ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ದೊಡ್ಡ ದೊಡ್ಡ ಪಟ್ಟಣಗಳಿಗಿಂತ ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿಯೆ ಹೆಚ್ಚು ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದು ಶಿಕ್ಷಕ ಶಿವಶರಣಪ್ಪ ಶಿರೂರ ಹೇಳಿದರು.ತಾಲೂಕಿನ ಕೆಂಭಾವಿ ಪಟ್ಟಣದ ಸಮೀಪ ಯಾಳಗಿ ಗ್ರಾಮದ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ವರ್ಗಾವಣೆಗೊಂಡ ಹಾಗೂ ನಿವೃತ್ತಿ ಹೊಂದಿದ ಸಿಬ್ಬಂದಿ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಹಿರಿಯರು ಗಳಿಸಿದ ಆಸ್ತಿಯನ್ನು ನಂಬಿ ಬದುಕುವದಕ್ಕಿಂತ ಬಾಳಿನ ಭವಿಷ್ಯದ ಬೆಳಕಾಗುವ ಸಂಪತ್ತಾದ ವಿದ್ಯೆ ನಂಬಿ ಶ್ರಮದಿಂದ ಜೇನು ನೊಣದಂತೆ ನಿರಂತರ ಹೋರಾಟದಿಂದ, ವಿನಯದಿಂದ ವಿದ್ಯೆ ಗಳಿಸಲು ಸಾಧ್ಯವಾಗುತ್ತದೆ ಎಂದರು.ಎಸ್‌ಡಿಎಒಸಿ ಅಧ್ಯಕ್ಷ ಮಹೇಶ ಹುಜರತಿ ಮಾತನಾಡಿ, ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ನಮ್ಮ ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನಮ್ಮ ಶಿಕ್ಷಕ ಸಿಬ್ಬಂದಿಯಿಂದ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಮುಖಂಡರಾದ ಬಸನಗೌಡ ಹೊಸಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಎಸ್.ಎನ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಸಿದ್ದಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ನಾಗೇಶ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶ್ರೀನಿವಾಸರೆಡ್ಡಿ ಮಾಲಿಪಾಟೀಲ, ಮಲ್ಲನಗೌಡ ಮಾಲಿಪಾಟೀಲ, ಮಲ್ಕಣ್ಣ ಮಾನಸುಣಗಿ, ಬಸವರಾಜ ಹೆಳವರ, ಮಲ್ಲು ಸಜ್ಜನ, ರಾಮನಗೌಡ ಢವಳಗಿ, ಶ್ರೀಶೈಲ್ ಮಹಾಮನಿ, ಶಿವನಗೌಡ ಪಾಟೀಲ, ಜಟ್ಟೆಪ್ಪ ಬೆಕಿನಾಳ, ಸಿಆರ್‌ಪಿ ಚೆನ್ನಪ ಹಾಗೂ ತಿಪ್ಪಣ್ಣ, ಶಿವಶರಣ ನಾಗರೆಡ್ಡಿ, ಮಹಾದೇವಪ್ಪ ಜಲಪುರ, ಮಹಾಂತೇಶ, ನಿಂಗಮ್ಮ ನಾಯ್ಕೋಡಿ, ಮುಖ್ಯಗುರು ಬೀರಪ್ಪ ಕಟ್ಟಿಮನಿ ಸೇರಿದಂತೆ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.ಸನ್ಮಾನ:ವರ್ಗಾವಣೆಗೊಂಡ ಶಿಕ್ಷಕ ಅಲ್ತಾಫ್ ಅತ್ತಾರ, ಸಿದ್ದಣ್ಣ ಧನಗೊಂಡ, ಶಿವಶರಣಪ್ಪ ಶಿರೂರ, ನಿವೃತ್ತಿ ಹೊಂದಿದ ರಾಚಪ್ಪ ಹದನೂರ, ಮಹಾದೇವಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ನಿವೇದಿತಾ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕಿ ಶಿಲ್ಪಾ ನಿರೂಪಿಸಿದರು. ಎಸ್‌ಡಿಎಮ್‌ಸಿ ಅಧ್ಯಕ್ಷ ಮಹೇಶ ಹುಜರತಿ ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.