ಸಾರಾಂಶ
ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನ ಸಾಗಿಸುತ್ತಿದ್ದು ಮಾನಸಿಕ ನೆಮ್ಮದಿಯ ಅವಶ್ಯವಿದೆ. ಈ ಒತ್ತಡದ ಬದುಕಿಗಾಗಿ ರಾಜಯೋಗ ಧ್ಯಾನದ ಅವಶ್ಯಕತೆಯಿದೆ. ಈಶ್ವರೀಯ ವಿಶ್ವ ವಿದ್ಯಾಲಯವು ಜನರ ಮಾನಸಿಕ ನೆಮ್ಮದಿಗಾಗಿ ಮೆಡಿಟೇಶನ್ ನೀಡುತ್ತಿದೆ.
ಕೊಪ್ಪಳ:
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೇ ೨೧ರಂದು ಕೊಪ್ಪಳದಲ್ಲಿ ಒತ್ತಡ ಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ ಹಾಗೂ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಮೆಡಿಟೇಶನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಬಿ.ಕೆ. ಯೋಗಿನಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನ ಸಾಗಿಸುತ್ತಿದ್ದು ಮಾನಸಿಕ ನೆಮ್ಮದಿಯ ಅವಶ್ಯವಿದೆ. ಈ ಒತ್ತಡದ ಬದುಕಿಗಾಗಿ ರಾಜಯೋಗ ಧ್ಯಾನದ ಅವಶ್ಯಕತೆಯಿದೆ. ಈಶ್ವರೀಯ ವಿಶ್ವ ವಿದ್ಯಾಲಯವು ಜನರ ಮಾನಸಿಕ ನೆಮ್ಮದಿಗಾಗಿ ಮೆಡಿಟೇಶನ್ ನೀಡುತ್ತಿದ್ದು, ಈ ವರ್ಷ ೧೪೦ ದೇಶಗಳಲ್ಲಿ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಯೋಗ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ಕೊಪ್ಪಳದಲ್ಲಿ ಬ್ರಹ್ಮಕುಮಾರೀಸ್ ಭವನದಲ್ಲಿ ಸಂಜೆ ೫.೩೦ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಹಿರಿಯ ತಪಸ್ವಿನಿ ಅಬು ಪರ್ವತ ಸಹ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ ದೀದಿ ಆಗಮಿಸಲಿದ್ದಾರೆ. ಇವರು ಜಗತ್ತಿನ ನೂರು ರಾಷ್ಟ್ರಗಳಲ್ಲಿ ಸಂಚರಿಸಿ ರಾಜಯೋಗ ಧ್ಯಾನದ ಉಪನ್ಯಾಸ ನೀಡಿದ್ದಾರೆ. ಇವರು ಈಶ್ವರೀಯ ವಿಶ್ವವಿದ್ಯಾಲಯದ ಯುರೋಪಿಯನ್ ನಿರ್ದೇಶಕರಾಗಿದ್ದು, ವಿಶ್ವ ಮಟ್ಟದಲ್ಲಿ ಹಲವು ಸ್ಥಾನಮಾನ ಹೊಂದಿದ್ದಾರೆ. ಅವರು ಕೊಪ್ಪಳಕ್ಕೆ ಆಗಮಿಸುತ್ತಿರುವುದು ನಮ್ಮ ಸುದೈವವಾಗಿದ್ದು, ಈ ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ಸಿ.ವಿ. ಚಂದ್ರಶೇಖರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.ಮೇ ೨೩ರಿಂದ ಒಂದು ವಾರ ಬೆಳಗ್ಗೆ ಹಾಗೂ ಸಂಜೆ ಮೆಡಿಟೇಶನ್ ಶಿಬಿರವನ್ನು ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಒತ್ತಡದ ಮುಕ್ತಿ ಕಂಡುಕೊಳ್ಳಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ. ಸ್ನೇಹ ಇದ್ದರು.