ಸಾರಾಂಶ
ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹರುವನಹಳ್ಳಿ ಗ್ರಾಮದ ರಘುರಾಮ್ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ,ಕಡೂರು
ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹರುವನಹಳ್ಳಿ ಗ್ರಾಮದ ರಘುರಾಮ್ ಅವಿರೋಧವಾಗಿ ಆಯ್ಕೆಯಾದರು.ತಂಗಲಿ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷಗಾಧಿಗೆ ನಡೆದ ಚುನಾವಣೆಯಲ್ಲಿ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಆಗಿದ್ದ ತಾಲೂಕು ಕೃಷಿ ಇಲಾಖೆ ನಿರ್ದೇಶಕ ಅಶೋಕ್ ರವರು ರಘುರಾಮ್ ರವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನಂತರದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ರಘುರಾಮ್ ಮಾತನಾಡಿ ಸಾಮಾನ್ಯ ವರ್ಗದಿಂದ ಬಂದಿರುವ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಸದಸ್ಯರಿಗೆ ಅಭಿನಂದಿಸುತ್ತೇನೆ. ನಿಮ್ಮೆಲ್ಲರ ಸಲಹೆ, ಸಹಕಾರ ಪಡೆದು ಈ ಬಾರಿ ಬೇಸಿಗೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ವ್ಯವಸ್ಥಿತವಾಗಿ ನೀರು ನೀಡಲು ಮೊದಲ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿ ಕೃತಜ್ಞತೆ ಅರ್ಪಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಟಿ.ಗಂಗಾಧರನಾಯ್ಕ, ಪರಮೇಶ್ವರಪ್ಪ, ರಮೇಶ್, ಅರತಿ, ಕಾವೇರಿಬಾಯಿ, ವಿಜಯಬಾಯಿ, ಸುಧಾ, ಜ್ಯೋತಿ, ಗಿರೀಶ್ ಪಾಲ್ಗೊಂಡಿದ್ದರು.
ಗ್ರಾಮಸ್ಥರಾದ ರಾಜಪ್ಪ, ಶಿವಣ್ಣ, ಲೋಕೇಶ್, ಸೀನಪ್ಪ, ಮನು, ಪೂಜಾರಪ್ಪ, ಪಿಡಿಓ ಸುನೀಲ್‍ಕುಮಾರ್, ಕಾರ್ಯದರ್ಶಿ ಸುಶ್ಮಿತಾ, ಕೃಷ್ಣನಾಯ್ಯ ಟಿ.ಪಿ ಮತ್ತಿತರರು ಇದ್ದರು.14ಕೆಕೆಡಿಯು2.
ಕಡೂರು ತಾಲೂಕು ತಂಗಲಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಹರುವನಹಳ್ಳಿ ರಘುರಾಮ್ ಅವಿರೋಧ ಆಯ್ಕೆಯಾದರು ಸದಸ್ಯರು ಅಧ್ಯಕ್ಷರನ್ನು ಅಭಿನಂದಿಸಿದರು.