ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀಕಟ್ಟೆ ಸಮಿತಿಯ ಜಂಟೀ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ಕಾರ್ಯಕ್ರಮ
ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀಕಟ್ಟೆ ಸಮಿತಿಯ ಜಂಟೀ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ಕಾರ್ಯಕ್ರಮ ಶುಕ್ರವಾರ ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಗಾಂಧೀಕಟ್ಟೆಯಲ್ಲಿ ನಡೆಸಲಾಯಿತು. ಗಾಂಧೀ ಪ್ರತಿಮೆಗೆ ಹಾರಾರ್ಪಣೆ ಮಾಡಿದ ಪುತ್ತೂರು ತಹಸೀಲ್ದಾರ್ ಎಸ್.ಬಿ ಕೂಡಲಗಿ ಅವರು ಮಾತನಾಡಿ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಪುಣ್ಯತಿಥಿಯ ದಿನವನ್ನು ದೇಶದಾದ್ಯಂತ ನಡೆಸಲಾಗುತ್ತಿದೆ. ಅವರ ತತ್ವ, ಅದರ್ಶ, ಸಿದ್ದಾಂತಗಳು ನಮ್ಮ ಜೀವನಕ್ಕೆ ಮಾರ್ಗದರ್ಶನವಾಗಿದ್ದು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ನಗರ ಸಭಾ ಪೌರಾಯುಕ್ತೆ ವಿದ್ಯಾ ಕಾಳೆ ಮಾತನಾಡಿ, ಮಹಾತ್ಮ ಗಾಂಧೀಜಿಯವರು ತಾನು ಹೇಳಿದಂತೆ ಜೀವನದಲ್ಲಿ ಅಳವಡಿಸಿಕೊಂಡವರು. ಹೀಗಾಗಿ ಅವರು ನಮಗೆ ಆದರ್ಶರು. ಸತ್ಯ, ಅಹಿಂಸೆಯ ಮೂಲಕ ಜಗತ್ತಿಗೆ ಪ್ರೇರಣೆ ನೀಡಿದ ಗಾಂಧಿಯವರು ವಿಶ್ವ ಕಂಡ ದಾಶರ್ನಿಕರು. ಅವರ ಆದರ್ಶಗಳನ್ನು ಯುವ ಜನತರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ದೇಶ ಜಗತ್ತು ಕಂಡ ಮಹಾತ್ಮ ಗಾಂದೀ ಪುಣ್ಯತಿಥಿ ನಡೆಯುತ್ತಿದೆ. ದೇಶದ ಅಖಂಡತೆಗಾಗಿ ಅಹಿಂಸೆಯ ಹೋರಾಟದ ಮೂಲಕ ತನ್ನ ಜೀವನವನ್ನೇ ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡಿದವರು. ಇಂದು ಅವರನ್ನು ಬಲಿ ಪಡೆದ ನಾಥೂರಾಮ್ ಗೂಡ್ಸೆಯವರನ್ನೇ ಬಿಂಬಿಸುವ ಕೆಲಸವಾಗುತ್ತಿದ್ದು ದೇಶದ ಜನತೆ ಅದನ್ನು ಮೆಚ್ಚುವುದಿಲ್ಲ ಎಂದರು.ಕಾಂಗ್ರೆಸ್‌ನ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ, ಜಿಲ್ಲಾ ಉಪಾಧ್ಯಕ್ಷರು, ಪುತ್ತೂರು ಬ್ಲಾಕ್‌ನ ಉಸ್ತುವಾರಿಯಾಗಿರುವ ಚಿತ್ತರಂಜನ್ ಶೆಟ್ಟಿ, ಗಾಂಧೀಕಟ್ಟೆ ಸಮಿತಿ ಕಾರ್ಯದರ್ಶಿ ಸಯ್ಯದ್ ಕಮಲ್, ರೋಷನ್ ರೈ ಬನ್ನೂರು, ಶಿವಪ್ರಸಾದ್ ಶೆಟ್ಟಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಗ್ನಿಶಾಮಕ ದಳದ ಶಂಕರ್, ಕಂದಾಯ ನಿರೀಕ್ಷಕ ಗೋಪಾಲ್ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ವಂದಿಸಿದರು.