ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದಲ್ಲಿರುವ ಶ್ರೀಮತಿ ದಾನಮ್ಮ ಚನ್ನಬಸವಯ್ಯ ಪದವಿ ಪೂರ್ವ ಕಾಲೇಜಿನ ಅರ್ಚನಾ ಆರ್. ರಾಜ್ಯಕ್ಕೆ ನಾಲ್ಕನೇ ಸ್ಥಾನಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ನಗರದ ಶ್ರೀಮತಿ ದಾನಮ್ಮ ಚನ್ನಬಸವಯ್ಯ (SDC) ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 398 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 382 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಶೇ. 96 ಫಲಿತಾಂಶ ಪಡೆದು ತಾಲೂಕಿನಲ್ಲಿ 11 ವರ್ಷಗಳಿಂದ ಸತತವಾಗಿ ಪ್ರಥಮ ಸ್ಥಾನ ಗಳಿಸಿದೆ. ವಿಜ್ಞಾನ ವಿಭಾಗದಲ್ಲಿ ಅರ್ಚನ ಆರ್. 595 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದು ನಮ್ಮ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಮೋನಿಷ. ಎಸ್ ಮತ್ತು ನಿಕಿತಾ. ಎಂ. ಎಂಬ ವಿದ್ಯಾರ್ಥಿನಿಯರು ತಲಾ 592 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಮಕ್ಕಳ ಈ ಸಾಧನೆಗೆ ಎಸ್‌ಡಿಸಿ ಕಾಲೇಜಿನ ಕಾರ್ಯದರ್ಶಿಗಳಾದ ಉಷಾ ಗಂಗಾಧರ ಹಾಗೂ ಪ್ರಾಂಶುಪಾಲರಾದ ಡಾ.ಎಸ್. ಎ. ಜಗದೀಶ್ ಮತ್ತು ಎಲ್ಲಾ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಅದೇ ರೀತಿ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ 2026-27 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಈ ಬಾರಿ ಶೇ. 85.24ನಷ್ಟು ಬಂದಿದು ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ನಂದಿತ 563 ಪಡೆದಿರುತಾರೆ. ಕಲಾ ವಿಭಾಗ ವಿದ್ಯಾರ್ಥಿ ಕಾವ್ಯ 561 ಪಡೆದಿರುತಾರೆ. ವಿಜ್ಞಾನ ವಿಭಾಗ ವಿದ್ಯಾರ್ಥಿ ಜಾಸನವಿ 486 ಪಡೆದಿರುತಾರೆ.ಪ್ರಥಮ ಶ್ರೇಣಿಯಲ್ಲಿ 38 ಮಕ್ಕಳು ಮತ್ತು ದ್ವಿತೀಯ ಶ್ರೇಣಿಯಲ್ಲಿ 12 ಮಕ್ಕಳು ತೇರ್ಗಡೆಯಾಗಿರುತ್ತಾರೆ. ಮುಂದಿನ ವರ್ಷ ಇನ್ನು ಹೆಚ್ಚು ಫಲಿತಾಂಶ ಕೊಡುತೇವೆ ಎಂದು ಮಕ್ಕಳಿಗೆ ಶುಭ ಹಾರೈಸಿದರು.