ಪುತ್ತೂರು ವಿವೇಕಾನಂದ ಕಾಲೇಜ್‌:11ರಂದು ‘ವಿವೇಕ ವಿಜಯ’ ವಿಶೇಷ ಉಪನ್ಯಾಸ

| Published : Oct 08 2025, 01:01 AM IST

ಪುತ್ತೂರು ವಿವೇಕಾನಂದ ಕಾಲೇಜ್‌:11ರಂದು ‘ವಿವೇಕ ವಿಜಯ’ ವಿಶೇಷ ಉಪನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮಿ ವಿವೇಕಾನಂದ ಅವರ ಉಪನ್ಯಾಸದ ೧೩೨ನೇ ವರ್ಷದ ಆಚರಣೆಯ ಹಿನ್ನಲೆಯಲ್ಲಿ ಪುತ್ೂತರು ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವೈದೇಹಿ ಸಭಾಂಗಣದಲ್ಲಿ ೧೧ರಂದು ‘ವಿವೇಕ ವಿಜಯ’ ವಿಶೇಷ ಉಪನ್ಯಾಸಗಳ ಕಾರ್ಯಕ್ರಮ ನಡೆಯಲಿದೆ.

ಪುತ್ತೂರು: ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆ ಎತ್ತಿಹಿಡಿದ ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದ ಅವರ ಉಪನ್ಯಾಸದ ೧೩೨ನೇ ವರ್ಷದ ಆಚರಣೆಯ ಹಿನ್ನಲೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವೈದೇಹಿ ಸಭಾಂಗಣದಲ್ಲಿ ೧೧ರಂದು ‘ವಿವೇಕ ವಿಜಯ’ ವಿಶೇಷ ಉಪನ್ಯಾಸಗಳ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಪಿ. ತಿಳಿಸಿದರು.

ಮಂಗಳವಾರ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹಾಗೂ ಶಿಕ್ಷಕರಿಗಾಗಿ ಪೂರ್ವಾಹ್ನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ೪.೩೦ಕ್ಕೆ ಸಾರ್ವಜನಿಕರಿಗಾಗಿ ‘ಸಿಂದೂರ-ಭಾರತದ ವಿಶ್ವರೂಪ’ ಎಂಬ ವಿಚಾರದ ಬಗ್ಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಲಿದ್ದಾರೆ. ಪುತ್ತೂರಿನ ಅರ್ಥೋಪೆಡಿಕ್ ಸರ್ಜನ್ ಡಾ.ಸಚಿನ್ ಶಂಕರ್ ಹಾರಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮೊದಲ ಅವಧಿ ಬೆಳಗ್ಗೆ ೯.೪೫ಕ್ಕೆ ಆರಂಭವಾಗಲಿದ್ದು, ಕೇಶವ ಸಂಕಲ್ಪ ಸಭಾಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಭಾರತ ವಂದನಾ ವಿವೇಕ ಚಿಂತನಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಚಂಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಪಿ ಅಧ್ಯಕ್ಷತೆ ವಹಿಸಲಿದ್ದಾರೆ.ಬೆಳಗ್ಗೆ ೧೧.೩೦ಕ್ಕೆ ವೈದೇಹಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ರಾಷ್ಟ್ರ ರಕ್ಷಣಾ ವಿವೇಕ ಶಿಕ್ಷಣ ಕಾರ್ಯಕ್ರಮ ನಡೆಯಲಿದೆ. ದಿಕ್ಸೂಚಿ ಭಾಷಣವನ್ನು ಚಕ್ರವರ್ತಿ ಸೂಲಿಬೆಲೆ ಮಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಆಡಳಿತ ಮಂಡಳಿ ಸಂಚಾಲಕ ಎಂ.ಗೋಪಾಲಕೃಷ್ಣ ಉಪಸ್ಥಿತರಿರುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಲೇಜು ಆಡಳಿತ ಸಮಿತಿ ಕೋಶಾಧಿಕಾರಿ ಸಚಿನ್ ಶೆಣೈ, ನಿರ್ದೇಶಕರು ಡಾ.ಕೃಷ್ಣಪ್ರಸನ್ನ, ಪ್ರಾಂಶುಪಾಲ್ ದೇವಿಚರಣ್ ರೈ, ಶಿಕ್ಷಣ ಸಂಯೋಜಕ ಶ್ರೀವತ್ಸ ಇದ್ದರು.