ಸಾರಾಂಶ
ಹಾಸನ ಜಿಲ್ಲಾ ಸಂಯುಕ್ತ ಜಮಾಅತ್‌ನ ಖಾಝಿ ಮಾಣಿ ಉಸ್ತಾದ್ ನೇತೃತ್ವದಲ್ಲಿ ರೈತ ಭವನದಲ್ಲಿ ಖಾಝಿ ಮುಲಾಖಾತ್ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು. ಧಾರ್ಮಿಕ ಪಂಡಿತ ಹುಸೇನ್ ಸೌದಿ ಕೆ.ಸಿ. ರೋಡ್ ಮಾತನಾಡಿ, ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ತ್ಯಾಗ ಮತ್ತು ಸೇವೆಯಿಂದ ಸಿಗುತ್ತದೆ. ಧರ್ಮವನ್ನು ಉಳಿಸಿಕೊಳ್ಳುವುದು ಅವಶ್ಯ. ಜೀವನದಲ್ಲಿ ಸಮಾಧಾನ ಬಯಸುವವರೆಗೆ ಸ್ವಾರ್ಥವನ್ನು ತೊರೆಯಬೇಕು. ಐಶ್ವರ್ಯ ಸಿಕ್ಕರೆ ಎಲ್ಲವನ್ನು ಮರೆಯುವ ಸ್ಥಿತಿ ಬರುತ್ತದೆ. ದೇವನ ಭಯದಲ್ಲಿ ಬದುಕಬೇಕು. ಧಾರ್ಮಿಕ ಪಂಡಿತರು ಮತ್ತು ಸಮುದಾಯದ ನಾಯಕರು ಒಗ್ಗೂಡಿ ಧರ್ಮ ಉಳಿಸಲು ಸಮಾಲೋಚನೆ ನಡೆಸಬೇಕು ಎಂದು ಕರೆ ನೀಡಿದರು.
.ಕನ್ನಡಪ್ರಭ ವಾರ್ತೆ ಸಕಲೇಶಪುರ
ಹಾಸನ ಜಿಲ್ಲಾ ಸಂಯುಕ್ತ ಜಮಾಅತ್‌ನ ಖಾಝಿ ಮಾಣಿ ಉಸ್ತಾದ್ ನೇತೃತ್ವದಲ್ಲಿ ರೈತ ಭವನದಲ್ಲಿ ಖಾಝಿ ಮುಲಾಖಾತ್ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಖಾಝಿ ಮಾಣಿ ಉಸ್ತಾದ್, ಮರಣಕ್ಕೆ ಸಮಯವಿಲ್ಲ. ಜೀವತಾವಧಿಯಲ್ಲಿ ಒಳಿತು ಮಾಡುವುದು ಮುಖ್ಯ. ಇಸ್ಲಾಮ್‌ಗೆ ಒಂದು ಚೌಕಟ್ಟು ಇದ್ದು, ಅದರಲ್ಲಿ ಬದುಕಬೇಕು. ರಾಜ-ಮಹಾರಾಜರು ಮತ್ತು ನಾಯಕರು ಧರ್ಮ ಉಳಿಸಲು ತಮ್ಮ ಎಲ್ಲವನ್ನೂ ಧಾನ-ಧರ್ಮ ಕಾರ್ಯಕ್ಕೆ ಅರ್ಪಿಸಿದ್ದಾರೆ ಎಂದು ತಿಳಿಸಿದರು.
ಧಾರ್ಮಿಕ ಪಂಡಿತ ಹುಸೇನ್ ಸೌದಿ ಕೆ.ಸಿ. ರೋಡ್ ಮಾತನಾಡಿ, ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ತ್ಯಾಗ ಮತ್ತು ಸೇವೆಯಿಂದ ಸಿಗುತ್ತದೆ. ಧರ್ಮವನ್ನು ಉಳಿಸಿಕೊಳ್ಳುವುದು ಅವಶ್ಯ. ಜೀವನದಲ್ಲಿ ಸಮಾಧಾನ ಬಯಸುವವರೆಗೆ ಸ್ವಾರ್ಥವನ್ನು ತೊರೆಯಬೇಕು. ಐಶ್ವರ್ಯ ಸಿಕ್ಕರೆ ಎಲ್ಲವನ್ನು ಮರೆಯುವ ಸ್ಥಿತಿ ಬರುತ್ತದೆ. ದೇವನ ಭಯದಲ್ಲಿ ಬದುಕಬೇಕು. ಧಾರ್ಮಿಕ ಪಂಡಿತರು ಮತ್ತು ಸಮುದಾಯದ ನಾಯಕರು ಒಗ್ಗೂಡಿ ಧರ್ಮ ಉಳಿಸಲು ಸಮಾಲೋಚನೆ ನಡೆಸಬೇಕು. ಕಾರ್ಯಕ್ರಮದಲ್ಲಿ ಸಮುದಾಯದ ಒಳಿತಿಗೆ ಧಾರ್ಮಿಕ ಪಂಡಿತರು ಸಕ್ರಿಯರಾಗಬೇಕು ಎಂಬ ಕರೆ ನೀಡಿದರು.ವೇದಿಕೆಯಲ್ಲಿ ಶಾಫಿ ನೈಮಿ ಮಾರನಹಳ್ಳಿ ತಞಲ್, ಉಮರ್ ಸಖಾಫಿ ಎಡಪಾಲ, ಡಿ ಕೆ ಉಮರ್ ಸಖಾಫಿ, ಸಯ್ಯದ್ ಅಲವಿ ಸಖಾಫಿ ಷರೀಫ್ ಮಿಸ್ಬಾಯಿ ಸೇರಿದಂತೆ 25 ಮಸೀದಿಯ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.