ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ೨೦೨೫-೨೬ ನೇ ಶೈಕ್ಷಣಿಕ ವರ್ಷದ ಕ್ರೀಡಾಕೂಟ ಬುಧವಾರ ನಡೆಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವೊಕೇಟ್‌ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ೨೦೨೫-೨೬ ನೇ ಶೈಕ್ಷಣಿಕ ವರ್ಷದ ಕ್ರೀಡಾಕೂಟ ಬುಧವಾರ ನಡೆಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವೊಕೇಟ್‌ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯವಿದ್ದು, ಸರ್ಕಾರವೂ ಕೂಡ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.ಅತಿಥಿಗಳಾದ ಬಾಲಕೃಷ್ಣ ಬಸ್ತಿ ಅವರು ಕ್ರೀಡೆಯಲ್ಲಿ ಸೋಲು- ಗೆಲುವು ಇದ್ದದ್ದೆ ಒಬ್ಬ ಸೋತಾಗ ಮಾತ್ರ ಒಬ್ಬ ಗೆಲ್ಲಲು ಸಾಧ್ಯ ಎನ್ನುವುದರ ಜೊತೆಗೆ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಇರುವವನೇ ನಿಜವಾದ ಕ್ರೀಡಾಪಟು ಎಂದರು. ಸಂಸ್ಥೆಯ ಕ್ರೀಡಾಪಟುಗಳಾದ ಕೌಶಿಕ್, ಚತುರ್ಥ್, ಕಲ್ಪನಾ, ರಕ್ಷಿತ್, ಪ್ರತೀಕ್ಷಾ ಅವರ ನೇತೃತ್ವದಲ್ಲಿ ಸವಣೂರಿನ ಪದ್ಮಾವತಿ ಅಮ್ಮನವರ ಬಸದಿಯಲ್ಲಿ ಪೂಜೆಗೊಂಡ ಕ್ರೀಡಾಜ್ಯೋತಿಯು ಆಗಮಿಸಿತು. ಕ್ರೀಡಾ ಜ್ಯೋತಿಯನ್ನು ಮುಖ್ಯ ಅತಿಥಿಗಳಾಗಿದ್ದ ಬಾಲಕೃಷ್ಣ ಬಸ್ತಿ ಅವರ ಕೈಗೆ ಹಸ್ತಾಂತರಿಸಲಾಯಿತ್ತು. ಶಾಂತಿಯ ಸಂಕೇತವಾದ ಪಾರಿವಾಳವನ್ನು ನಿಸರ್ಗಕ್ಕೆ ಹಾರಿಸಿ ಬಿಡಲಾಯಿತು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ರಶ್ಮಿ ಅಶ್ವಿನ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಕ್ರೀಡಾ ಜೊತೆ ಕಾರ್ಯದರ್ಶಿ ಸರಸ್ವತಿ ಇದ್ದರು. ಕ್ರೀಡಾ ಕಾರ್ಯದರ್ಶಿ ಪವನ್ ಎಚ್.ಎಸ್ ಕ್ರೀಡಾಪಟುಗಳಿಗೆ ಪ್ರತಿಜ್ಞೆ ಬೋಧಿಸಿದರು. ವಿದ್ಯಾರ್ಥಿಗಳಾದ ದೀಕ್ಷಿತ್ ಸ್ವಾಗತಿಸಿದರು. ಕಲ್ಪನಾ ವಂದಿಸಿದರು. ಅಲಿಮತ್ ಸಝಾನ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಭರತ್ ಎಂ.ಎಲ್ ಮಾರ್ಗದರ್ಶನ ನೀಡಿದರು.