ಪುತ್ತೂರು: ರಾಷ್ಟ್ರ ಮಟ್ಟದ ಜೆ.ಇ.ಇ. ಮೈನ್ಸ್-೨೦೨೬ ರ ದ್ವಿತೀಯ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಹಲವು ವಿದ್ಯಾರ್ಥಿಗಳು ೯೦ ಕ್ಕೂ ಅಧಿಕ ಪರ್ಸೆಂಟೈಲ್‌ಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಶಾಲ್ ಪಿ (ಪುತ್ತೂರು ಪಡ್ನೂರಿನ ವಿಠ್ಠಲ ಪಿ ಹಾಗೂ ರೇಷ್ಮಾ ದಂಪತಿಗಳ ಪುತ್ರ) ಅವರು೯೮.೪೨ ಪರ್ಸೆಂಟೈಲ್ ಗಳಿಸುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಅತ್ಯುತ್ತಮ ಅಂಕಗಳನ್ನು (ಪರ್ಸೆಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ ಹೀಗಿದೆ: ಧನ್ವಿ ಆರ್ ಬಿ ೯೫.೯೩ ಪರ್ಸೆಂಟೈಲ್ (ಉರಿಮಜಲಿನ ರಾಘವ ಗೌಡ ಹಾಗೂ ಭಾರತಿ ದಂಪತಿ ಪುತ್ರಿ), ಡಿ ಬಿ ನಾಗ ಅಚ್ಯುತ್ ೯೫.೨೮ ಪರ್ಸೆಂಟೈಲ್ (ತುಮಕೂರು ತಿಪಟೂರಿನಂಗಡಿ ಎನ್ ಬದ್ರಿನಾಥ್ ಹಾಗೂ ಡಿ ಬಿ ರಶ್ಮಿ ದಂಪತಿ ಪುತ್ರ), ಮೋಕ್ಷಿತ್ ಪಿ ಎಸ್ ೯೫.೦೩ ಪರ್ಸೆಂಟೈಲ್ (ಶಾಂತಿಗೋಡಿನ ಪಿ ಎಸ್ ಸತೀಶ್ ಹಾಗೂ ರೂಪಲತಾ ದಂಪತಿ ಪುತ್ರ), ಅದಿತಿ ಯು ೯೪.೭೦ ಪರ್ಸೆಂಟೈಲ್ (ಬೆಂಗಳೂರಿನ ಉಮಾ ಶಂಕರ್ ಹಾಗೂ ಸುಮಾ ಕೆ ಡಿ ದಂಪತಿ ಪುತ್ರಿ), ಚೇತನ್ ಕೆ ವಿ ೯೪.೦೮ ಪರ್ಸೆಂಟೈಲ್( ಪಡ್ನೂರಿನ ವಿಶ್ವನಾಥ ಗೌಡ ಕೆ ಹಾಗೂ ಗಿರಿಜಾ ದಂಪತಿ ಪುತ್ರ), ಅಮೋಘ ಕೃಷ್ಣ ಕೆ ೯೨.೫೨ಪರ್ಸೆಂಟೈಲ್(ನೆಹರೂ ನಗರದ ಬಾಲಕೃಷ್ಣ ಭಟ್ ಕೆ ಹಾಗೂ ಸುಮಿತ್ರಾ ಕೆ ದಂಪತಿ ಪುತ್ರ), ಮಂಗಳಾಮೃತ ಕೆ ಆರ್ ೯೧.೯೮ ಪರ್ಸೆಂಟೈಲ್ (ಸುಳ್ಯ ಜಾಲ್ಸೂರಿನ ರವಿರಾಜ್ ಕೆ ಹಾಗೂ ವಾಣಿ ಕುಮಾರಿ ಎ ದಂಪತಿ ಪುತ್ರಿ), ಅಭಿರಾಮ್ ಭಟ್ ೯೧.೪೪ ಪರ್ಸೆಂಟೈಲ್ (ನರಿಕೊಂಬಿನ ವಸಂತ್ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ ಕೆ ದಂಪತಿ ಪುತ್ರ)¸ ಪ್ರತ್ಯೂಷ್ ಆರ್ ವೈ ೯೦.