ಸಾರಾಂಶ
ನರಗುಂದ: ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯವೆಂದು ವಿರಕ್ತಮಠದ ಶಿವಕುಮಾರ ಶ್ರೀಗಳು ಹೇಳಿದರು.
ಅವರು ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲೆಯ 9ನೇ ವಾರ್ಷಿಕಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಆನಂತರ ಮಾತನಾಡಿ, ಈ ಹಿಂದೆ ನಮ್ಮ ಸಮಾಜದಲ್ಲಿ ಶಾಲೆಯ ರೀತಿ ಗುರುಕುಲ ಎನ್ನುವ ಶಾಲೆಯಲ್ಲಿ ಶಿಕ್ಷಣ ಸಿಗುತ್ತಿತ್ತು, ಆದರೆ ಆಧುನಿಕವಾಗಿ ನಾವು ಬದಲಾವಣೆಗೊಂಡ ನಂತರ ಸರ್ಕಾರ ಮತ್ತು ಖಾಸಗಿ ಶಾಲೆಗಳನ್ನು ತೆರೆದು ಜಾತಿ ಮತ ಎನ್ನದೆ ಸಮಾಜದ ಪ್ರತಿಯೊಂದು ಮಗುವಿಗೆ ಶಿಕ್ಷಣ ಸಿಗುವ ಪದ್ಧತಿಯಿಂದ ಇಂದು ನಾವು ಎಲ್ಲಾ ಸಮಾಜದಲ್ಲಿ ಶಿಕ್ಷಣವಂತರನ್ನು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಮಾತನಾಡಿ, ಜ್ಞಾನ ಮುದ್ರಾ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತೋಷದ ವಿಷಯ ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಶಿಕ್ಷಣ ನೀಡುತ್ತಿರುವುದು ಶ್ಲಾಘನಿಯ ಮತ್ತು ವಿದ್ಯಾರ್ಥಿಗಳು ಬುದ್ಧಿಮತ್ತೆ (ಐಕ್ಯೂ) ಪ್ರಮಾಣ ಹೆಚ್ಚಿಸುವುದಲ್ಲದೆ ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿ ಮತ್ತು ಪಾಲಕರೊಂದಿನ ಭಾವನಾತ್ಮಕ (ಎಕ್ಯೂ) ಪ್ರಮಾಣವನ್ನು ಹೆಚ್ಚಿಸಿದೆ ಎಂದರು. ರಾಘವೇಂದ್ರ ಬಾಸುರ ಮಾತನಾಡಿ, ಸಂಸ್ಥೆಯು ಉತ್ತಮ ಶಿಕ್ಷಣದೊಂದಿಗೆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತೆಗೆಯುವುದು ತುಂಬಾ ಅವಶ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆ ವೇದಿಕೆ ಕಲ್ಪಿಸುತ್ತಿರುವುದು ಸಂತೋಷ ಎಂದರು.
ಸಂಸ್ಥೆಯ ಅಧ್ಯಕ್ಷ ವಿ.ಜಿ. ಮಮಟಗೇರಿ ಮಾತನಾಡಿ, ನಮ್ಮ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ದೇಸಿಯ ಕ್ರೀಡೆಯಾದ ಮಲ್ಲಕಂಭ ಮತ್ತು ಯೋಗದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದರು.ಸಂಸ್ಥೆಯ ವತಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿ ಮುಬಾರಕ ಮುಲ್ಲಾ ಇವರನ್ನು ಸನ್ಮಾನಿಸಲಾಯಿತು.
ಡಾ. ಜೆ.ಎ. ಸ್ವಾಮಿ, ಪ್ರಸನ್ನ ಕುಲಕರ್ಣಿ, ಪುರಸಭೆ ಅಧಿಕಾರಿ ಅಮೀತಾ ತಾರದಾಳ, ಮಂಟೂರ, ಶಿಕ್ಷಕರಾದ ಸುಭಾಸಗೌಡ ಮಲ್ಲಪ್ಪಗೌಡ್ರ, ಗಿರಿಜಾ ಕವಲೂರ, ದೀಪಾ ಮಿರ್ಜಣ್ಣವರ, ಅರವಿಂದ ಕುಲಕರ್ಣಿ, ಭಾಗ್ಯಶ್ರೀ ಜವಳಿಮಠ, ಸುಜಾತಾ ಪಾಟೀಲ, ರಜೀಯಾ ಶೇಖ, ಮಹಾಲಕ್ಷ್ಮೀ, ಕಿರಣ ಕುಂಬಾರ, ರಾಘವೇಂದ್ರ ಚೆಟ್ಟರಯವರ, ಬಹಾದ್ದೂರಖಾನ, ಸ್ವೇತಾ, ಐಶ್ವರ್ಯ, ಚನ್ನಮ್ಮ ಸೇರಿದಂತೆ ಮುಂತಾದವರು ಇದ್ದರು.