ಸಾರಾಂಶ
ಜಿಲ್ಲೆಯಲ್ಲಿ ಮಳೆ ಭಾನುವಾರ ಬಹುತೇಕ ಇಳಿಮುಖಗೊಂಡಿದೆ. ಮಡಿಕೇರಿ ಸೇರಿದಂತೆ ಹಲವು ಕಡೆ ಸಾಧಾರಣ ಮಳೆ ಸುರಿದಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಭಾನುವಾರ ಮಳೆ ಬಹುತೇಕ ಇಳಿಮುಖಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಲ್ಲಿ ಸಾಧಾರಣ ಮಳೆ ಸುರಿಯಿತು.ಮಳೆ ಕಡಿಮೆ ಇದ್ದರೂ ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ 4 ಜಾನುವಾರುಗಳು ಮೃತಪಟ್ಟಿವೆ. ಜೂನ್ ತಿಂಗಳ ಆರಂಭದಿಂದ ಇಲ್ಲಿಯ ವರೆಗೆ ಸುಮಾರು 21 ಜಾನುವಾರುಗಳು ಮೃತಪಟ್ಟಿವೆ.
ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಸುರೇಶ್ ಎಂಬವರಿಗೆ ಸೇರಿದ ಕೊಟ್ಟಿಗೆಯ ಗೋಡೆ ಬಿದ್ದು, ಹಸುವೊಂದು ಮೃತಪಟ್ಟಿದೆ. ಪೊನ್ನಂಪೇಟೆ ತಾಲೂಕಿನ ಯಶೋಧ ಎಂಬವರಿಗೆ ಸೇರಿದ 3 ಹಸುಗಳು ಮಳೆಯಿಂದ ಮೃತಟ್ಟಿವೆ.ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 12.15 ಮಿ.ಮೀ. ಮಳೆಯಾಗಿದೆ.
-----------------------ಮಹಡಿಯಿಂದ ಬಿದ್ದು ವ್ಯಕ್ತಿ ಸಾವು
ಸುಂಟಿಕೊಪ್ಪ: ಆಯ ತಪ್ಪಿ ಮಹಡಿ ಮೇಲಿಂದ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರೂ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಸುಂಟಿಕೊಪ್ಪದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದ್ಯಾ ಎಂಬವರ ಪತಿ, ಬೈಕ್ ಮೆಕಾನಿಕ್ ಶಶಿ( 40) ಮೃತರು. ತಮ್ಮ ಮನೆಯ ಹಿಂಭಾಗದಲ್ಲಿ ನಿಂತಿದ್ದ ವೇಳೆ ಆಯ ತಪ್ಪಿ ಶೀಟಿನ ಮೇಲೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡಿದ್ದ ಶಶಿ ಅವರನ್ನು ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.-------------------------
ಪೊನ್ನಂಪೇಟೆ-ಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನಲ್ಲಿ ಸುರಿದ ಮಳೆಗೆ ಪೊನ್ನಂಪೇಟೆ-ಕುಟ್ಟ ನಡುವಿನ ರಾಜ್ಯ ಹೆದ್ದಾರಿ 87 ರಲ್ಲಿ ಭೂಕುಸಿತ ಉಂಟಾಗಿದೆ. ಭೂ ಕುಸಿತದಿಂದ ರಸ್ತೆಯ ಒಂದು ಭಾಗ ಸಂಪೂರ್ಣ ಕುಸಿತವಾಗಿದೆ. ಪೂಜೆ ಕಲ್ಲು ಎಂಬ ಪ್ರದೇಶದಲ್ಲಿ ರಸ್ತೆ ಕುಸಿದಿರುವ ಹಿನ್ನೆಲೆ ಹೆದ್ದಾರಿಯಲ್ಲಿ ಸದ್ಯ ಸಂಚಾರವನ್ನು ಜಿಲ್ಲಾಡಳಿತ ಬಂದ್ ಮಾಡಿದೆ.ಕುಟ್ಟ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಪೊನ್ನಂಪೇಟೆ ಕುಟ್ಟ ಹೆದ್ದಾರಿಯಲ್ಲಿ ಭೂಕುಸಿತ ಆಗಿರುವ ಹಿನ್ನೆಲೆ ವಾಹನ ಸವಾರರು ಬಳಸಿ ಸಂಚರಿಸುವಂತಾಗಿದೆ.
ರಾಮ ತೀರ್ಥ ಹೊಳೆಯ ರಭಸಕ್ಕೆ ಹೆದ್ದಾರಿ ಕೊಚ್ಚಿ ಹೋಗಿದೆ. ಭೂಕುಸಿತದಿಂದ ಹರಿಯುವ ದಿಕ್ಕನ್ನೇ ರಾಮ ತೀರ್ಥ ಹೊಳೆ ಬದಲಿಸಿದೆ. ಸದ್ಯ ತೀವ್ರ ಮಳೆ ಹಿನ್ನೆಲೆ ಆಗಸ್ಟ್ 27 ರ ವರೆಗೆ ಹೆದ್ದಾರಿಯಲ್ಲಿ ಸಂಚಾರ ನಿಷೇಧ ಮಾಡಲಾಗಿದೆ.