ಸಾರಾಂಶ
ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಇಳಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರದ ಬಳಿ ನದಿಯಲ್ಲಿ ರಾಫ್ಟಿಂಗ್ ಸಾಹಸ ಕ್ರೀಡೆ ಸ್ಥಗಿತಗೊಂಡಿದೆ.
ಮಡಿಕೇರಿ: ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಇಳಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರದ ಬಳಿ ನದಿಯಲ್ಲಿ ರಾಫ್ಟಿಂಗ್ ಸಾಹಸ ಕ್ರೀಡೆ ಸ್ಥಗಿತಗೊಂಡಿದೆ.
ಕಳೆದ ಬಾರಿಯಂತೆ ಈ ಬಾರಿ ಕೂಡ ಮಾರ್ಚ್ ಆರಂಭದಲ್ಲಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದೆ.ಈ ಹಿನ್ನೆಲೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರಕ್ಕೆ ಪ್ರವಾಸಿಗರ ಭೇಟಿ ಸಂಖ್ಯೆ ಕೂಡ ಇಳಿಕೆಯಾಗಿದ್ದು ಈ ಎಲ್ಲ ಕಾರಣಗಳಿಂದ ರಾಫ್ಟಿಂಗ್ ಕ್ರೀಡೆ ಸೋಮವಾರದಿಂದ ರದ್ದುಗೊಂಡಿದೆ.
-------------------------------------ದೇವಾಲಯದ ಬಗ್ಗೆ ಸುಳ್ಳು ಸುದ್ದಿ: ದೂರು ದಾಖಲು
ಕನ್ನಡಪ್ರಭ ವಾರ್ತೆ ಸಿದ್ದಾಪುರಇಲ್ಲಿನ ಶ್ರೀ ಮುತ್ತಪ್ಪ ಭಗವತಿ ದೇವಾಲಯದಲ್ಲಿ ವಸೂರಿ ಮಾಲಾ ಕೋಲವಿದೆ ಎಂದು ಸುಳ್ಳು ಸುದ್ದಿಗಳನ್ನು ವಾಟ್ಸಪ್ ಮೂಲಕ ನೀಡಿ ಸಾರ್ವಜನಿಕರಿಗೆ ಹಾಗೂ ದೇವಾಲಯದ ಭಕ್ತರಿಗೆ ತಪ್ಪು ಮಾಹಿತಿ ನೀಡುತ್ತಿರುವ ಸಿದ್ದಾಪುರ ಕೇಸರಿ ಯೂತ್ ಮೂಮೆಂಟ್ ಕ್ಲಬ್ ನ ಅಧ್ಯಕ್ಷರ ವಿರುದ್ಧ ಮುತ್ತಪ್ಪ ಭಗವತಿ ದೇವಾಲಯದ ಸಮಿತಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದೆ.
ಸಿದ್ದಾಪುರ ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವ ಮತ್ತು ತೆರೆ ಮಹೋತ್ಸವ ಮಾರ್ಚ್ 3 ಹಾಗೂ 4 ರಂದು ಆಯೋಜಿಸಲಾಗಿದೆ. ಈ ಸಂದರ್ಭ ವಿವಿಧ ದೇವರ ತೆರೆಗಳು ನಡೆಯಲಿದೆ. ಮಾ. 3 ರಂದು ನಡೆದ ವಸೂರಿಮಾಲಾ ದೇವಿಯ ತೆರೆಯು ದೇವಾಲಯದ 1 ಹಾಗೂ ಭಕ್ತರ ಹರಕೆಯ 3 ಸೇರಿದಂತೆ ಒಟ್ಟು 4 ತೆರೆ ಇದೆ. ದೇವಾಲಯದ ಹೆಸರನ್ನು ಹಾಳು ಮಾಡಲು ನಡೆಸಿರುವ ಹುನ್ನಾರ ಹಾಗೂ ಈ ಹಿಂದೆ ಕೂಡ ಈತ ದೇವಾಲಯದ ಹೆಸರಿಗೆ ಕಳಂಕ ತರುವಂತಹ ಮಾಹಿತಿಗಳನ್ನು ತನ್ನ ಸ್ಟೇಟಸ್ ನಲ್ಲಿ ಹಾಕಿರುವುದಾಗಿ ದೇವಾಲಯ ಸಮಿತಿ ಆರೋಪಿಸಿದೆ. ಸುಳ್ಳು ಸುದ್ದಿ ಹಬ್ಬಿಸಿ ಪ್ರಸಿದ್ಧ ಶ್ರೀ ಮುತ್ತಪ್ಪ ಭಗವತಿ ದೇವಾಲಯದ ಹೆಸರಿಗೆ ಕಳಂಕ ತರುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರು ನೀಡಿದ್ದಾರೆ.