ರಾಯಚೂರು: ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ವಿವೇಕ ಪೂರ್ಣಿಮೆ

| Published : Jan 27 2024, 01:17 AM IST

ರಾಯಚೂರು: ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ವಿವೇಕ ಪೂರ್ಣಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ವಿಷಯದ ಕುರಿತು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆಹಾರದ ಕ್ರಮ, ಆಸ್ಪತ್ರೆ ರಹಿತ ಜೀವನ ನಡೆಸುವ ಬಗ್ಗೆ ಅಪರೂಪದ ಸಂಗತಿಗಳನ್ನು ಡಾ.ಮಲ್ಲಿಕಾರ್ಜುನ ಡಂಬಳವರು ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ಬಪ್ಪೂರ ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಆವರಣದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ವಿವೇಕ ಪೂರ್ಣಿಮೆ’ಕಾರ್ಯಕ್ರಮದ ಉದ್ಘಾಟನೆಯನ್ನು ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರ ಬಿ. ಅವರು ದೀಪ ಬೆಳಗಿಸುವುದರ ಮೂಲಕ ಹಾಗೂ ಅಯೋಧ್ಯಾಧಿಪತಿ ಪ್ರಭು ಶ್ರೀರಾಮ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನೆರವೇರಿಸಿ ವಿವೇಕಾನಂದರ ಕುರಿತು ಸ್ಫೂರ್ತಿಯುತ ಮಾತುಗಳನ್ನಾಡಿದರು.

ಮುಖ್ಯ ಪ್ರವಚನಕಾರರಾಗಿ ಆಗಮಿಸಿದ್ದ ಶ್ರೀ ಪರಮಹಂಸ ಅಥರ್ವ ಆಯುರ್ಧಾಮ ಆಯುರ್ವೇದ ಹಾಗೂ ಯೋಗ ಕೇಂದ್ರ ಶಿವಮೊಗ್ಗದ ಸಂಸ್ಥಾಪಕರಾದ ಡಾ.ಮಲ್ಲಿಕಾರ್ಜುನ ಡಂಬಳ ಅವರು ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ವಿಷಯದ ಕುರಿತು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆಹಾರದ ಕ್ರಮ, ಆಸ್ಪತ್ರೆ ರಹಿತ ಜೀವನ ನಡೆಸುವ ಬಗ್ಗೆ ಅಪರೂಪದ ಸಂಗತಿಗಳನ್ನು ಹಂಚಿಕೊಂಡರು. ಜೊತೆಗೆ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುವುದರಿಂದ ಆಧ್ಯಾತ್ಮಿಕ ಜೀವನ ನಡೆಸಬಹುದೆಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಿಂಧನೂರು ಹೆಲ್ತ್ ಕ್ಲಬ್ ಸಂಸ್ಥಾಪಕ ಕೆ.ಲಕ್ಷ್ಮಯ್ಯ ಶೆಟ್ಟಿ ಅವರು, ಪ್ರಪಂಚಕ್ಕೆ ಭಾರತ ನೀಡಿದ ಆಯುರ್ವೇದ ಚಿಕಿತ್ಸಾ ಪದ್ಧತಿ ಮತ್ತು ಭಾರತದ ಶ್ರೇಷ್ಠ ಕೊಡುಗೆಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಸದಾನಂದ ಮಹಾರಾಜ್ ಆಶೀರ್ವಚನ ನೀಡಿದರು. ಈ ವೇಳೆ ಆಶ್ರಮದ ಭಕ್ತರು ಹಾಜರಿದ್ದರು.