ಪುತ್ತೂರಿನ ಮಹಿಳಾ ಕ್ರಿಕೆಟ್ ಪ್ರತಿಭೆಯಾಗಿರುವ ಅನಘಾ ಕೆ.ಎನ್. ಕರ್ನಾಟಕ ರಾಜ್ಯದ ಅಂಡರ್ 23 ಮಹಿಳಾ ಟಿ-20 ಟೂರ್ನಮೆಂಟ್‌ಗೆ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ತಂಡದ 15 ಮಂದಿ ಸದಸ್ಯರ ಪೈಕಿ ಅನಘಾ ಅವರು ಆಯ್ಕೆಯಾಗುವ ಮೂಲಕ ಬಿಸಿಸಿಐ ಅಂಗಳಕ್ಕೆ ಹೆಜ್ಜೆ ಇರಿಸಿದ್ದಾರೆ.

ಪುತ್ತೂರು: ಪುತ್ತೂರಿನ ಮಹಿಳಾ ಕ್ರಿಕೆಟ್ ಪ್ರತಿಭೆಯಾಗಿರುವ ಅನಘಾ ಕೆ.ಎನ್. ಕರ್ನಾಟಕ ರಾಜ್ಯದ ಅಂಡರ್ 23 ಮಹಿಳಾ ಟಿ-20 ಟೂರ್ನಮೆಂಟ್‌ಗೆ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ತಂಡದ 15 ಮಂದಿ ಸದಸ್ಯರ ಪೈಕಿ ಅನಘಾ ಅವರು ಆಯ್ಕೆಯಾಗುವ ಮೂಲಕ ಬಿಸಿಸಿಐ ಅಂಗಳಕ್ಕೆ ಹೆಜ್ಜೆ ಇರಿಸಿದ್ದಾರೆ. ಪುತ್ತೂರಿನ ವಿವೇಕಾನಂದ ಇಂಜಿಯರ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ತೃತೀಯ ವರ್ಷದ ಮೆಕ್ಯಾನಿಕಲ್ ಇಂಜಿಯರಿಂಗ್ ವಿಭಾಗದಲ್ಲಿ ಕಲಿಯುತ್ತಿವ ಅನಘಾ ಅವರು ಪ್ರತಿಷ್ಠಿತ ಬಿಸಿಸಿಐ ಅಂಡರ್-23 ಮಹಿಳಾ ಟಿ-20 ಟ್ರೋಫಿ 2026-27 ಪಂದ್ಯಾವಳಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಈ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಮುಂದೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದು, ನ.14ರಿಂದ 21ರ ತನಕ ಛತ್ತೀಸ್‌ಘಡದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅನಘಾ ಆಟವಾಡಲಿದ್ದಾರೆ.

ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದ ಅನಘಾ ಅವರು ಇದರೊಂದಿಗೆ ಕ್ರಿಕೆಟ್ ಆಸಕ್ತಿಯನ್ನು ಜೊತೆ ಜೊತೆಗೆ ಬೆಳೆಸಿಕೊಂಡಿದ್ದರು. ಕ್ರಿಕೆಟ್‌ನಲ್ಲಿ ವೇಗದ ಬೌಲರ್ ಆಗಿದ್ದ ಅವರು ಹಲವಾರು ಸ್ಥಳಿಯ ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡದಲ್ಲಿ ಭಾಗವಹಿಸಿ ತನ್ನದೇ ಆದ ಛಾಪು ಮೂಡಿಸಿದ್ದರು. ಇದೀಗ ಪುತ್ತೂರಿನ ಪುಟ್ಟ ಕ್ರಿಕೆಟ್ ಮೈದಾನದಲ್ಲಿ ಬೆಳೆದ ಪ್ರತಿಭೆ ಅನಘಾ ಬಿಸಿಸಿಐ ಎಂಬ ಬೃಹತ್ ಮೈದಾನದತ್ತ ಸಾಗಿದ್ದಾರೆ.

ಪುತ್ತೂರು ತಾಲೂಕಿನ ನಗರಸಭಾ ವ್ಯಾಪ್ತಿಯ ಮರೀಲು ನಿವಾಸಿ ನವೀನ್ ಕುಮಾರ್ ಮತ್ತು ಕವಿತಾ ಡಿ ದಂಪತಿಯ ಪುತ್ರಿ ಅನಘಾ ಅವರು ತನ್ನ ಕಲಿಕೆಯ ಜೊತೆಗೆ ಕ್ರೀಡಾ ಆಸಕ್ತಿ ಬೆಳೆಸಿಕೊಂಡು ಸಾಧನೆಯ ಶಿಖರಕ್ಕೆ ಏರಿ ಪುತ್ತೂರಿಗೆ ಕೀರ್ತಿ ತಂದಿದ್ದಾರೆ.