ಮಳೆ: ಬೈಕ್‌ ಮೇಲೆ ಮರ ಬಿದ್ದು ಸವಾರನ ಕಾಲು ಮುರಿತ

| Published : Jun 03 2024, 12:32 AM IST

ಮಳೆ: ಬೈಕ್‌ ಮೇಲೆ ಮರ ಬಿದ್ದು ಸವಾರನ ಕಾಲು ಮುರಿತ
Share this Article
  • FB
  • TW
  • Linkdin
  • Email

ಸಾರಾಂಶ

ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ಮರ ಬಿದ್ದು ಬೈಕ್ ನಜ್ಜು ಗುಜ್ಜಾಗಿದ್ದು, ಸವಾರನ ಕಾಲು ಮರಿದ ಘಟನೆ ತಾಲೂಕಿನ ಹೊಸಕೆರೆ ಹಾಗಲವಾಡಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ಮರ ಬಿದ್ದು ಬೈಕ್ ನಜ್ಜು ಗುಜ್ಜಾಗಿದ್ದು, ಸವಾರನ ಕಾಲು ಮರಿದ ಘಟನೆ ತಾಲೂಕಿನ ಹೊಸಕೆರೆ ಹಾಗಲವಾಡಿಯಲ್ಲಿ ನಡೆದಿದೆ.

ಶೆಟ್ಟಿಹಳ್ಳಿ ಗ್ರಾಮದ ಸುರೇಶ್ ಎಂಬ ಬೈಕ್‌ ಸವಾರನ ಕಾಲು ಮುರಿದಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ತಕ್ಷಣ ಅಂಬ್ಯುಲೇಸ್ ಮುಂಖಾತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರಿ ಗಾಳಿ ಮಳೆಗೆ ಆನೆಕಲ್ಲು ಮನೆಯ ಮೇಲೆ ಹಾಗೂ ರಸ್ತೆಯಲ್ಲಿ ಬಿದ್ದವು‌. ಭರ್ಜರಿ ಮಳೆಗೆ ಸಣ್ಣಪುಟ್ಟ ಕೆರೆಕಟ್ಟಿಗಳಿಗೆ ನೀರು ಬಂದಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಲವು ಕಡೆಗಳಲ್ಲಿ ಮರಗಳು ರಸ್ತಗೆ ಉರುಳಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ರಾತ್ರಿಯಲ್ಲ ಕರೆಂಟ್ ಇಲ್ಲದೆ ರೈತರು ಪರದಾಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು‌, ರೈತರು ಭೂಮಿಯನ್ನ ಹದ ಮಾಡಿಕೊಂಡು‌ ಕೃಷಿ ಚಟುವಟಿಕೆಗಳನ್ನು ಆರಂಭ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನೂ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.