ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಬೀರಮಲೆ ಬೆಟ್ಟದಲ್ಲಿ ನಡೆದ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಬೀರಮಲೆ ಉತ್ಸವ -೨೦೨೬ ಕಾರ್‍ಯಕ್ರಮ

ಪುತ್ತೂರು : ಪುತ್ತೂರಿನ ಪ್ರೇಕ್ಷಣೀಯ ಸ್ಥಳವಾದ ಬೀರಮಲೆ ಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ೨ ಕೋಟಿ ರು. ಅನುದಾನ ನೀಡಲಾಗಿದ್ದು, ೧ ಕೋಟಿ ರು. ಮೊತ್ತದ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ೨ ಕೋಟಿ ರು. ಅನುದಾನ ನೀಡಲಾಗುವುದು. ಬೀರಮಲೆ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಬೀರಮಲೆ ಬೆಟ್ಟದಲ್ಲಿ ನಡೆದ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಬೀರಮಲೆ ಉತ್ಸವ -೨೦೨೬ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಅಧ್ಯಕ್ಷ ಎ. ಜಗಜೀವನ್ ದಾಸ್ ರೈ ಮಾತನಾಡಿ, ಪುತ್ತೂರಿನ ಎತ್ತರವಾದ ಪ್ರಕೃತಿ ರಮಣೀಯ ತಾಣವಾದ ಬೀರಮಲೆ ಬೆಟ್ಟದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಸೂರ್ಯನ ಪ್ರಕಾಶವನ್ನು ಕಾಣ ಬಹುದಾಗಿದೆ. ತಹಸೀಲ್ದಾರ್ ಕೋಚಣ್ಣ ರೈ ಅವರು ಬೀರಮಲೆ ಹಿಲ್ ಡೆವಲಪ್ಟೆಂಟ್ ಪ್ರಾಜೆಕ್ಟ್ ಅಡಿಯಲ್ಲಿ ಬೀರಮಲೆ ಬೆಟ್ಟದಲ್ಲಿ ಮಾಡಿದ ರಸ್ತೆ, ಪಾರ್ಕ್, ಡಿಜಿಟಲ್ ಲೈಟ್ಸ್, ಗಿಡಮರಗಳು ಅಭಿವೃದ್ಧಿ ಹೊಂದುತ್ತಾ ಬಂದಿದೆ ಎಂದರು. ಶಾಸಕ ಅಶೋಕ್ ರೈ ಅವರು ಬೀರಮಲೆ ಬೆಟ್ಟದ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಕೇವಲ ಆಶ್ವಾಸನೆ ನೀಡುವುದು ಮಾತ್ರವಲ್ಲ ನೀಡಿದ ಆಶ್ವಾಸನೆಯ ಫಾಲೋಅಪ್ ಮಾಡುತ್ತಾರೆ. ವರ್ಣರಂಜಿತ ವಿದ್ಯುತ್‌ ದೀಪಗಳು ಹೀಗೆ ಹಲವು ಅಭಿವೃದ್ಧಿ ಕಾರ್‍ಯಗಳು ಆಗಿದ್ದು, ಮುಂದಿನ ದಿನಗಳಲ್ಲಿ ಬೀರಮಲೆ ಬೆಟ್ಟ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಆಗಬೇಕಿದೆ. ಬೀರಮಲೆ ಬೆಟ್ಟ ಪ್ರವಾಸೋದ್ಯಮ ತಾಣವಾಗಿ ಪರಿವರ್ತನೆ ಹೊಂದುವುದು ನಮ್ಮ ಆದ್ಯತೆಯಾಗಿದೆ ಎಂದರು.ಪುತ್ತೂರು ಡಿವೈಎಸ್‌ಪಿ ಪ್ರಮೋದ್ ಕುಮಾರ್, ಪುತ್ತೂರು ಎಸಿಎಫ್ ಸುಬ್ಬಯ್ಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಉಪಾಧ್ಯಕ್ಷೆ ಡಾ. ಸತ್ಯವತಿ ಆಳ್ವ ಕಾರ್‍ಯದರ್ಶಿ ನಿತಿನ್ ಪಕ್ಕಳ, ಕಾರ್‍ಯಕಾರಿ ಸಮಿತಿ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಶಿವರಾಮ ಆಳ್ವ, ಕೇಶವ ನಾಯಕ್, ಜೈರಾಜ್ ಭಂಡಾರಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರೊ. ಝೇವಿಯರ್ ಡಿಸೋಜ ವಂದಿಸಿದರು.