ರಾಜಾರಾಮ್ ಮಹಾರಾಜ ಜಯಂತಿ ಆಚರಣೆ

| Published : Mar 30 2024, 12:45 AM IST

ಸಾರಾಂಶ

ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ರಾಜಾರಾಮಮಠದಲ್ಲಿ ಸಂತ ಶ್ರೇಷ್ಠರಾದ ರಾಜಾರಾಮ್ ಮಹಾರಾಜರ 255ನೆಯ ಜಯಂತ್ಯುತ್ಸವ ಆಚರಿಸಲಾಯಿತು.

ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ರಾಜಾರಾಮಮಠದಲ್ಲಿ ಸಂತ ಶ್ರೇಷ್ಠರಾದ ರಾಜಾರಾಮ್ ಮಹಾರಾಜರ 255ನೆಯ ಜಯಂತ್ಯುತ್ಸವಆಚರಿಸಲಾಯಿತು.

9 ದಿನಗಳ ಕಾಲ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಕೀರ್ತನೆ, ಭಜನೆ ನಿರಂತರವಾಗಿ ನಡೆದವು. ಶ್ರೀಮಠದ ಪೀಠಾಧಿಕಾರಿ ಗಂಗಾಧರ ದೀಕ್ಷಿತ್‌ರ ನೇತೃತ್ವದಲ್ಲಿ ಜಯಂತಿ ಉತ್ಸವ ಕಾರ್ಯಕ್ರಮ ನೆರವೇರಿದವು.

ಚಿದಂಬರೇಶ್ವರ ದೇವಸ್ಥಾನದ ಶ್ರೀ ದಂಡಪಾಣಿ ದೀಕ್ಷಿತರು, ಬ್ರಹ್ಮಾನಂದ ಆಶ್ರಮದ ಶ್ರೀ ಶಿವಾನಂದ ಸ್ವಾಮೀಜಿ, ಬೆಡಸೂರು ಮಠದ ಶ್ರೀ ಅಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.