ಸಾರಾಂಶ
ಕೇಂದ್ರ ಅಧ್ಯಯನ ತಂಡದ ಅಧಿಕಾರಿ ವರ್ಗ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ನೀರಲ್ಲಿ ಮುಳುಗಿ ಕೊಳೆತು ಹೋಗುತ್ತಿದೆ. ಇದರಿಂದಾಗಿ ಈರುಳ್ಳಿ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಆದಕಾರಣ ಈರುಳ್ಳಿ ಬೆಳೆ ಬೆಳೆದ ಪ್ರದೇಶಗಳಿಗೆ ತೆರಳಲಾಗುತ್ತಿದೆ.
ಹುಬ್ಬಳ್ಳಿ:
ಅತಿವೃಷ್ಟಿಯಿಂದಾಗಿ ಈ ವರ್ಷ ದೇಶದಲ್ಲೇ ಈರುಳ್ಳಿ ಬೆಳೆ ಕೊರತೆಯಾಗುವ ಸಾಧ್ಯತೆ ಇದೆ. ಅದಕ್ಕೆ ಈರುಳ್ಳಿ ಬೆಳೆಯ ಪ್ರದೇಶ ಹೇಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಲು ಕೇಂದ್ರದಿಂದ ಅಧ್ಯಯನ ತಂಡ ಧಾರವಾಡ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು,.ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಸೇರಿದಂತೆ ವಿವಿಧೆಡೆ ಮೂವರು ಅಧಿಕಾರಿಗಳ ತಂಡ ಈರುಳ್ಳಿ ಬೆಳೆದ ಹೊಲಗಳಿಗೆ ತೆರಳಿ ರೈತರೊಂದಿಗೆ ಸಂವಾದ ನಡೆಸಿತು.
ಈ ವೇಳೆ ತಂಡದ ಅಧಿಕಾರಿ ವರ್ಗ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ನೀರಲ್ಲಿ ಮುಳುಗಿ ಕೊಳೆತು ಹೋಗುತ್ತಿದೆ. ಇದರಿಂದಾಗಿ ಈರುಳ್ಳಿ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಆದಕಾರಣ ಈರುಳ್ಳಿ ಬೆಳೆ ಬೆಳೆದ ಪ್ರದೇಶಗಳಿಗೆ ತೆರಳಲಾಗುತ್ತಿದೆ. ರೈತರ ಅಭಿಪ್ರಾಯ ಪಡೆದು ಅವರಿಗೆ ಪ್ರೋತ್ಸಾಹಿಸಲು ನಾವು ಬಂದಿದ್ದೆವು. ರೈತರ ಅಭಿಪ್ರಾಯ ಪಡೆದು ಯೋಜನೆ ರೂಪಿಸಲಾಗುವುದು ಎಂದು ರೈತರಿಗೆ ವಿವರಿಸಿದರು.ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ ತಂಡದ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ವಿವರಿಸಿದರು. ಈರುಳ್ಳಿ ಬೆಳೆಗೆ ಎಂಎಸ್‌ಪಿ ದರ ನಿಗದಿಪಡಿಸಬೇಕು. ಅವಶ್ಯವಿದ್ದಲ್ಲಿ ರಫ್ತು ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಆಗ ಅಧಿಕಾರಿಗಳ ತಂಡ, ನೀವು ಹೇಳಿರುವ ಅಂಶಗಳನ್ನು ಲಿಖಿತವಾಗಿ ನೀಡಿ ಎಂದು ತಿಳಿಸಿತು. ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಹುಬ್ಬಳ್ಳಿ ತಹಸೀಲ್ದಾರ್ ಪ್ರಕಾಶ ನಾಶಿ, ಪೊಲೀಸ್ ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಸಹಾಯಕ ನಿರ್ದೇಶಕ ಉಮೇಶ ಪಾಟೀಲ, ರೈತರಾದ ಮಹಾಬಳೇಶ ಅಣ್ಣಿಗೇರಿ, ಪ್ರಕಾಶಗೌಡ ಹನಮರಡ್ಡಿ, ಶಿವಣ್ಣ ಹುಬ್ಬಳ್ಳಿ, ಡಾ. ತಾಜುದ್ದೀನ ಮುಲ್ಲಾನವರ, ಕಾಂತಪ್ಪ ಅಣ್ಣಿಗೇರಿ, ಅಣ್ಣಪ್ಪ ಕುಲಕರ್ಣಿ, ಪ್ರಕಾಶ ಹುಲಗೂರ, ಮುತ್ತಪ್ಪ ಕೊಳ್ಳಿ, ಸೈಯ್ಯದ ಬಾವಾಖಾನವರ, ಗೋಪಾಲ ಬಾನಗೊಂಡ, ರಾಮಪ್ಪ ನೆಲಗುಡ್ಡದ, ರಾಮಣ್ಣ ಅಣ್ಣಿಗೇರಿ ಸೇರಿದಂತೆ ಹಲವರಿದ್ದರು. ಜಿಲ್ಲಾಡಳಿತಕ್ಕೆ ಗೊತ್ತಿಲ್ಲಕೇಂದ್ರ ಅಧ್ಯಯನ ತಂಡ ಬರುವುದು ಜಿಲ್ಲಾಡಳಿತಕ್ಕೆ ಗೊತ್ತಿರಲಿಲ್ಲವಂತೆ. ಕೊನೆ ಕ್ಷಣದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ತಂಡದೊಂದಿಗೆ ಚರ್ಚೆ ನಡೆಸಿತು ಎಂದು ಮೂಲಗಳು ತಿಳಿಸಿವೆ.