೨೫ ಪರ್ಸೆಂಟೈಲ್ (ಬನ್ನೂರಿನ ರಾಘವೇಂದ್ರ ಕೆ ಆರ್ ಹಾಗೂ ಶಾಂತಿ ಕೆ ಆರ್ ದಂಪತಿ ಪುತ್ರ), ಹಿತೈಷಿ ಆಳ್ವ ೯೦.೦೩ ಪರ್ಸೆಂಟೈಲ್ (ಹಾರಾಡಿಯ ಅಶ್ವಿನ್ ಬಿ ಎಚ್ ಹಾಗೂ ರಜನಿ ರೈ ಬಿ ದಂಪತಿ ಪುತ್ರಿ), ಹೇಮಂತ್ ಕುಮಾರ್ ಕೆ ವೈ ೮೯.೭೪ ಪರ್ಸೆಂಟೈಲ್ (ಪಾಣಾಜೆಯ ಕೃಷ್ಣಪ್ಪ ಮೂಲ್ಯ ಹಾಗೂ ಯಶೋಧ ವಿ ದಂಪತಿಗಳ ಪುತ್ರ), ತೀರ್ಥಾ ಶೆಟ್ಟಿ ೮೮.೧೫ ಪರ್ಸೆಂಟೈಲ್ (ಬಂಟ್ವಾಳದ ಮಣಿನಾಲ್ಕೂರಿನ ರಾಜೇಶ್ ಶೆಟ್ಟಿ ಹಾಗೂ ಸುಮಲತಾ ದಂಪತಿಗಳ ಪುತ್ರಿ) ¸ ಸಪ್ತಮಿ ವೈ ಪಿ ೮೭.೬೧ ಪರ್ಸೆಂಟೈಲ್ (ಮೈಸೂರಿನ ಹೂಟಗಳ್ಳಿಯ ಪೂಣಚ್ಚ ವೈ ಪಿ ಹಾಗೂ ಜಯಂತಿ ಕೆ ಪಿ ದಂಪತಿ ಪುತ್ರಿ), ಅಜೇಯ ರಾಮ್ ೮೬.೮೪ ಪರ್ಸೆಂಟೈಲ್ (ಉರಿಮಜಲಿನ ಕೇಶವ ಮೂರ್ತಿ ಸಿ ಹಾಗೂ ಗೀತಾಲಕ್ಷ್ಮೀ ದಂಪತಿಗಳ ಪುತ್ರ), ಪೂರ್ವಿಕಾ ಕೆ.ಎಸ್ ೮೬.೪೮ ಪರ್ಸೆಂಟೈಲ್(ಸುಳ್ಯದ ಶಿವಪ್ರಸಾದ ಪಿ ಹಾಗೂ ಗಾಯತ್ರಿ ಪಿ)¸ ಪ್ರಾಪ್ತಿ ಆಳ್ವ ೮೬.೪೮ ಪರ್ಸೆಂಟೈಲ್ (ಬಂಟ್ವಾಳದ ಸರಪಾಡಿಯ ಪ್ರವೀಣ್ ಆಳ್ವ ಹಾಗೂ ಸವಿತಾ ದಂಪತಿಗಳ ಪುತ್ರಿ) ಪಡೆದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.ಜೆಇಇ ಮೈನ್ಸ್: ವಿವೇಕಾನಂದ ಕಾಲೇಜ್ ಗಮನಾರ್ಹ ಸಾಧನೆ
ರಾಷ್ಟ್ರ ಮಟ್ಟದ ಜೆ.ಇ.ಇ. ಮೈನ್ಸ್-೨೦೨೬ ರ ದ್ವಿತೀಯ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಹಲವು ವಿದ್ಯಾರ್ಥಿಗಳು ೯೦ ಕ್ಕೂ ಅಧಿಕ ಪರ್ಸೆಂಟೈಲ್‌ಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಶಾಲ್ ಪಿ (ಪುತ್ತೂರು ಪಡ್ನೂರಿನ ವಿಠ್ಠಲ ಪಿ ಹಾಗೂ ರೇಷ್ಮಾ ದಂಪತಿಗಳ ಪುತ್ರ) ಅವರು೯೮.೪೨ ಪರ್ಸೆಂಟೈಲ್ ಗಳಿಸುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.