ವಿವಿಯಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ ಪರಿಣಾಮಕಾರಿಯಾಗಿರಲಿ: ಸುಂದರೇಶ ಬಾಬು

| Published : Nov 23 2024, 12:36 AM IST

ವಿವಿಯಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ ಪರಿಣಾಮಕಾರಿಯಾಗಿರಲಿ: ಸುಂದರೇಶ ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ವಿಶ್ವವಿದ್ಯಾಲಯಗಳಾಗಿದ್ದರು ಗುಣಮಟ್ಟದ ಶಿಕ್ಷಣ, ವಿಸ್ತರಣೆ ಹಾಗೂ ಸಂಶೋಧನೆ ವಿಭಾಗಗಳು ಪರಿಣಾಮಕಾರಿಯಾಗಿರಬೇಕು ಆ ನಿಟ್ಟಿನಲ್ಲಿಯೇ ಕೃಷಿ ವಿಜ್ಞಾನಗಳ ವಿವಿಯು ಕಲ್ಯಾಣ ಕರ್ನಾಟಕ ಭಾಗದ ಕೃಷಿ ವಲಯ ಸೇರಿ ಸಮಗ್ರ ಅಭಿವೃದ್ಧಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಸುಂದರೇಶ ಬಾಬು ಎಂ. ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಯಾವುದೇ ವಿಶ್ವವಿದ್ಯಾಲಯಗಳಾಗಿದ್ದರು ಗುಣಮಟ್ಟದ ಶಿಕ್ಷಣ, ವಿಸ್ತರಣೆ ಹಾಗೂ ಸಂಶೋಧನೆ ವಿಭಾಗಗಳು ಪರಿಣಾಮಕಾರಿಯಾಗಿರಬೇಕು ಆ ನಿಟ್ಟಿನಲ್ಲಿಯೇ ಕೃಷಿ ವಿಜ್ಞಾನಗಳ ವಿವಿಯು ಕಲ್ಯಾಣ ಕರ್ನಾಟಕ ಭಾಗದ ಕೃಷಿ ವಲಯ ಸೇರಿ ಸಮಗ್ರ ಅಭಿವೃದ್ಧಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಸುಂದರೇಶ ಬಾಬು ಎಂ. ಅವರು ಹೇಳಿದರು.

ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ವಿಶ್ವವಿದ್ಯಾಲಯಗಳು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಕಾಳಜಿಯಿಂದ ಓದಬೇಕು. ತಮ್ಮ ಜೀವನದ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲಿಯ ಸೌಲಭ್ಯಗಳನ್ನು ಸರಿಯಾಗಿ ಪಡೆದು ಪದವಿ ಮುಗಿದ ನಂತರ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕ ಭಾಗದ ಭೌಗೋಳಿಕ ವಾತಾವರಣಕ್ಕೆ ಅನುಕೂಲವಾಗುವ ಬೆಳೆಗಳನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯಲು ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಈ ಭಾಗದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ಆನೇಕರ ಶ್ರಮವಿದ್ದು, ವಿವಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ರೈತರಿಗೆ ತಂತ್ರಜ್ಞಾನದ ಪರಿಚಯ ಹಾಗೂ ತಂತ್ರಜ್ಞಾನ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಶ್ರಮಿಸುತ್ತಿದೆ. ರೈತರು ವಿವಿಯ ಸೌಲಭ್ಯವನ್ನು ಪಡೆಯಬೇಕು. ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ವಿವಿಯಲ್ಲಿ ಮಾಡುತ್ತಿದ್ದು, ಇದರಿಂದ ರೈತರಿಗೆ ಬಾರಿ ಅನುಕೂಲವಾಗಿದೆ ಎಂದು ಹೇಳಿದರು.

ವಿವಿ ಡೀನ್ (ಸ್ನಾತಕೋತ್ತರ) ಹಾಗೂ ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಡಾ.ಗುರುರಾಜ ಸುಂಕದ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ವಹಿಸಿದ್ದರು. ವಿವಿ ವಿಶ್ರಾಂತಿ ಕುಲಪತಿ ಬಿ.ವಿ.ಪಾಟೀಲ್, ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಬಸನಗೌಡ ಬ್ಯಾಗವಾಟ್, ಮಲ್ಲಿಕಾರ್ಜುನ ಡಿ., ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಮಲ್ಲೇಶ್ ಕೊಲಿಮಿ, ಮಧುಸೂಧನ್ ರೆಡ್ಡಿ, ತಿಮ್ಮಣ್ಣ ಸೋಮಪ್ಪ ಜಾವಡಿ, ಐಸಿಎಆರ್-ಎನ್ಎಎಆರ್ಎಮ್ ನಿರ್ದೇಶಕ ಶ್ರೀನಿವಾಸ ರಾವ್ ಚರುಕಮಲ್ಲಿ, ಕುಲ ಸಚಿವ ಡಾ.ಎಂ.ವೀರನಗೌಡ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎನ್.ಶವಶಂಕರ್, ವಿದ್ಯಾರ್ಥಿಗಳ ಕ್ಷೇಮಾವೃದ್ಧಿ ಡೀನ್ ಡಾ.ಎಸ್.ಬಿ.ಗೌಡಪ್ಪ, ಡೀನ್ಗಳಾದ ಡಾ.ಕೆ.ನಾರಾಯಣ ರಾವ್, ಡಾ.ಮಲ್ಲಿಕಾರ್ಜುನ ಅಯ್ಯನ್ಗೌಡರ್, ಡಾ.ಎಂ.ಎಂ.ಧನೋಜ್, ಡಾ.ಡಿ.ಎಚ್.ಕುಚನೂರು, ವಿಶೇಷಾಧಿಕಾರಿ ಡಾ.ಜೆ.ವಿಶ್ವನಾಥ, ಆಡಳಿತಾಧಿಕಾರಿ ಡಾ.ಜಾಗೃತಿ ಬಿ.ದೇಶಮಾನ್ಯ, ಆಸ್ತಿ ಅಧಿಕಾರಿ ರವಿ ಮೆಸ್ತಾ, ಹಣಕಾಸು ನಿಯಂತ್ರಾಣಾಧಿಕಾರಿ ಹನುಮೇಶ್ ನಾಯಕ ಸೇರಿದಂತೆ ವಿವಿಯ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿವಿಧ ಪ್ರಶಸ್ತಿಗಳ ಪ್ರಧಾನ:

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನೀಡಲಾಗುವ 2023-24ನೇ ಸಾಲಿನ ಅತ್ಯುತ್ತಮ ಶಿಕ್ಷಕ, ಅತ್ಯುತ್ತಮ ಸಂಶೋಧನಾ ವಿಜ್ಞಾನಿ, ಅತ್ಯುತ್ತಮ ವಿಸ್ತರಣಾ ವಿಜ್ಞಾನಿ, ಅತ್ಯುತ್ತಮ ಸೇವಾ ಸಿಬ್ಬಂದಿಗಳು ಹಾಗೂ ಸಂಶೋಧನಾ ಯೋಜನೆಗಳನ್ನು ಪಡೆದಿರುವ ವಿಜ್ಞಾನಿಗಳಿಗೆ ಪ್ರೋತ್ಸಾಹ ಧನ ಪ್ರಶಸ್ತಿಗಳನ್ನು ಹಾಗೂ ಪ್ರಶಂಸಾ ಪತ್ರಗಳು ನೀಡಿ, ಸನ್ಮಾನಿಸಿ ಗೌರವಿಸಲಾಯಿತು.