ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕರೆ
ಮಳೆ ನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ ಅಗತ್ಯ ಎಂದು ತರೀಕೆರೆ ಕೃಷಿ ಇಲಾಖೆ ಕೃಷಿ ಅಧಿಕಾರಿ-ಹನುಮಂತಪ್ಪ ಹೇಳಿದ್ದಾರೆ.ಎಂ.ಸಿ.ಹಳ್ಳಿ ವಲಯದ ಮಾಚೆನಹಳ್ಳಿ ಶ್ರೀ ರಾಮ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ತರೀಕೆರೆ ಯಿಂದ ಸಮೀಪದ ಎಂ.ಸಿ.ಹಳ್ಳಿ ವಲಯ ಮಾಚೇನಹಳ್ಳಿ ಶ್ರೀರಾಮ ಸಭಾಂಗಣದಲ್ಲಿ ಕೃಷಿ ನೀರಾವರಿ ಮತ್ತು ಮಳೆ ಕೊಯ್ಲು ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಳೆ ನೀರು ಕೊಯ್ಲು ಮತ್ತು ಜಲಮೂಲಗಳ ಸಂರಕ್ಷಣೆ ಅಗತ್ಯದ ಬಗ್ಗೆ, ತೆರೆದ ಮತ್ತು ಕೊಳವೆ ಬಾವಿಗಳಿಗೆ ಮಳೆ ನೀರು ಪೂರಣ, ಕೃಷಿ ಭೂಮಿಯಲ್ಲಿ ಚೆಕ್ ಡ್ಯಾಮ್ ರಚನೆ, ಉದ್ಯೋಗ ಖಾತ್ರಿಯಲ್ಲಿ ಸಿಗುವ ಅನುದಾನ, ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಿಗುವ ಸಬ್ಸಿಡಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ರಮೇಶ್ ಮಾತನಾಡಿ ಸಂಘಗಳಿಗೆ ಯೋಜನೆಯಿಂದ ಸಿಗುವ ಪ್ರಗತಿ ನಿಧಿ, ವಿಮಾ ಕಾರ್ಯಕ್ರಮ, ಸುಜ್ಞಾನ ನಿಧಿಸ ಶಿಷ್ಯ ವೇತನ, ನಿರಂತರ, ಲಾಭಾಂಶಗಳ ಬಗ್ಗೆ ಮಾಹಿತಿ ನೀಡಿದರು.ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್ ಮಾತನಾಡಿ ತಾಲೂಕಿನ ಕೃಷಿ ಕಾರ್ಯಕ್ರಮ ಮತ್ತು ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷೆ ಮಂಜುಳ, ಕಾರ್ಯದರ್ಶಿ ನೂರ್ ಜಾನ್, ಸೇವಾಪ್ರತಿನಿಧಿ ಮಾಲ, ಸಂಘದ ಸದಸ್ಯರು ಉಪಸ್ಥಿತರಿದ್ದರು.21ಕೆಟಿಆರ್.ಕೆ.2ಃ
ತರೀಕೆರೆ ಮಾಜೇನಹಳ್ಳಿಯಲ್ಲಿ ರೈತ ಕ್ಷೇತ್ರ ಪಾಠಶಾಲೆಯನ್ನು ಕೃಷಿ ಇಲಾಖೆ ಕೃಷಿ ಅಧಿಕಾರಿ ಹನುಮಂತಪ್ಪ ಉದ್ಘಾಟಿಸಿದರು. ವಲಯದ ಮೇಲ್ವಿಚಾರಕ ರಮೇಶ್, ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್, ಒಕ್ಕೂಟದ ಅಧ್ಯಕ್ಷೆ ರೇಣುಕಾ, ಮತ್ತಿತರರು ಇದ್ದರು.