ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ಕಾರಿ ಶಾಲೆಗಳು ಸುಧಾರಣೆ ಜೊತೆಗೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ತಿಳಿಸಿದರು.ತಾಲೂಕಿನ ಚಿಕ್ಕಮಾಳಿಗೆಕೊಪ್ಪಲಿನಲ್ಲಿ ಶನಿವಾರ ನಡೆದ ಉನ್ನತೀಕರಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮೌಲ್ಯಯುತ ಕಲಿಕೆಗೆ ಪೂರಕ ವಾತಾವರಣದ ಮೂಲಕ ಮಕ್ಕಳಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದರು.
ಸರ್ಕಾರ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಲವು ಸೌಲಭ್ಯ ನೀಡುತ್ತಿದೆ. ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಿದರೇ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭಿವೃದ್ಧಿಗೊಳಿಸಬಹುದು ಎನ್ನುವುದಕ್ಕೆ ತಾಲೂಕಿನ ಹಲವಾರು ಶಾಲೆಗಳು ಉದಾಹರಣೆಯಾಗಿದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಕೆ.ಎಂ.ಬಾಲಚಂದ್ರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ಜತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾದ ನೆರವು ನೀಡಲು ಬದ್ಧನಾಗುತ್ತೇನೆಂದು ಭರವಸೆ ನೀಡಿದರು.ಶ್ರೀನಿಧಿ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಚಿಕ್ಕಮಾಳಿಗೆಕೊಪ್ಪಲಿನಲ್ಲಿ ಸುತ್ತಮುತ್ತಲಿನ 15 ಗ್ರಾಮಗಳ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ದಿ.ಕ್ಯಾ.ಲಿಂಗರಾಜು ಕುಟುಂಬದ ಸೇವೆ ಅಪಾರ, ಚಿನ್ನಾಳು ಸೇರಿದಂತೆ ಅನೇಕ ದಾನಿಗಳ ಸಹಕಾರವನ್ನು ಎಲ್ಲರೂ ಶ್ಲಾಘಿಸಬೇಕಿದೆ ಎಂದರು.
ಶಾಲೆಯ ಆವರಣದಲ್ಲಿ ಮಕ್ಕಳು ಬಿಡಿಸಿದ ಚಿಣ್ಣರ ಕಲಾ ಚಿತ್ತಾರದ ಪ್ರದರ್ಶನ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಷಕರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು. ದಾನಿಗಳು ಹಾಗೂ ಮುಖಂಡರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಸದಸ್ಯೆ ಶಶಿಕಲಾ, ಮುಖಂಡ ಚಿನ್ನಾಳು, ಮುಖ್ಯಶಿಕ್ಷಕಿಯರಾದ ಸುನಕ್ಯಾ, ಲತಾ, ಎಸ್ಡಿಎಂಸಿ ಅಧ್ಯಕ್ಷರಾದ ಮಹದೇವು, ವೆಂಕಟೇಶ್, ಬಿಆರ್‌ಪಿ ಸೋಮಣ್ಣ, ಸಿಆರ್‌ಪಿ ಸಿದ್ದಲಿಂಗಸ್ವಾಮಿ, ಪ್ರಕಾಶ್, ಬಾಬು, ಪ್ರಮುಖರಾದ ನಾಗರಾಜು, ಮಹದೇವು, ಸೋಮಣ್ಣ, ಶಿವಸ್ವಾಮಿ, ರಮೇಶ್, ಸದಾನಂದಮೂರ್ತಿ, ನವೀನ್ ಕುಮಾರ್, ವೇದಮೂರ್ತಿ, ನವೀನ್ ಕುಮಾರ್, ಶ್ರೀಧರ್, ನಾಗರಾಜು, ಕೃಷ್ಣೇಗೌಡ, ಕಮಲಮ್ಮ, ರತ್ನಮ್ಮ, ಶಿಕ್ಷಕರು, ಹಾಗೂ ಸಿಬ್ಬಂದಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))