ಪುತ್ತೂರು: ಇತ್ತೀಚೆಗೆ ಬಿಜೆಪಿಯವರು ನಡೆಸಿದ ಪ್ರತಿಭಟನೆಯೊಂದರಲ್ಲಿ ಶಾಸಕ ಅಶೋಕ್ ರೈ ಭಾರತ್ ಮಾತಾ ಕೀ ಜೈ ಅನ್ತಾರೆ. ಮೋದಿಜಿಗೆ ಬೈತಾರೆ ಎಂಬ ಹೇಳಿಕೆ ನೀಡಿದ್ದಾರೆ. ಭಾರತ್ ಮಾತಾ ಕೀ ಜೈ ಅನ್ನಲು ಬಿಜೆಪಿಯವರು ಪೇಟೆಂಟ್ ತಗೊಂಡಿದ್ದಾರಾ? ನನ್ನ ಕೊನೆಯ ಉಸಿರು ಇರುವವರೆಗೆ ಭಾರತ್ ಮಾತಾ ಕೀ ಜೈ ಅನ್ನುತ್ತೇನೆ. ನಾನೊಬ್ಬ ಹಿಂದೂ ಅನ್ನುತ್ತೇನೆ. ಇದಕ್ಕೆ ಅವರ ಅಪ್ಪಣೆ ಬೇಕಾಗಿಲ್ಲ ಎಂದು ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಹೇಳಿದ್ದಾರೆ. ಮೂವರು ಫಲಾನುಭವಿಗಳಿಗೆ ಪುತ್ತೂರು ಶಾಸಕರು ೯೪ಸಿ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಬಿಜೆಪಿ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯಲ್ಲಿ ಶಾಸಕರ ವಿರುದ್ದ ಹೇಳಿಕೆ ನೀಡಲಾಗಿತ್ತು. ಈ ಬಗ್ಗೆ ಸೋಮವಾರ ತನ್ನ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಪ್ರತಿಭಟನೆಯಲ್ಲಿ ಒಬ್ಬರು ‘ಅವನ ಅಪ್ಪನ ಜಾಗ ಕೊಡುವುದಾ’ ಎಂದು ತನ್ನ ತಂದೆಗೆ ಬೈದು ಅವಮಾನಿಸಿದ್ದಾರೆ. ರಾಜಕೀಯದಲ್ಲಿ ಟೀಕೆಗಳು ಸಹಜ. ಆದರೆ ಸಂಸ್ಕಾರಯುತ ಅಪ್ಪ-ಅಮ್ಮನಿಗೆ ಹುಟ್ಟಿದ ಯಾರೂ ಇನ್ನೊಬ್ಬರ ತಂದೆಗೆ ಬೈಯುವ ಕೆಲಸ ಮಾಡುವುದಿಲ್ಲ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಆದರೆ ನಾನು ಆತನ ವಿರುದ್ದ ಕಟು ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಂಡಿರುವ ಬಂಟ್ವಾಳ ತಾಲೂಕು ವ್ಯಾಪ್ತಿಯ ಮೂವರಿಗೆ ೯೪ಸಿ ಹಕ್ಕುಪತ್ರ ನೀಡಲು ವಿಳಂಬವಾಗಲು ಕಾರಣ ಬಿಜೆಪಿಯ ಶಾಸಕರು ಎಂದು ಆರೋಪಿಸಿದ ಶಾಸಕರು, ಆ ಮೂರು ಮನೆಯವರು ೨೦೨೦ರಲ್ಲಿ ಅರ್ಜಿ ನೀಡಿದ್ದರು. ಈಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರು ೨೦೨೩ರವರೆಗೆ ಶಾಸಕರಾಗಿದ್ದರು. ಅರ್ಜಿ ನೀಡಿದವರು ನಿರಂತರ ಓಡಾಟ ನಡೆಸಿದ್ದರೂ ಅವರು ಕೂಡ ಹಕ್ಕುಪತ್ರ ನೀಡಿರಲಿಲ್ಲ. ಪ್ರತಿಭಟನೆ ನಡೆಸುವ ವಾರದ ಮೊದಲು ಫಲಾನುಭವಿಗಳು ನನ್ನ ಕಚೇರಿಗೆ ಆಗಮಿಸಿದ್ದರು. ನಾನು ಅರ್ಜಿ ನೀಡುವಂತೆ ತಿಳಿಸಿದ್ದೆ. ಅದರಂತೆ ಮೇ ೧೪ರಂದು ಅರ್ಜಿ ನೀಡಿದ್ದರು. ಮೇ ೧೫ರಂದು ಪ್ರತಿಭಟನೆ ನಡೆಸಿದ್ದಾರೆ. ಹಕ್ಕುಪತ್ರ ವಿಳಂಬ ಮಾಡಿರುವ ಆರೋಪದಿಂದ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅದಕ್ಕಾಗಿ ಈ ಮಾಹಿತಿ ನೀಡುತ್ತಿದ್ದೇನೆ ಎಂದು ಹೇಳಿದರು.ಉಸಿರಿರೋ ತನಕ ಭಾರತ್ ಮಾತಾಕಿ ಜೈ ಅನ್ನುತ್ತೇನೆ, ನಾನೊಬ್ಬ ಹಿಂದೂ: ಅಶೋಕ್ ರೈ
ಇತ್ತೀಚೆಗೆ ಬಿಜೆಪಿಯವರು ನಡೆಸಿದ ಪ್ರತಿಭಟನೆಯೊಂದರಲ್ಲಿ ಶಾಸಕ ಅಶೋಕ್ ರೈ ಭಾರತ್ ಮಾತಾ ಕೀ ಜೈ ಅನ್ತಾರೆ. ಮೋದಿಜಿಗೆ ಬೈತಾರೆ ಎಂಬ ಹೇಳಿಕೆ ನೀಡಿದ್ದಾರೆ. ಭಾರತ್ ಮಾತಾ ಕೀ ಜೈ ಅನ್ನಲು ಬಿಜೆಪಿಯವರು ಪೇಟೆಂಟ್ ತಗೊಂಡಿದ್ದಾರಾ? ನನ್ನ ಕೊನೆಯ ಉಸಿರು ಇರುವವರೆಗೆ ಭಾರತ್ ಮಾತಾ ಕೀ ಜೈ ಅನ್ನುತ್ತೇನೆ. ನಾನೊಬ್ಬ ಹಿಂದೂ ಅನ್ನುತ್ತೇನೆ. ಇದಕ್ಕೆ ಅವರ ಅಪ್ಪಣೆ ಬೇಕಾಗಿಲ್ಲ ಎಂದು ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಹೇಳಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.