ಸಾರಾಂಶ
ಹುಣಸಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಕಾಂಗ್ರೆಸ್ ಮುಖಂಡರಿಂದ ಇತ್ತೀಚೆಗೆ ನಿಧನರಾದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ನುಡಿನಮನ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಕಾಂಗ್ರೆಸ್ ಮುಖಂಡರಿಂದ ಇತ್ತೀಚೆಗೆ ನಿಧನರಾದ ಸುರಪುರ ಮತಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾದ ರಾಜಾ ವೆಂಕಟಪ್ಪ ನಾಯಕ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾಂಗ್ರೆಸ್ ಮುಖಂಡ ಮಲ್ಲಪ್ಪ ಕಟ್ಟಿಮನಿ ಮತ್ತು ಹಣಮಂತ ಗ್ಯಾಂಗಮ್ಯಾನ (ಲೋಟರಾಜ್) ಮಾತನಾಡಿ, ದಿ.ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಎಲ್ಲಾ ಜಾತಿ ಜನಾಂಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ನಾಯಕರಾಗಿದ್ದರು. ಅದರಲ್ಲಿ ಮಾದಿಗ ಸಮುದಾಯಕ್ಕೆ ಅತ್ಯಂತ ಪ್ರೀತಿ, ವಿಶ್ವಾಸ ತೋರುವ ನಾಯಕ ನಮ್ಮನ್ನ ಅಗಲಿರುವುದು ನಮ್ಮ ಸಮುದಾಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದರು.
ವಿಧಾನಸಭೆ ಚುನಾವಣೆಗೂ ಮುಂಚೆ ಪಟ್ಟಣದ ಮಾದಿಗ ಸಮುದಾಯದ ಕಾಲೋನಿಗೆ ಭೇಟಿ ನೀಡಿದಾಗ ಮಾದಿಗ ಸಮುದಾಯದ ಪರವಾಗಿ ನಾನು ಯಾವತ್ತು ಇರುತ್ತೇನೆ. ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಮಾತು ಇನ್ನು ಕೂಡ ಹಾಗೆ ಇದೆ. ಹಲವಾರು ಅಭಿವೃದ್ಧಿ ಕನಸ್ಸುಗಳನ್ನು ಹೊತ್ತುಕೊಂಡಿರುವ ನಮ್ಮ ನಾಯಕನ ಅಗಲಿಕೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.ಪೀರಪ್ಪ ಕಟ್ಟಿಮನಿ, ತಿಪ್ಪಣ್ಣ ಮೇಲಿನಮನಿ, ಸಿದ್ದಣ್ಣ ಹೊಸಮನಿ, ತಿಪ್ಪಣ್ಣ ಬೇವಿನಗಿಡ, ಪ್ರಕಾಶ ಆನೇಕಿ,ಭೀಮಣ್ಣ ಬೇವಿನಾಳ, ನಿಂಗರಾಜ ದ್ಯಾಮನಾಳ, ಪರಮಣ್ಣ ಬೈಲಾಪೂರ, ಮಹೇಶ ಚನ್ನೂರ, ಸಿದ್ದು ಭಾವಿಮನಿ, ಶರಣು ಹಣಮಸಾಗರ, ಗೋಪಾಲ್ ಕಟ್ಟಿಮನಿ, ನಂದು ನೀರಲಗಿ, ಸಿದ್ದಾರ್ಥ ಕಟ್ಟಿಮನಿ, ಸಿದ್ದು ಕಡಿಮನಿ, ಪ್ರಭು ಗ್ಯಾಂಗಮ್ಯಾನ ಸೇರಿದಂತೆ ಇತರರಿದ್ದರು.