ಸಾರಾಂಶ
ಗದಗ: ಮಾನವೀಯತೆ, ಅಹಿಂಸೆ, ಸತ್ಯ, ನಿಷ್ಠೆಯನ್ನು ಹಾಗೂ ಧರ್ಮಜಾಗೃತಿಯನ್ನು ಮೂಡಿಸುವ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಗುರುದೇವ ಪುಷ್ಕರ್ ಮುನಿಜಿ ತತ್ವ ಆದರ್ಶ ಮಾದರಿಯಾಗಿವೆ ಎಂದು ಆಚಾರ್ಯ ವಿಮಲಸಾಗರ ಸುರಜಿ ತಿಳಿಸಿದರು.ನಗರದ ಅಬ್ಬಿಗೇರಿ ಕಾಂಪೌಂಡ್(ತಿಸ್ ಬಿಲ್ಡಿಂಗ್) ಹತ್ತಿರದ ಜೈನ ಸ್ಥಾನಕ ಭವನದಲ್ಲಿ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ ಹಾಗೂ ವರ್ಧಮಾನ ಸ್ಥಾನಕವಾಸಿ ಜೈನ ಯುವಕ ಮಂಡಳದಿಂದ ನಡೆದ ಪುಷ್ಕರ ಮುನಿಜಿ ಮಹಾರಾಜ ಸಾಹೇಬರ 116ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪುಷ್ಕರ ಮುನಿಜಿ ಮಹಾರಾಜ ಸಾಹೇಬರ ಜಯಂತಿ ಕೇವಲ ಸಾಂಕೇತಿಕ ಕಾರ್ಯಕ್ರಮ ಆಗಬಾರದು. ಪುಷ್ಕರ ಮುನಿಜಿಯವರು ಬೋಧಿಸಿದ ಧರ್ಮ ಚಿಂತನೆ, ತತ್ವ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಮಹಾಪ್ರಸಾದದ ಭಕ್ತಿಸೇವೆಯನ್ನು ವರ್ಧಮಾನ ಸ್ಥಾನಕವಾಸಿ ಜೈನ ಯುವಕ ಮಂಡಳ, ಬಾಗಮಾರ ಇಂಡಸ್ಟ್ರೀಜ್, ಮರುಧರ ಎಲೆಕ್ಟ್ರಾನಿಕ್ಸ್, ಸಂಗಮ ಬಜಾರ, ಜನತಾ ಟ್ರೇಡರ್ಸ್, ಲಾಬಚಂದ ಲುಂಕಡ ವಹಿಸಿದ್ದರು.ಜೈನ ಯುವಕ ಮಂಡಳದ ಅಧ್ಯಕ್ಷ ರಾಹುಲ್‌ಕುಮಾರ ಬಾಫಣಾ, ಸಮಾಜದ ಹಿರಿಯರಾದ ರೂಪಚಂದ ಪಾಲರೇಚಾ, ದೀಪಕಚಂದ ಬಾಗಮಾರ, ದೀಪಕಚಂದ ತಾತೇಡ, ಪೃಥ್ವಿರಾಜ ಭಂಡಾರಿ, ಮೂಲಚಂದ ಸಂಕಲೇಚಾ, ನಲೀನ ಬಾಗಮಾರ, ನರೇಶ ಜೈನ್ ಸೇರಿದಂತೆ ಸಮಾಜದ ಹಿರಿಯರು ಯುವಕರು ಇದ್ದರು.9ರಂದು ಲಿಂ. ವೀರಗಂಗಾಧರ ಸ್ವಾಮಿಗಳ ಪುಣ್ಯಾರಾಧನೆ
ಲಕ್ಷ್ಮೇಶ್ವರ: ಸಮೀಪದ ಮುಕ್ತಿಮಂದಿರ ಭೂಕೈಲಾಸದ ಒಡೆಯ ಲಿಂ. ವೀರಗಂಗಾಧರ ಸ್ವಾಮಿಗಳ 43ನೇ ಪುಣ್ಯಾರಾಧನೆಯು ಅ. 9ರಂದು ನಡೆಯಲಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಹಾನ್ ಸಂದೇಶ ಸಾರಿಸುವ ರಂಭಾಪುರಿ ಜಗದ್ಗುರು ಲಿಂ. ವೀರಗಂಗಾಧರ ಮಹಾಸ್ವಾಮಿಗಳ ಪುಣ್ಯಾರಾಧನಾ ಮಹೋತ್ಸವವು ಅ. 9ರಂದು ಬೆಳಗ್ಗೆ ಆರಂಭವಾಗುವುದು. ಅಂದು ಬೆಳಗ್ಗೆ 7 ಗಂಟೆಗೆ ಕರ್ತೃ ಗದ್ದುಗೆ ಮಹಾಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ ಜರುಗುವುದು.ಸಂಜೆ ನಡೆಯುವ ಧರ್ಮ ಸಮಾರಂಭದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಸ್ವಾಮಿಗಳು ಧರ್ಮಸಭೆಯ ಸಾನ್ನಿಧ್ಯ ವಹಿಸಲಿದ್ದಾರೆ. ಸಭೆಯ ನೇತೃತ್ವವನ್ನು ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ನೊಣವಿನಕೇರಿಯ ಕರಿವೃಷಭಿ ಕೇಂದ್ರ ಸ್ವಾಮಿಗಳು ವಹಿಸುವರು. ಕಾರ್ಯಕ್ರಮದಲ್ಲಿ ವೀರಗಂಗಾಧರ ಪ್ರಶಸ್ತಿಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಂಪತಿಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.