ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸೆ.೨೮ರಂದು ರೇಬಿಸ್ ದಿನಾಚರಣೆಯಿದ್ದು, ಅಷ್ಟರಲ್ಲಿ ಜಿಲ್ಲೆಯಲ್ಲಿ ಶೇ.೧೦೦ರಷ್ಟು ರೇಬಿಸ್ ಲಸಿಕೆ ಹಾಕುವುದನ್ನು ಪೂರ್ಣಗೊಳಿಸಬೇಕು ಹಾಗೂ ಶಾಲಾ ಕಾಲೇಜುಗಳು, ಕೊಳಚೆ ಪ್ರದೇಶ ಹಾಗೂ ಮೊರಾರ್ಜಿ ವಸತಿ ಶಾಲೆಗಳಲ್ಲಿ ಅಭಿಯಾನ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಘಟಕಜ ಜಿಲ್ಲಾ ಸರ್ವೇಕ್ಷಣ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ನಗರಸಭೆ ಆಯುಕ್ತರು, ಪಶುವೈಜ್ಞಾಧಿಕಾರಿ ಮತ್ತು ಮುಖ್ಯ ಪ್ರಾಣಿ ನಿರೀಕ್ಷಕರು ಹೊಣೆಗಾರರಾಗುತ್ತಾರೆಂದು ತಿಳಿಸಿದರು. ಲಸಿಕೆ ಕುರಿತು ಪ್ರಚಾರ ಮಾಡಿ
ಈ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣ ವಾಟ್ಸಪ್‌ಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಇಂದಿನಿಂದಲೇ ಆರಂಭಿಸಿ ಎಂದರು. ಮಾರುಕಟ್ಟೆಗಳಲ್ಲಿ, ಚಿಕನ್, ಮಟನ್ ಅಂಗಡಿಗಳ ಸುತ್ತಮುತ್ತಲು ತ್ಯಾಜ್ಯ ಶೇಖರಣೆಯಾಗದಂತೆ ಎಚ್ಚರವಹಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಅಂಗಡಿ ಮಾಲೀಕರಿಗೆ ಎಲ್ಲೆಂದರಲ್ಲಿ ಕಸ ಹಾಕದಂತೆ ಎಚ್ಚರಿಕೆ ನೀಡಿ ಸ್ವಚ್ಛತೆ ಕಾಪಾಡಲು ಜಾಗೃತಿ ಮೂಡಿಸಬೇಕು, ನಾಯಿಗಳ ಹಾವಳಿ ತಡೆಗಟ್ಟಲು ನಗರಸಭೆ ಪಶು ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ಸಾಮಾಜಿಕ ಸಮಸ್ಯೆಗೆ ಪರಿಹರಿಸಬೇಕು ಎಂದರು.ಜಿಲ್ಲೆಯಾದ್ಯಂತ ೧೮೯ ಜನಕ್ಕೆ ಹಾವು ಕಡಿತಕ್ಕೆ ಒಳಗಾಗಿದ್ದು, ಒಬ್ಬರು ಸಾವನ್ನಪ್ಪಿದ್ದರು ಕಂಡು ಬಂದಿದೆಯೆಂದು ಡಾ.ಚಾರಿಣಿ ತಿಳಿಸಿದರು. ಭಾರತ ಸರ್ಕಾರವು ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾರ್ಯಕ್ರಮ ಪ್ರಾರಂಭಿಸಿದ್ದು, ರಾಜ್ಯಕ್ಕೆ ೨೦೨೩-೨೪ರಲ್ಲಿ ಈ ಕಾರ್ಯಕ್ರಮಕ್ಕೆ ತರಬೇತಿ ಹಾಗೂ ಮೇಲ್ವಿಚಾರಣೆ ಹಾಗೂ ಸರ್ವೇಕ್ಷಣೆಗಾಗಿ ಅನುದಾನ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಸ್ವಚ್ಛತೆ ಕಾಪಾಡಬೇಕು
ಆಹಾರ ಧಾನ್ಯಗಳ ದಾಸ್ತಾನು ಇರುವಲ್ಲಿ ಜಾಗಗಳಲ್ಲಿ ಈ ಇಲಿಗಳ ಕಾಟ ಜಾಸ್ತಿಯಾಗಿರುತ್ತದೆ. ಆದ್ದರಿಂದ ಸಂಗ್ರಹಣೆ ಅಥವಾ ಶೇಖರಣೆ ಮಾಡುವ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾವುದೇ ಪ್ರಾಣಿಗಳು ಕಚ್ಚಿದರೆ ತಕ್ಷಣ ತಂದೆ-ತಾಯಿ, ಪೋಷಕರು ಅಥವಾ ವೈದ್ಯರಿಗೆ ವರದಿ ಮಾಡುವಂತೆ ಮನವಿ ಮಾಡಿದರು. ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿದಾಗ ಈ ಪ್ರಾಣಿ ಕಡಿತದ ಪರಿಣಾಮ ಹೊಡೆದೊಡಿಸಬಹುದು ಎಂದು ಡಾ.ಚಾರಣಿ ತಿಳಿಸಿದರು.ಸಭೆಯಲ್ಲಿ ಡಿಹೆಚ್‌ಓ ಡಾ.ಜಗದೀಶ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ನಾರಾಯಣಸ್ವಾಮಿ ಇದ್ದರು.