ಕೆರೆ ನೀರಿಗಾಗಿ ನಾಳೆ ಕಾಲ್ನಡಿಗೆ ಜಾಥಾ, ಆರ್.ಅಶೋಕ್‌, ಸಂಸದ ಯದುವೀರ್ ಒಡೆಯರ್‌ ಭಾಗಿ

| Published : Nov 04 2025, 12:15 AM IST

ಕೆರೆ ನೀರಿಗಾಗಿ ನಾಳೆ ಕಾಲ್ನಡಿಗೆ ಜಾಥಾ, ಆರ್.ಅಶೋಕ್‌, ಸಂಸದ ಯದುವೀರ್ ಒಡೆಯರ್‌ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ನ.೫ ರ ಬುಧವಾರ ಬೆಳಗ್ಗೆ ೯.೩೦ ಗಂಟೆಗೆ ತಾಲೂಕಿನ ಶಿವಪುರ ಬಳಿಯ ಕಲ್ಕಟ್ಟೆ ಜಲಾಶಯದಿಂದ ಜಾಥಾ ಆರಂಭಗೊಂಡು ಗುಂಡ್ಲುಪೇಟೆ ತಾಲೂಕು ಕಚೇರಿವರೆಗೂ ಸಾಗಿ ಬರಲಿದ್ದು, ಮಧ್ಯಾಹ್ನ ತಾಲೂಕು ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಕಾಲ್ನಡಿಗೆ ಜಾಥಾ ಹಾಗೂ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ನ.೫ ರಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಲಿದ್ದಾರೆ.

ನ.೫ ರ ಕಾಲ್ನಡಿಗೆ ಜಾಥಾದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್‌ ಭಾಗವಹಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ತಿಳಿಸಿದರು.

ನ.೫ ರ ಬುಧವಾರ ಬೆಳಗ್ಗೆ ೯.೩೦ ಗಂಟೆಗೆ ತಾಲೂಕಿನ ಶಿವಪುರ ಬಳಿಯ ಕಲ್ಕಟ್ಟೆ ಜಲಾಶಯದಿಂದ ಜಾಥಾ ಆರಂಭಗೊಂಡು ಗುಂಡ್ಲುಪೇಟೆ ತಾಲೂಕು ಕಚೇರಿವರೆಗೂ ಸಾಗಿ ಬರಲಿದ್ದು, ಮಧ್ಯಾಹ್ನ ತಾಲೂಕು ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ. ಮೈಸೂರು- ಕೊಡಗು ಮಾಜಿ ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ಎನ್.ಮಹೇಶ್‌, ಮಾಜಿ ಶಾಸಕ ಎಸ್.ಬಾಲರಾಜು, ಮಾಜಿ ಎಂಎಲ್‌ಸಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ತಾಲೂಕಿನ ಕೆರೆ ನೀರಿಗಾಗಿ ಕಾಲ್ನಡಿಗೆ ಜಾಥಾಗೆ ರೈತರು, ಬಿಜೆಪಿ ಮುಂಚೂಣಿ ಮುಖಂಡರು,ಕಾರ್ಯಕರ್ತರು,ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.