ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಅಗತ್ಯ: ಶಾಸಕಿ ಕರೆಮ್ಮ

| Published : Sep 24 2025, 01:00 AM IST

ಸಾರಾಂಶ

ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ಕೆಕೆಆರ್‌ಡಿಬಿ ಯೋಜನೆಯಲ್ಲಿ ₹12.53 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಗಳಾಗಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ಕೆಕೆಆರ್‌ಡಿಬಿ ಯೋಜನೆಯಲ್ಲಿ ₹12.53 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಗಳಾಗಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.

ಪಟ್ಟಣದ ನಗರ ಗುಂಡಕ್ರಾಸ್ ಬಳಿ ಕೋಣಚಪ್ಪಳ್ಳಿಯವರೆಗೆ ಬಿಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾಮಗಾರಿಯ ಬಗ್ಗೆ ನಿಗಾ ವಹಿಸಬೇಕು. ಕಳಪೆ ಗುಣಮಟ್ಟದ ದೂರುಗಳು ಕೇಳಿಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಇದಕ್ಕೆಇಲಾಖೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಚ್ಚರ ವಹಿಸಲು ಸೂಚಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಗುಣಮಟ್ಟದ ಕಾಮಗಾರಿಗಳಿಗೆ ಸಾರ್ವಜನಿಕರ ಸಲಹೆ, ಸಹಕಾರ ನೀಡಬೇಕು.

ರಾಮನಾಳ ಗ್ರಾಮದಲ್ಲಿ ₹1 ಕೋಟಿ 28 ಲಕ್ಷದ ಸಿಸಿ ರಸ್ತೆಚರಂಡಿ, ಹೈಟೆಕ್ ಶೌಚಾಲಯ, 4 ಶಾಲಾ ಕೊಠಡಿ ನಿರ್ಮಾಣ, ಕೊಪ್ಪ ಗ್ರಾಮದಲ್ಲಿ ₹30 ಲಕ್ಷದ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಹೇರೂರು ಗ್ರಾಮದಲ್ಲಿ ₹ 30 ಲಕ್ಷದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಇಟಗಿ ಗ್ರಾಮದಲ್ಲಿ ₹2 ಕೋಟಿ 75 ಲಕ್ಷದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಗಾಗಲ್‌ ಗ್ರಾಮದಲ್ಲಿ ₹20 ಲಕ್ಷ ರುಪಾಯಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಮಾತಳ್ಳಿ ಗ್ರಾಮದಲ್ಲಿ 1 ಕೋಟಿ 36 ಲಕ್ಷದ ಸಮುದಾಯ ಭವನ ಮತ್ತು ಶಾಲಾ ಕಾಂಪೌಂಡ್ ನಿರ್ಮಾಣ, ಸುಗೂರಾಳ ಗ್ರಾಮದಲ್ಲಿ 29 ಲಕ್ಷದಲ್ಲಿ 2 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ರಾಮನಾಳ, ಕೊಪ್ಪರ, ಹೇರೂರು, ಇಟಗಿ, ಗಾಗಲ್, ಮಾತ್ಪಳ್ಳಿ ಹಾಗೂ ಸೂಗರಾಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಣ್ಣ ತಾತ ಮುಂಡರಗಿ, ರಾಜಾರಂಗಪ್ಪ ನಾಯಕದೊರೆ, ರಂಗಣ್ಣಗೌಡ ಅಳ್ಳುಂಡಿ, ರಮೇಶ ರಾಮನಾಳ, ಹಸೇನ್‌ ಸಾಬ್‌ ರಾಮನಾಳ, ಗೋವಿಂದರಾಜ ನಾಯಕ ಚಿಕ್ಕಗುಡ್ಡ, ಸಿದ್ದಣ್ಣ ಎನ್. ಗಣೆಕಲ್, ತಿಮ್ಮರೆಡ್ಡಿ ನಾಯಕ್, ಇಸಾಕ್ ಮೇಸ್ತ್ರಿ, ದಾವುದ್ಔಂಟಿ, ಮಂಜನಾಥ ಮಾತ್ಪಳ್ಳಿ, ರಮೇಶ ಕುರ್ಕಿಹಳ್ಳಿ, ಉಮಾಪತಿ ಗೌಡ ನಗರಗುಂಡ, ಕೆ.ವೆಂಕಟೇಶ ಗೌಡ, ಬಸವರಾಜ ಯರಮಸಾಳ, ಮಹಬೂಬ್‌ಗೌರಂಪೇಟೆ, ಲೋಕೋಪಯೋಗಿ ಇಲಾಖೆ ಎಇಇ ಬನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಮಹಾದೇವಯ್ಯ ಸೇರಿದಂತೆ ಇತರರು ಇದ್ದರು.