ಸಾರಾಂಶ
ಶೃಂಗೇರಿ, ತಾಲೂಕಿನಲ್ಲಿ ಮತ್ತೆ ಮಳೆ ರುದ್ರ ನರ್ತನ ಮುಂದುವರೆದಿದ್ದು, ತುಂಗಾ ನದಿ ಉಗಮ ಸ್ಥಳವಾದ ಪಶ್ಟಿಮ ಘಟ್ಟಗಳ ತಪ್ಪಲು ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ತುಂಗಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಮಂಗಳೂರು ಶೃಂಗೇರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಬಳಿ ರಸ್ತೆಗೆ ನೀರು ನುಗ್ಗಿ ಸಂಜೆಯಿಂದ ಮಂಗಳೂರು ಶೃಂಗೇರಿ ಸಂಪರ್ಕ ಕಡಿತಗೊಂಡಿತು.
ಕನ್ನಡಪ್ರಭ ವಾರ್ತೆ, ಶೃಂಗೇರಿ
ತಾಲೂಕಿನಲ್ಲಿ ಮತ್ತೆ ಮಳೆ ರುದ್ರ ನರ್ತನ ಮುಂದುವರೆದಿದ್ದು, ತುಂಗಾ ನದಿ ಉಗಮ ಸ್ಥಳವಾದ ಪಶ್ಟಿಮ ಘಟ್ಟಗಳ ತಪ್ಪಲು ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ತುಂಗಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಮಂಗಳೂರು ಶೃಂಗೇರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಬಳಿ ರಸ್ತೆಗೆ ನೀರು ನುಗ್ಗಿ ಸಂಜೆಯಿಂದ ಮಂಗಳೂರು ಶೃಂಗೇರಿ ಸಂಪರ್ಕ ಕಡಿತಗೊಂಡಿತು.ನೆಮ್ಮಾರು ಹೊಳೆಹದ್ದು ಸಂಪರ್ಕ ಕಲ್ಪಿಸುವ ತೂಗುಸೇತುವೆ ಅರ್ಧ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿತು. ಮಾಣಿಬೈಲು ಕಿಗ್ಗಾ ಸಿರಿಮನೆ ಸಂಪರ್ಕ ರಸ್ತೆಯೂ ತುಂಗೆ ಪ್ರವಾಹದಿಂದ ಸಂಪರ್ಕ ಕಡಿತವಾಗಿದೆ. ಗಾಂಧಿ ಮೈದಾನ ಮತ್ತೆ ಜಲಾವೃತಗೊಂಡು, ಕಲ್ಕಟ್ಟೆ ಗಾಂಧಿ ಮೈದಾನ ಸಂಪರ್ಕ ತೂಗುಸೇತುವೆ, ಭಾರತೀ ಬೀದಿ-ಕೆವಿಆರ್ ವೃತ್ತ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಮತ್ತೆ ಮುಳುಗಡೆಯಾಯಿತು. ಶೃಂಗೇರಿ ವಿದ್ಯಾರಣ್ಯಪುರ ಸಂಪರ್ಕ ರಸ್ತೆ ಮೇಲೆಯೂ ತುಂಗೆಯ ಪ್ರವಾಹ ಹರಿಯಿತು. ಕುರುಬಗೇರಿ ರಸ್ತೆಗೂ ತುಂಗಾ ನದಿಯ ಪ್ರವಾಹ ನುಗ್ಗಿ ಸಂಚಾರ ಮತ್ತೆ ಸ್ಥಗಿತಗೊಂಡಿತು. ತಾಲೂಕಿನಾದ್ಯಂತ ಮತ್ತೆ ಮಳೆ ಅಬ್ಬರಕ್ಕೆ ಸಂಚಾರ, ಜನಜೀವನ ಅಸ್ತವ್ಯಸ್ಥಗೊಂಡಿತ್ತು.
18 ಶ್ರೀ ಚಿತ್ರ 4-ಶೃಂಗೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಾ.ಹೆ.169 ರ ನೆಮ್ಮಾರು ರಸ್ತೆಯ ಮೇಲೆ ತುಂಗಾ ನದಿ ಪ್ರವಾಹ ಹರಿದು ಸಂಪರ್ಕ ಕಡಿತಗೊಂಡಿತ್ತು.
18 ಶ್ರೀ ಚಿತ್ರ 5-ಶೃಂಗೇರಿ ಸುತ್ತಮುತ್ತ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ತುಂಗಾ ನದಿ ಸಂಜೆಯ ವೇಳೆ ಮತ್ತೆ ಪ್ರವಾಹ ತುಂಬಿ ಹರಿಯುತ್ತಿರುವುದು.