ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಮಳೆ ಕೊರತೆ, ತೀವ್ರ ಬರಗಾಲದ ಸಮಯದಲ್ಲಿ ರೈತರು ಬದುಕು ಕಟ್ಟಿಕೊಳ್ಳುವುದೇ ದುಸ್ತರ ಎನ್ನುವಂತಹ ಸಮಯದಲ್ಲಿ ಶ್ರೀರಾಮಭಕ್ತನೊಬ್ಬ ತಮ್ಮ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದ ಜೋಳವನ್ನು ಮಾರಾಟ ಮಾಡಿ ಬಂದ ಹಣವನ್ನೇಲ್ಲಾ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಗೆ ದೇಣಿಗೆ ನೀಡಿ ಶ್ರೀರಾಮಲಲ್ಲಾ ಮೇಲಿನ ಅಪಾರ ಭಕ್ತಿಯನ್ನು ಬಹಿರಂಗ ಪಡಿಸಿದ್ದಾರೆ.
ಜಿಲ್ಲೆ ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದ ಸಣ್ಣ ಕರಿಯಪ್ಪ ಅಂಬಿಗೇರಾ ಅವರೇ ಪ್ರಭು ಶ್ರೀರಾಮನ ಮೇಲಿನ ಅಗಾದ ಭಕ್ತಿಯಿಂದ ಈ ಕಾರ್ಯವನ್ನು ಮಾಡಿದ್ದಾರೆ. ಗೋಮರ್ಸಿ ಗ್ರಾಮದ ಲಕ್ಷ್ಮೀ ಹಾಗೂ ಸಣ್ಣ ಕರಿಯಪ್ಪ ಅಂಬಿಗೇರಾ ಅವರು ಪ್ರಸಕ್ತ ಸಾಲಿನಲ್ಲಿ ತಮ್ಮ 3 ಎಕರೆ ಜಮೀನಿನಲ್ಲಿ ಜೋಳವನ್ನು ಹಾಕಿದ್ದು, ಪ್ರತಿ ವರ್ಷ ಎಕರೆಗೆ 40 ಚೀಲ ಬೆಳೆಯುತ್ತಿದ್ದವರು ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಹಾಗೂ ಬರಗಾಲ ಬಿದಿದ್ದರಿಂದ 120 ಚೀಲಗಳ ಬದಲಾಗಿ ಕೇಲವ 80 ಚೀಲ ಜೋಳ ಬೆಳೆದಿದ್ದಾರೆ. ಇಂತಹ ಕಷ್ಟದಲ್ಲಿಯೂ ಸಹ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೆ ತಮ್ಮದೇ ಆದ ರೀತಿಯಲ್ಲಿ ರಾಮ ಭಕ್ತಿಯನ್ನು ತೋರಲು ಖರ್ಚು ವೆಚ್ಚಕ್ಕಾಗಿ 30 ಚೀಲಗಳನ್ನು ಬಿಟ್ಟು ಉಳಿದ 50 ಚೀಲ ಜೋಳವನ್ನು ಮಾರಾಟ ಮಾಡಿ ಬಂದ 91,870 ರು. ಮೊತ್ತವನ್ನು ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಟ್ರಸ್ಟ್‌ಗೆ ಮಂಗಳವಾರ ಆರ್‌ಟಿಜಿಎಸ್ ಮಾಡಿದ್ದಾರೆ.ವಿಚಿತ್ರ ಸಂಕಲ್ಪ500 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆಗೊಂಡಿದೆ ಇದೇ ವರ್ಷ ಸಣ್ಣ ಕರಿಯಪ್ಪ ಅಂಬಿಗೇರಾ ಅವರು 50 ವರ್ಷವಾಗಿದ್ದರಿಂದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಏನಾದರು ಮಾಡಬೇಕು ಎನ್ನುವ ಸದುದ್ದೇಶದಿಂದ ಅಯೋಧ್ಯೆ ಶ್ರೀರಾಮ ಮಂದಿರ ಲೋಪಾರ್ಕಣೆ ದಿನವಾದ ಸೋಮವಾರ ಈ ವಿಚಿತ್ರ ಸಂಕಲ್ಪ ಮಾಡಿ ಜೋಳವನ್ನು ಮಾರಾಟ ಮಾಡಿ ಅದರಿಂದ ಬಂದ 91,870 ರು. ಇಡೀ ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖಾಂತರ ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ಗೆ ರವಾನಿಸಿ ರಾಮ ಭಕ್ತಿಗೆ ಪಾರವಿಲ್ಲ ಎಂಬುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.