ಸಾರಾಂಶ
ಇದುವರೆಗೂ ಯಾವುದೇ ಟಿಎಪಿಸಿಎಂಎಸ್ ವತಿಯಿಂದ ರೈತ ಭವನ ಎಲ್ಲಿಯೂ ನಿರ್ಮಾಣ ಮಾಡಿಲ್ಲ,ಮೊದಲ ಬಾರಿ ಪಟ್ಟಣದಲ್ಲಿ ನಿರ್ಮಾಣ ಮಾಡಿ ರೈತರಿಗೆ ಅರ್ಪಿಸಲಾಗುವುದು. ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೧೫ ಲಕ್ಷ ಲಾಭಗಳಿಸಿದೆ ಅಲ್ಲದೆ ೧೨೧ ಜನರಿಗೆ ಸಂಘವು ನೂತನ ಸದಸ್ಯತ್ವ ನೀಡಿದೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಟಿಎಪಿಸಿಎಂಎಸ್ ಸಂಸ್ಥೆ ವತಿಯಿಂದ ರೈತರಿಗಾಗಿ ರೈತ ಭವನವನ್ನು ನಿರ್ಮಾಣ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಹೆಚ್.ವಿ.ವೆಂಕಟಾಚಲಪತಿ ಹೇಳಿದರು.ಪಟ್ಟಣದ ಅಕ್ಕಿಗಿರಣಿ ಆವರಣದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಟಿಎಪಿಸಿಎಂಎಸ್ ರೈತರಿಗಾಗಿ ಸ್ಥಾಪಿತವಾಗಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮೂಲಕ ಪಟ್ಟಣದಲ್ಲಿ ಜನೌಷಧಿ ಮಳಿಗೆ,ನ್ಯಾಯಬೆಲೆ ಅಂಗಡಿ,ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ಸಂಸ್ಥೆಯ ಶಾಶ್ವತವಾಗಿ ಆದಾಯದ ಮೂಲವನ್ನು ಕಂಡುಕೊಳ್ಳಲಾಗಿದೆ ಎಂದರು.ಯೋಜನೆಗಳನ್ನು ಬಳಸಿಕೊಳ್ಳಿ
ಸಹಕಾರ ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಇರುವ ಸಂಸ್ಥೆಗಳು,ರೈತರು ಇಂತಹ ಸಂಸ್ಥೆಗಳಲ್ಲೆ ವ್ಯವಹಾರ ಮಾಡಬೇಕು, ನಮ್ಮ ಸಂಸ್ಥೆಯಲ್ಲಿ ರಸಗೊಬ್ಬರ ಶಾಖೆ ಸಹ ಇದೆ, ಇಲ್ಲಿ ಅಗ್ಗದ ಬೆಲೆಗೆ ಗೊಬ್ಬರಗಳು ಸಿಗುತ್ತವೆ. ಸರ್ಕಾರದ ಯೋಜನೆಗಳನ್ನು ರೈತರು ಬಳಸಿಕೊಂಡರೆ ಖಾಸಗಿ ಲೇವಾದೇವಿಗಳಿಂದ ದೂರ ಉಳಿಯಬಹುದು ಎಂದರು.ಇದುವರೆಗೂ ಯಾವುದೇ ಟಿಎಪಿಸಿಎಂಎಸ್ ವತಿಯಿಂದ ರೈತ ಭವನ ಎಲ್ಲಿಯೂ ನಿರ್ಮಾಣ ಮಾಡಿಲ್ಲ,ಮೊದಲ ಬಾರಿ ಪಟ್ಟಣದಲ್ಲಿ ನಿರ್ಮಾಣ ಮಾಡಿ ರೈತರಿಗೆ ಅರ್ಪಿಸಲಾಗುವುದು. ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೧೫ ಲಕ್ಷ ಲಾಭಗಳಿಸಿದೆ, ಈ ವರ್ಷ ಸಂಘವು ೨೦೦ಜನ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಲಾಗಿತ್ತು, ಆದರೆ ೧೨೧ ಜನರಿಗೆ ಸಂಘವು ನೂತನ ಸದಸ್ಯತ್ವ ನೀಡಿ ೩೭.೫೦೦ ಹೆಚ್ಚುವರಿ ಷೇರು ಮೊತ್ತ ೨೫೧೫೦೦ಗಳಷ್ಟು ಷೇರು ಹಣವನ್ನು ಮತ್ತು ಎ ವರ್ಗದ ಸದಸ್ಯ ಸಹಕಾರ ಸಂಘಗಳಿಂದ ಹೆಚ್ಚುವರಿ ಷೇರು ೨೧೭೩೫೦ಗಳಷ್ಟು ಷೇರು ಒಟ್ಟು೪,೬೮,೮೫೦ಗಳನ್ನು ಸಂಗ್ರಹಿಸಲಾಗಿದೆ ಎಂದರು.ಸಂಘದ ಮಾಜಿ ಅಧ್ಯಕ್ಷ ಜಿ.ರಾಜಾರೆಡ್ಡಿ ಮಾತನಾಡಿ, ಸಹಕಾರ ಸಂಘವು ಪರಸ್ಪರ ಸಹಕಾರದಿಂದ ಮಾತ್ರ ಬೆಳೆಯಬೇಕು,ಅದು ಬಿಟ್ಟು ಇಲ್ಲಿಯೂ ರಾಜಕೀಯ ನುಸುಳಿದರೆ ಯಾವುದೇ ಸಹಕಾರ ಸಂಘ ಬೆಳೆಯಲು ಸಾಧ್ಯವಿಲ್ಲ ಎಂದರು.ಈ ವೇಳೆ ಉಪಾಧ್ಯಕ್ಷೆ ಭವ್ಯ,ನಿರ್ದೇಶಕರಾದ ಎಂ.ಕೃಷ್ಣೇಗೌಡ,ವೆಂಕಟೇಶ್,ಸತೀಶ್ ಕುಮಾರ್, ರಾಮೇಗೌಡ, ಮಂಜುನಾಥ್, ಅರವಿಂದಕುಮಾರ್, ಕೋಮಲ, ಲಕ್ಷ್ಮಿ, ರವಿ, ಸಂಘದ ಕಾರ್ಯನಿರ್ವಹಣಾಧಿಕಾರಿ ಎಸ್.ಕೋಮಲ ಇತರರು ಇದ್ದರು.