ಸಾರಾಂಶ
ರಾಯಬಾಗ ಪಟ್ಟಣ ಪಂಚಾಯತಿಯ ಅಶೋಕ ಅಂಗಡಿ (ಸಾಮಾನ್ಯ ವರ್ಗ) ಅಧ್ಯಕ್ಷರಾಗಿ ಮತ್ತು ಭಾರತಿ ಜಾಧವ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ರಾಯಬಾಗ
ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಹಾಗೂ ಶಾಸಕ ಡಿ.ಎಂ. ಐಹೊಳೆ ನೇತೃತ್ವದಲ್ಲಿ ಅಶೋಕ ಅಂಗಡಿ (ಸಾಮಾನ್ಯ ವರ್ಗ) ಅಧ್ಯಕ್ಷರಾಗಿ ಮತ್ತು ಭಾರತಿ ಜಾಧವ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಬೊಬ್ಬರೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಆಗಿದ್ದ ಹಸೀಲ್ದಾರ ಸುರೇಶ ಮುಂಜೆ ತಿಳಿಸಿದರು.
ಬೆಂಬಲಿಗರು ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಮುಖ್ಯಾಧಿಕಾರಿ ಎಸ್.ಆರ್. ಮಾಂಗ, ಸದಸ್ಯರಾದ ಸಂತೋಷ ಮೇತ್ರಿ, ಸುರೇಶ ಮಾಳಿ, ಗಣೇಶ ಕಾಂಬಳೆ, ಹಣಮಂತ ಸಾನೆ, ಡಾ.ಗಾಯತ್ರಿ ಬಾನೆ, ಜಿಯಾವುಲ್ಲಾ ಮುಲ್ಲಾ, ಲಕ್ಷ್ಮೀ ಗಡ್ಡೆ, ಅಪ್ಪಾಜಿ ಪೂಜಾರಿ, ಕಲಂದರ ಅತ್ತಾರ, ಲಕ್ಷ್ಮೀ ನಂದ್ಯಾಳೆ, ಜಾವೇದ ಮೊಮಿನ್, ಸರಸ್ವತಿ ತರಾಳ ಹಾಗೂ ರಾಯಬಾಗ ಮಂಡಲ ಬಿಜೆಪಿ ಅಧ್ಯಕ್ಷ ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಬಸವರಾಜ ಡೋಣವಾಡೆ, ಚಿದಾನಂದ ಹಳಿಂಗಳಿ, ಮಹೇಶ ಕರಮಡಿ ಸೇರಿ ಅನೇಕರು ಇದ್ದರು.