ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾದ್ಯಂತ ಶನಿವಾರ ಮಳೆ ಬಹುತೇಕ ಇಳಿಮುಖಗೊಂಡಿದೆ. ಕೊಡಗು ಜಿಲ್ಲೆಯ ಸಿದ್ದಾಪುರ, ತೋರ, ಹಚ್ಚಿನಾಡುವಿನಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರು ತಮ್ಮ ಮನೆಗೆ ತೆರಳಿದರು.ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ಪ್ರವಾಹ ಇಳಿಮುಖವಾದ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳಿದರು. ಆದ್ದರಿಂದ ಕಾಳಜಿ ಕೇಂದ್ರವನ್ನು ಮುಕ್ತಾಯ ಮಾಡಲಾಗಿದೆ.
ಅಮ್ಮತ್ತಿ ಹೋಬಳಿಯ ಹಚ್ಚಿನಾಡು ಗ್ರಾಮದ ಕಾವೇರಿ ನದಿ ದಡದ ಹೊಳಕೆರೆ ಪೈಸಾರಿಯಲ್ಲಿ ಪ್ರವಾಹ ಭೀತಿ ಎದುರಿಸಿದ್ದ 10 ಕುಟುಂಬಗಳ 45 ಸಂತ್ರಸ್ತರನ್ನು ಹಚ್ಚಿನಾಡುವಿನ ಸ.ಹಿ.ಪ್ರಾ. ಶಾಲೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು. ಹಚ್ಚಿನಾಡು ಹೊಳೆಕೆರೆ ಪೈಸಾರಿಯಲ್ಲಿ ನೀರಿನ ಮಟ್ಟ ಪೂರ್ಣ ಕಡಿಮೆಯಾದ ಹಿನ್ನೆಲೆಯಲ್ಲಿ ಸಂತ್ರಸ್ತರು ತಮ್ಮ ಮನೆಗೆ ತೆರಳಿದರು. ವಿರಾಜಪೇಟೆ ತಾಲೂಕಿನ ತೋರದಲ್ಲಿ ಭೂಕುಸಿತ ಎದುರಿಸಿದ್ದ 26 ಕುಟುಂಬಗಳ 62 ಮಂದಿ ಸಂತ್ರಸ್ತರನ್ನು ತೋರ ಸ.ಹಿ.ಪ್ರಾ. ಶಾಲೆಯ ಕಾಳಜಿ ಕೇಂದ್ರದಲ್ಲಿ ಸ್ಥಳಾಂತರಿಸಲಾಗಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ. ಸಂತ್ರಸ್ತರು ಸ್ವ ಇಚ್ಛೆಯಿಂದ ತಮ್ಮ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಕಾಳಜಿ ಕೇಂದ್ರ ಮುಕ್ತಾಯ ಮಾಡಲಾಗಿದೆ.ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ನಿವಾಸಿ ಮೋಹನ ಅವರ ಮನೆ ಹಾನಿಯಾಗಿದೆ. ಪೊನ್ನಂಪೇಟೆ ತಾಲೂಕಿನ ಕೈಕೇರಿ ಗ್ರಾಮದ ನಿವಾಸಿ ಪೂವಮ್ಮ ಮನೆಯ ಗೋಡೆ ಕುಸಿದಿದೆ. ಇದೇ ಗ್ರಾಮದ ಮಲ್ಲಿಗೆ ಅವರ ಮನೆಗೆ ಹಾನಿಯಾಗಿದೆ. ಅಮ್ಮತ್ತಿ ಹೋಬಳಿಯ ಬಾಡಗ ಬಾಣಂಗಾಲ ಗ್ರಾಮದ ಇಬ್ರಾಹಿಂ ಅವರ ಮನೆಗೆ ಹಾನಿಯಾಗಿದೆ.
ಸೋಮವಾರಪೇಟೆ ತಾಲೂಕಿನ ಗರಗಂದೂರು ನಿವಾಸಿ ಗಣೇಶ್ ಅವರ ಹಸುವಿನ ಮೇಲೆ ಮರ ಬಿದ್ದ ಪರಿಣಾಮ ಹಸು ಸ್ಥಳದಲ್ಲೇ ಮೃತಪಟ್ಟಿದೆ. ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಪೂವಪ್ಪ ಅವರ ಹಸುವೊಂದು ಮಳೆಯಿಂದ ಮೃತಪಟ್ಟಿದೆ.ಅಮ್ಮತ್ತಿ ಹೋಬಳಿಯ ಚೆನ್ನನಕೋಟೆ ಗ್ರಾಮದ ಸುರೇಂದ್ರ ಎಂಬವರ ಮನೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 29.29 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.94 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2282.44 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1185.77 ಮಿ.ಮೀ ಮಳೆಯಾಗಿತ್ತು.ಮಡಿಕೇರಿ ತಾಲೂಕಿನಲ್ಲಿ 53.10 ಮಿ.ಮೀ. ಕಳೆದ ವರ್ಷ ಇದೇ ದಿನ 0.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3160.33 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2009.23 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ14.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2108.70 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 920.86 ಮಿ.ಮೀ. ಮಳೆಯಾಗಿತ್ತು.ಪೊನ್ನಂಪೇಟೆ ತಾಲೂಕಿನಲ್ಲಿ 11.73 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2175 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 951.16 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ 33.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.20 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2595.26 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1279.74 ಮಿ.ಮೀ. ಮಳೆಯಾಗಿತ್ತು. ಕುಶಾಲನಗರ ತಾಲೂಕಿನಲ್ಲಿ 33.50 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1372.90 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 767.85 ಮಿ.ಮೀ. ಮಳೆಯಾಗಿತ್ತು.ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 36.80, ನಾಪೋಕ್ಲು 31.40, ಸಂಪಾಜೆ 72, ಭಾಗಮಂಡಲ 72.20, ವಿರಾಜಪೇಟೆ 14.60, ಅಮ್ಮತ್ತಿ 14.50, ಹುದಿಕೇರಿ 17.90, ಶ್ರೀಮಂಗಲ 11, ಪೊನ್ನಂಪೇಟೆ 13, ಬಾಳೆಲೆ 5, ಸೋಮವಾರಪೇಟೆ ಕಸಬಾ 38.80, ಶನಿವಾರಸಂತೆ 23, ಶಾಂತಳ್ಳಿ 56, ಕೊಡ್ಲಿಪೇಟೆ 16.40, ಕುಶಾಲನಗರ 28.80, ಸುಂಟಿಕೊಪ್ಪ 38.20 ಮಿ.ಮೀ.ಮಳೆಯಾಗಿದೆ.