ವಿಹಿಂಪ ಸ್ಥಾಪನಾ ದಿನದ ಅಂಗವಾಗಿ ರಾಧಾ ಕೃಷ್ಣ ವೇಷಧಾರಿ ಸ್ಪರ್ಧೆ

| Published : Aug 09 2025, 12:00 AM IST

ವಿಹಿಂಪ ಸ್ಥಾಪನಾ ದಿನದ ಅಂಗವಾಗಿ ರಾಧಾ ಕೃಷ್ಣ ವೇಷಧಾರಿ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹತ್ತು ವರ್ಷಗಳ ಒಳಪಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಧಾರಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಕರಡಿಗಾಲ ಹರೀಶ್ ಹೇಳಿದರು. ವಿಜೇತ ಮೊದಲ ೧೦ ಮಕ್ಕಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ, ಭಾಗವಹಿಸುವ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ನೀಡಲಾಗುವುದು. ವಯೋಮಿತಿ ೧೦ ವರ್ಷದೊಳಗಿರುವ ಮಕ್ಕಳಿಗೆ ಮಾತ್ರ ಅವಕಾಶವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹತ್ತು ವರ್ಷಗಳ ಒಳಪಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಧಾರಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಕರಡಿಗಾಲ ಹರೀಶ್ ಹೇಳಿದರು.

ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದೇ ಭಾನುವಾರ ಬೆಳಗ್ಗೆ ೧೦.೩೦ ಕ್ಕೆ ಸಕಲೇಶಪುರದ ಪುರಭವನದಲ್ಲಿ ವಿಶ್ವ ಹಿಂದು ಪರಿಷತ್ತು ಸ್ಥಾಪನಾ ದಿನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಧಾ ಕೃಷ್ಣಾ ವೇಷಧಾರಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ದಿವ್ಯ ಸಾನ್ನಿಧವನ್ನು ಶ್ರೀ ಷ.ಬ್ರ. ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ತೆಂಕಲಗೊಡು ಬೃಹನ್ಮಠ, ಯಸಳೂರು ವಹಿಸಲಿದ್ದು, ಅಧ್ಯಕ್ಷತೆಯನು ಶಾಸಕ ಸಿಮೆಂಟ್ ಮಂಜುನಾಥ್, ಗೌರವ ಅಧ್ಯಕ್ಷತೆಯನ್ನು ಅನೂಪ್, ಅಧ್ಯಕ್ಷರು, ವಿಶ್ವ ಹಿಂದೂ ಪರಿಷದ್, ಹಾಸನ ಜಿ, ಮುಖ್ಯ ಅತಿಥಿಗಳಾಗಿ ನಿರಂಜನ್ ಕುಮಾರ್ ಪೊಲೀಸ್ ವೃತ್ತ ನಿರೀಕ್ಷಕರು, ಸಕಲೇಶಪುರ, ಮುಖ್ಯ ಬೌದ್ಧಿಕ್ ಪ್ರೇಮಾನಂದ ಶೆಟ್ಟಿ, ಪ್ರಾಂತ ಮಂದಿರ ಅರ್ಚಕ ಪುರೋಹಿತ್ ಪ್ರಮುಖ್, ವಿಜಯ್ ಕುಮಾರ್ ಬಾಳೆಗದ್ದೆ, ವಿಹಿಂಪ, ಜಿ ಉಪಾಧ್ಯಕ್ಷರು ಕಿಶೋರ್ ಶೆಟ್ಟಿ, ಬಜರಂಗದಳ, ಜಿ ಸಹ ಸಂಯೋಜಕ್ ಭಾಗವಹಿಸಲಿದ್ದಾರೆ.

ವಿಜೇತ ಮೊದಲ ೧೦ ಮಕ್ಕಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ, ಭಾಗವಹಿಸುವ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ನೀಡಲಾಗುವುದು. ವಯೋಮಿತಿ ೧೦ ವರ್ಷದೊಳಗಿರುವ ಮಕ್ಕಳಿಗೆ ಮಾತ್ರ ಅವಕಾಶವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಬಜರಂಗದಳ ತಾಲೂಕು ಸಹ ಸಂಯೋಜಕ ವಿಷ್ಣುರಾವ್ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ದಿನಾಂಕ ೧೪/೮/೨೦೨೫ರ ಗುರುವಾರ ಸಂಜೆ ೬ ಗಂಟೆಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕುಶಾಲನಗರ ಒಕ್ಕಲಿಗರ ಸಮುದಾಯದ ವರೆಗೆ ಪಂಜಿನ ಮೆರವಣಿಗೆ ನಂತರ ಸಮುದಾಯದ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಾರ್ಜುವಳ್ಳಿ ,ಗೌರವ ಅಧ್ಯಕ್ಷತೆಯನ್ನು ಶಾಸಕ ಸಿಮೆಂಟ್ ಮಂಜುನಾಥ್ ಅಧ್ಯಕ್ಷತೆಯನ್ನು ಉದ್ಯಮಿ ಶಿವಕುಮಾರ್ ಜಾಗಟೆ, ಮುಖ್ಯ ಬೌದ್ದಿಕ್ ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ, ಮುಖ್ಯ ಅತಿಥಿಯಾಗಿ ನೀಲಕಂಠಪ್ಪ ನಿವೃತ್ತ ಸೈನಿಕರು ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಹಿಂದೂ ಬಾಂಧವರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ತಾಲೂಕು ಅಧಕ್ಷ ಬಾಲಕೃಷ್ಣ ಬಿರಡಹಳ್ಳಿ, ಮಂಜುನಾಥ್ ಸಂಘಿ, ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ್, , ಮುಖಂಡರುಗಳಾದ ರವಿ ಹಾರ್ಲೆಕೂಡಿಗೆ, ಸುರೇಶ್ ಹೆತ್ತೂರು ಉಪಸ್ಥಿತರಿದ್ದರು.