ಹಸಿರು ಮತ್ತು ಸ್ವಚ್ಛ ಚಿತ್ರದುರ್ಗಕ್ಕಾಗಿ ಓಟ ಕಾರ್ಯಕ್ರಮ ಕುರಿತಂತೆ ಕಾಗಜ್ ಫೌಂಡೇಷನ್‌ನ ಕವಿತಾರೆಡ್ಡಿ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶ್ವ ಪರಿಸರ ದಿನದ ಅಂಗವಾಗಿ, ಹಸಿರು ಮತ್ತು ಸ್ವಚ್ಛ ಚಿತ್ರದುರ್ಗಕ್ಕಾಗಿ ಓಟ ಕಾರ್ಯಕ್ರಮವನ್ನು ಜೂನ್ 7ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವುದಾಗಿ ಕಾಗಜ್ ಫೌಂಡೇಶನ್‍ನ ಕವಿತಾ ರೆಡ್ಡಿ ತಿಳಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾಗಜ್ ಫೌಂಡೇಶನ್ ಸುಸ್ಥಿರತೆ, ಘನತೆ ಮತ್ತು ಸಮಾನತೆಯ ದೃಷ್ಟಿಕೋನದಿಂದ ಅಭಿವೃದ್ಧಿಯನ್ನು ಮರುಕಲ್ಪಿಸುವ ತಳಮಟ್ಟದ ಲಾಭರಹಿತ ಸಂಸ್ಥೆಯಾಗಿದೆ. ಪರಿಸರ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ವೇಗಗೊಳಿಸುತ್ತಿದ್ದು, ಮರ ನೆಡುವ ಅಭಿಯಾನ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ಹಕ್ಕುಗಳ ಜಾಗೃತಿ ಮತ್ತು ಸಮುದಾಯ ನೇತೃತ್ವದ ಕಾರ್ಯಕ್ರಮಗಳ ಮೂಲಕ ಕಾರ್ಯರೂಪಕ್ಕೆ ತರುತ್ತಿದೆ ಎಂದರು.
ಬೆಂಗಳೂರಿನಲ್ಲಿ ಕಾಗಜ್ ಫೌಂಡೇಶನ್ 2012ರಲ್ಲಿ ‘ರನ್ ಫಾರ್ ಕಾನ್’ ಅನ್ನು ಪ್ರಾರಂಭಿಸಿದ್ದು, ಬಲವಾದ ಓಟಗಾರರ ಸಮುದಾಯದೊಂದಿಗೆ 35ಕ್ಕೂ ಹೆಚ್ಚು ಟೈಮ್ಸ್ ರನ್‍ಗಳನ್ನು ಆಯೋಜಿಸಿದೆ. ಈ ಹಿನ್ನಲೆಯಲ್ಲಿ ಜೂನ್ 7ರ ಭಾನುವಾರ ಬೆಳಗ್ಗೆ 5 ರಿಂದ 9ರವರೆಗೆ ವಿಶ್ವ ಪರಿಸರ ದಿನದ ಅಂಗವಾಗಿ, ‘ಹಸಿರು ಮತ್ತು ಸ್ವಚ್ಛ ಚಿತ್ರದುರ್ಗಕ್ಕಾಗಿ’ ಶೀರ್ಷಿಕೆಯಡಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿಮೀ ಓಟವನ್ನು ಆಯೋಜಿಸಲಾಗಿದೆ. ಈ ಓಟ ಉಚಿತವಾಗಿದ್ದು ಸುಮಾರು 1000 ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇವರಿಗೆ ಟಿ-ಶರ್ಟ್, ಮರುಬಳಕೆ ಮಾಡಬಹುದಾದ ನೀರಿನ ಬಾಟಲ್, ಫಿನಿಶರ್ ಪದಕ, ಇ-ಪ್ರಮಾಣಪತ್ರ ನೀಡಲಾಗುವುದು. ತಮ್ಮ ಹೆಸರನ್ನು ನೋಂದಾಯಿಸಲು 9108167001, 9342016482 ಈ ದೂರವಾಣಿಯನ್ನು ಸಂಪರ್ಕ ಮಾಡಬಹುದಾಗಿದೆ ಎಂದರು.ವರ್ಷವಿಡೀ ನಾಗರಿಕ ಗುಂಪುಗಳು, ಶಾಲೆಗಳು, ಕಾಲೇಜುಗಳ ಸಹಯೋಗದೊಂದಿಗೆ ಮರ ನೆಡುವ ಅಭಿಯಾನ, ಸ್ವಚ್ಛತಾ ಅಭಿಯಾನ, ಘನತ್ಯಾಜ್ಯ ನಿರ್ವಹಣೆ ಜಾಗೃತಿ ಕಾರ್ಯಕ್ರಮಗಳನ್ನು ಸಹ ಪ್ರಾರಂಭಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ 2026ರಲ್ಲಿ ಎಸ್ಎಸ್ಎಲ್‌ಸಿ, ಪರೀಕ್ಷೆಯಲ್ಲಿ 590 ಅಂಕಗಳನ್ನುಗಳಿಸಿದ ವಿದ್ಯಾರ್ಥಿನಿಯರಿಗೆ 2500 ನಗದು ಹಾಗೂ ಸ್ಮರಣಿಕೆ ಹಾಗೂ ಪಿಯು ಪರೀಕ್ಷೆಯಲ್ಲಿ 550 ಅಂಕಗಳನ್ನುಗಳಿಸಿದ ವಿದ್ಯಾರ್ಥಿನಿಯರಿಗೆ 3500 ನಗದು ಹಾಗೂ ಸ್ಮರಣಿಕೆ ನೀಡಲಾಗುವುದು. ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯಾಗಿರಬೇಕು, ಅಧಾರ್ ಕಾರ್ಡ, ಅಂಕಪಟ್ಟಿ ಹಾಗೂ ಕಾಲೇಜಿನ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ವಾಟ್ಸಾಪ್‍ನಲ್ಲಿ ನೊಂದಾಯಿಸಲು ಸೆಡ್ ರಿಜಿಸ್ಟರ್ ಫಾರಂ ಎಂದು 9642016482 ಇಲ್ಲಿಗೆ ಸಂದೇಶವನ್ನು ಕಳುಹಿಸಲು ಕೋರಲಾಗಿದೆ. ಕಾಗಜ್ ಫೌಂಡೇಶನ್ ಶುಭ, ರಂಗಸ್ವಾಮಿ, ಸೈಯದ್ ಪ್ರಕಾಶ್ ರಾಮನಾಯ್ಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.