ಪುತ್ತೂರು: ೪ ರಸ್ತೆಗಳ ಕಾಮಗಾರಿಗೆ ೮ ಕೋಟಿ ರು. ಅನುದಾನ ಬಿಡುಗಡೆ

| Published : Sep 30 2024, 01:21 AM IST

ಸಾರಾಂಶ

ತೀರಾ ನಾದುರಸ್ತಿಯಲ್ಲಿರುವ ಸಂಪೂರ್ಣ ಕೆಟ್ಟು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ರಸ್ತೆಗಳು ಬಹು ಬೇಡಿಕೆಯ ರಸ್ತೆಗಳಾಗಿದೆ. ಕರ್ನಾಟಕ ನೀರಾವರಿ ನಿಗಮದ ವಾರಾಹಿ ಯೋಜನೆಯಡಿ ಈ ಅನುದಾನ ಬಿಡುಗಡೆಗೊಂಡಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೪ ರಸ್ತೆಗಳ ಅಭಿವೃದ್ಧಿಗೆ ೮ ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ವಿಧಾನಸಭಾ ಕ್ಷೇತ್ರದ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ರಸ್ತೆಗಳಿಗೆ ತಲಾ ೫ ಕೋಟಿ ರು.ನಂತೆ ಅನುದಾನ ಬಿಡುಗಡೆಗೊಂಡಿದೆ. ತೀರಾ ನಾದುರಸ್ತಿಯಲ್ಲಿರುವ ಸಂಪೂರ್ಣ ಕೆಟ್ಟು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ರಸ್ತೆಗಳು ಬಹು ಬೇಡಿಕೆಯ ರಸ್ತೆಗಳಾಗಿದೆ. ಕರ್ನಾಟಕ ನೀರಾವರಿ ನಿಗಮದ ವಾರಾಹಿ ಯೋಜನೆಯಡಿ ಈ ಅನುದಾನ ಬಿಡುಗಡೆಗೊಂಡಿದೆ ಎಂದಿದ್ದಾರೆ.

ಅನುದಾನ ಬಿಡುಗಡೆಗೊಂಡಿರುವ ರಸ್ತೆಗಳು:ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ಶೇಖಮಲೆ-ದೇರ್ಲ ಸಂಪರ್ಕ ರಸ್ತೆ, ಕೆದಂಬಾಡಿ ಗ್ರಾ.ಪಂ. ವ್ಯಾಪ್ತಿಯ ಸಾರೆಪುಣಿ-ಕೋರಿಕ್ಕಾರು ಸಂಪರ್ಕ ರಸ್ತೆ, ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಪೆರ್ನೆ ವರೆಗೆ ಸಂಪರ್ಕ ರಸ್ತೆ ಮತ್ತು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾ.ಪಂ. ವ್ಯಾಪ್ತಿಯ ದೂಜಮೂಲ-ನೆಕ್ಕರೆ-ಮುಳಿಯ-ನೆಕ್ಕಿತಪುಣಿ ಸಂಪರ್ಕ ರಸ್ತೆಗಳು. ಈ ರಸ್ತೆಗಳಿಗೆ ಅನುದಾನ ನೀಡುವಂತೆ ಗ್ರಾಮಸ್ಥರಿಂದ ಬಂದ ಬೇಡಿಕೆಯ ಆಧಾರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಗಳು ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.