಾರ ಮುಕ್ತಾಯವಾಗಿದೆ ಎಂದರು.
ಕೋಟ್......................16 ಶತಮಾನದಿಂದ ಶೃಂಗೇರಿ ಶಾಖಾ ಮಠ ಪ್ರಾರಂಭವಾಗಿದ್ದು, ಈ ಪೀಠಕ್ಕೆ ದುಃಖದ ಸಮಯ, ಮೈಸೂರು ಮಹಾರಾಜರು ಈ ಮಠಕ್ಕೆ ಆಗಮಿಸಿದ್ದರು, ಶೃಂಗೇರಿ ಹಿರಿಯ ಸನ್ನಿದಾನಂಗಳ ಮಾರ್ಗದರ್ಶನದಂತೆ ಮುಂದಿನ ಆಡಳಿತ ಮುಂದುವರಿಯಲಿದೆ.
-ಅಶೋಕ್ ಹಾರನಹಳ್ಳಿ, ರಾಜ್ಯಾಧ್ಯಕ್ಷರು, ಅಖಿಲ ಭಾರತ ಬ್ರಾಹ್ಮಣ ಮಹಾಸಭಾಪೋಟೋ 3 :
ಬಹುಅಂಗಾಂಗ ವೈಫಲ್ಯದಿಂದ ವಿಧಿವಶರಾದ ಶೃಂಗೇರಿ ಶಾಖಾ ಮಠದ ಶ್ರೀ ಪುರುಪೋತ್ತಮ ಭಾರತಿ ಸ್ವಾಮೀಜಿ.ಪೋಟೋ 4 : ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠ.
;Resize=(128,128))
;Resize=(128,128))
;Resize=(128,128))
;Resize=(128,128))