ರಾಜಸ್ವ ಹೆಚ್ಚಿಸಿ ರಾಜಧನ ಸಂಗ್ರಹಿಸಿ: ಎಸ್.ಎಸ್ ಸಮಲ್ಲಿಕಾರ್ಜುನ್

| Published : Oct 31 2024, 01:03 AM IST / Updated: Oct 31 2024, 01:04 AM IST

ರಾಜಸ್ವ ಹೆಚ್ಚಿಸಿ ರಾಜಧನ ಸಂಗ್ರಹಿಸಿ: ಎಸ್.ಎಸ್ ಸಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಿಎಂ ಸಿದ್ದರಾಮಯ್ಯರೊಂದಿಗೆ ಗಣಿ, ಭೂ ವಿಜ್ಞಾನ ಇಲಾಖೆ ಸಚಿವರ ಚರ್ಚೆಕನ್ನಡಪ್ರಭ ವಾರ್ತೆ ಬೆಂಗಳೂರು/ದಾವಣಗೆರೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆಗೆ ಸಂಬಂಧ ಪಟ್ಟಂತೆ, ಅರಣ್ಯ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಸೂಚಿಸಿದರು.

ಗಣಿಗಾರಿಕೆ ಸರಳಿಕರಣ, ಇಲಾಖೆಯಲ್ಲಿ ಗುರುತಿಸಿರುವ ಬ್ಲಾಕ್ ಗಳ ಮಾಹಿತಿ ಪಡೆದು ರಾಜಸ್ವ ಹೆಚ್ಚಿಸುವ ಕುರಿತು ಸಚಿವರು ಸೂಚಿಸಿದರು. ಗಣಿ ಮಾಲೀಕರು ಸರ್ಕಾರ ಹಾಗೂ ಘನ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಮರ್ಪಕವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಧನ ಸಂಗ್ರಹ ಮಾಡಬೇಕು. ಖನಿಜ ಹಾಗೂ ಉಪ ಖನಿಜಗಳಿಗೆ ಸಂಬಂಧಿಸಿದಂತೆ ವಸೂಲಾಗಿರುವ ರಾಜಧನದ ರಾಜಸ್ವ ಸಂಗ್ರಹಣೆ ತ್ವರಿತಗತಿಯಲ್ಲಿ ಸಾಗಬೇಕು. ಪರಿಸರ ವಿಮೋಚನಾ ಪ್ರಮಾಣ ಅನುಗುಣವಾಗಿ ಪೆರ್ಮಿಟ್ ಪಡೆದ ಪ್ರಮಾಣ ಸಂಗ್ರಹದಲ್ಲಿ ಗಣಿ ಇಲಾಖೆ ವ್ಯಾಪ್ತಿಯ ರಾಜಧನ ಸೋರಿಕೆಯನ್ನು ತಡೆಗಟ್ಟಿ, ಎಎಸ್‌ಪಿ ಯೋಜನೆಯಿಂದಾಗಿರುವ ಸಮಸ್ಯೆಗಳನ್ನು ಆಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕಾ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.