ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ಸಹಯೋಗದಲ್ಲಿ ಉಡುಪಿ ಬನ್ನಂಜೆ ನಾರಾಯಣಗುರು ಆಡಿಟೋರಿಯಂನ ತ್ಯಾಗ ಮಂಟಪದಲ್ಲಿ ಜರುಗಿದ ಅವಿಭಜಿತ ದ.ಕ. ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಭಜನೆ ಸ್ಪರ್ಧೆಯಲ್ಲಿ ಮಲ್ಪೆಯ ಗಾನ ಸುರಭಿ ತಂಡ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದೆ.ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಸಂಸಾರದಲ್ಲಿ ಭೋಜನಕ್ಕೆ ನೀಡುವ ಆಸಕ್ತಿಯ ಜತೆಗೆ ಇಡೀ ಕುಟುಂಬ ಪ್ರತಿನಿತ್ಯ ಒಂದಾಗಿ ಕುಳಿತು ಭಜನೆಯಲ್ಲಿ ಒಲವು ತೋರಿಸಿದಲ್ಲಿ ಅದು ಇಡೀ ಕುಟುಂಬದಲ್ಲಿ ಗುಣಾತ್ಮಕ ಶಕ್ತಿಯನ್ನು ಹರಿಸುತ್ತದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಕೋಟ್ಯಾನ್ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ರವೀಂದ್ರ ನಾಡಿಗ್, ಮತ್ಸ್ಯರಾಜ್ ಗ್ರೂಪ್‌ನ ಕೇಶವ ಎಂ. ಕೋಟ್ಯಾನ್, ತೀರ್ಪುಗಾರರಾದ ಗಿರೀಶ್ ತಂತ್ರಿ ವೇದಿಕೆಯಲ್ಲಿದ್ದರು.ಭಜನೆ ಕ್ಷೇತ್ರದಲ್ಲಿ ದಶಕಗಳ ಸೇವೆ ಸಲ್ಲಿಸಿದ ಕಾಳಪ್ಪ ಶೆಟ್ಟಿ ಒಡ್ಡಾಡಿಮನೆ ಹಾಗೂ ಸೋಮಪ್ಪ ಕುಂದರ್ ತೊಟ್ಟಂ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಖಜಾಂಚಿ ಪ್ರಭಾಕರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.* ಸ್ಪರ್ಧೆಯ ಫಲಿತಾಂಶ:ಅವಿಭಜಿತ ದ.ಕ. ಜಿಲ್ಲೆಯಿಂದ 11 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನ ಗಾನ ಸುರಭಿ ಮಲ್ಪೆ ತಂಡ (೨೦,೦೦೦ ರು. ನಗದು), ದ್ವಿತೀಯ ಬಹುಮಾನ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ (೧೫,೦೦೦ ರು. ನಗದು) ಹಾಗೂ ತೃತೀಯ ಬಹುಮಾನ ಶಿವರಂಜನಿ ಸುರತ್ಕಲ್ ತಂಡ (12,000 ರು.) ಗೆದ್ದುಕೊಂಡಿತು.ವೈಯಕ್ತಿಕ ಬಹುಮಾನ: ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಕಾಪು ಪೊಲಿಪು ತಂಡದ ನಿತಿನ್ ಹಾಗೂ ಪ್ರಜ್ವಲ್ ಕ್ರಮವಾಗಿ ಉತ್ತಮ ಹಾಡುಗಾರ, ಉತ್ತಮ ತಬಲ ವಾದಕ, ಸ್ವರಾರ್ಪಣಂ ಕಟೀಲು ತಂಡದ ಶೋಧನ್ ಎರ್ಮಾಳ್ ಉತ್ತಮ ಹಾರ್ಮೋನಿಯಂ ವಾದಕ ಬಹುಮಾನ ಗಳಿಸಿದರು.