ಪುತ್ತೂರು: ಜು.13ರಂದು ಮರಾಟಿ ಸಮುದಾಯದ ವಧು-ವರಾನ್ವೇಷಣಾ ಸಮಾವೇಶ

| Published : Jul 04 2025, 11:47 PM IST

ಪುತ್ತೂರು: ಜು.13ರಂದು ಮರಾಟಿ ಸಮುದಾಯದ ವಧು-ವರಾನ್ವೇಷಣಾ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕ-ಯುವತಿಯರಿಗೆ ಮೊದಲ ಬಾರಿಗೆ ‘ಕಂಕಣಭಾಗ್ಯ’ ಕಲ್ಪಿಸುವ ವಧು-ವರಾನ್ವೇಷಣಾ ಸಮಾವೇಶವನ್ನು ಸಮಾಜಸೇವಾ ಸಂಘ, ಮರಾಟಿ ಮಹಿಳಾವೇದಿಕೆ ಮತ್ತು ಮರಾಟಿ ಯುವ ವೇದಿಕೆಗಳ ಸಹಯೋಗದೊಂದಿಗೆ ಜು.೧೩ರಂದು ಮರಾಟಿ ಸಮಾಜ ಮಂದಿರ ಕೊಂಬೆಟ್ಟು ಇಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರುಮರಾಟಿ ಸಮುದಾಯದ ವಿವಾಹ ಯೋಗ್ಯ ಯುವಕ-ಯುವತಿಯರಿಗೆ ಮೊದಲ ಬಾರಿಗೆ ‘ಕಂಕಣಭಾಗ್ಯ’ ಕಲ್ಪಿಸುವ ವಧು-ವರಾನ್ವೇಷಣಾ ಸಮಾವೇಶವನ್ನು ಸಮಾಜಸೇವಾ ಸಂಘ, ಮರಾಟಿ ಮಹಿಳಾವೇದಿಕೆ ಮತ್ತು ಮರಾಟಿ ಯುವ ವೇದಿಕೆಗಳ ಸಹಯೋಗದೊಂದಿಗೆ ಜು.೧೩ರಂದು ಮರಾಟಿ ಸಮಾಜ ಮಂದಿರ ಕೊಂಬೆಟ್ಟು ಇಲ್ಲಿ ನಡೆಯಲಿದೆ.ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಬಡಾವು ಈ ಕುರಿತು ಮಾಹಿತಿ ನೀಡಿದರು.

ವಿವಾಹ ಪೂರ್ವದಲ್ಲಿ ಮಧ್ಯವರ್ತಿಗಳಿಂದ ಉಂಟಾಗುವ ದುಂದುವೆಚ್ಚ ತಪ್ಪಿಸುವುದು. ಮದುವೆ ನಿಧಾನಗತಿ ತಡೆಯುವುದು. ಯುವಕ-ಯುವತಿಯರು ಮುಕ್ತವಾಗಿ ವಿಚಾರವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಸಮಾವೇಶದ ಉದ್ದೇಶ. ಯಾವುದೇ ಪ್ರಾದೇಶಿಕ ಮತ್ತು ಭೌಗೋಳಿಕಾ ನಿರ್ಬಂಧ ಇಲ್ಲದೆ ಕಾನೂನು ಪ್ರಕಾರ ವಯಸ್ಕರಾದ ಯುವಕರು-ಯುವತಿಯರು ಹಾಗೂ ಅವರ ೩ ಮಂದಿ ಪೋಷಕರೊಂದಿಗೆ ಈ ಕಾರ್ಯಕ್ರಮ ಭಾಗವಹಿಸಬಹುದು ಎಂದು ತಿಳಿಸಿದರು.ಮರಾಟಿ ಸಮಾಜಸೇವಾ ಸಂಘ ತನ್ನ ಸ್ವರ್ಣಮಹೋತ್ಸವ ಆಚರಿಸುವ ಹೊಸ್ತಿಲಲ್ಲಿದ್ದು, ಈ ಕಾರ್ಯಕ್ರಮ ಬಳಿಕ ಮರಾಟಿ ಸೇವಾ ಸಮಾಜದಲ್ಲಿ ವಿವಾಹ ವೇದಿಕೆ ಅಸ್ತಿತ್ವಕ್ಕೆ ತರಲಾಗುವುದು ಎಂದು ಹೇಳಿದರು.

ಬೆಳಗ್ಗೆ ೧೦ ಗಂಟೆಗೆ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಆರಂಭವಾಗುವ ಈ ಕಾರ್ಯಕ್ರಮವನ್ನು ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಕೆ.ಸುಂದರ ನಾಯ್ಕ ಬಪ್ಪಳಿಗೆ ಉದ್ಘಾಟಿಸಲಿದ್ದಾರೆ. ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಶಿಪ್ರಭಾ ಎಚ್, ಆಸ್ವಿನ್ ವಾಲ್ ಕಂಪೆನಿಯ ಸೀನಿಯರ್ ಮ್ಯಾನೇಜರ್ ಮಹಾಲಿಂಗ ನಾಯ್ಕ್, ವಕೀಲರಾದ ಸತೀಶ್ ನಾಯ್ಕ್, ನಿವೃತ್ತ ಶಿಕ್ಷಕ ಬಾಲಕೃಷ್ಣ ನಾಯ್ಕ್ ಹಾಗೂ ಬಂಟ್ವಾಳ ಮರಾಟಿ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮರಾಟಿ ಸೇವಾಸಮಾಜದ ಕಾರ್ಯದರ್ಶಿ ಶೀನಪ್ಪ ನಾಯ್ಕ್ ಎಸ್ ನೆಲ್ಯಾಡಿ, ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್, ಯುವವೇದಿಕೆಯ ಅಧ್ಯಕ್ಷ ವಸಂತ ನಾಯ್ಕ್ ಆರ್ಯಾಪು ಹಾಗೂ ಸಂಚಾಲಕ ಪೂವಪ್ಪ ನಾಯ್ಕ್ ಕುಂಞಕುಮೇರು ಇದ್ದರು.