ತ್ರಿವಿಧ ದಾಸೋಹದ ಮೂಲಕ ಈ ನಾಡಿಗೆ ಶಿವರಾತ್ರಿ ರಾಜೇಂದ್ರ ಶ್ರೀಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತ್ರಿವಿಧ ದಾಸೋಹದ ಮೂಲಕ ಈ ನಾಡಿಗೆ ಶಿವರಾತ್ರಿ ರಾಜೇಂದ್ರ ಶ್ರೀಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಹೇಳಿದರು.ಸಂಘಸಂಸ್ಥೆಗಳು, ಭಕ್ತವೃಂದ, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಜೆಎಸ್ಎಸ್ ಆಸ್ಪತ್ರೆ ವತಿಯಿಂದ ನಗರದ ಜೆಎಸ್ಎಸ್ ಕಾಲೇಜು ಆವರಣಲ್ಲಿ ಹಮ್ಮಿಕೊಂಡಿದ್ದ ರಾಜಗುರುತಿಲಕ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀಗಳು ಕಲಾವಿದರಿಗೂ ಅಪಾರ ಗೌರವ ನೀಡುತ್ತಿದ್ದರು. ಮೈಸೂರಿನಲ್ಲಿ ನಡೆದ ಜಯಂತಿ ಸಂದರ್ಭದಲ್ಲಿ ಮೇರು ನಟ ಡಾ.ರಾಜಕುಮಾರ್ ಅವರನ್ನು ಕರೆಯಿಸಿ ಆಶೀರ್ವದಿಸಿದ್ದರು. ವಿನಯ ಸಂಪತ್ತು ರೂಢಿಸಿಕೊಂಡು ಬೆಳೆದಿದ್ದ ರಾಜಕುಮಾರ್. ಸ್ವರ್ಗ ನರಕ ಇಲ್ಲೇ ಇದೆ ಎಂದು ಕೇಳಿದ್ದೆ. ಆದರೆ ಇಲ್ಲೇ ಸ್ವರ್ಗ ಇದೆ, ಪರಮೇಶ್ವರ ಇಲ್ಲೇ ಇದ್ದಾರೆ ಎಂದು ಹೇಳಿದ್ದರು, ಅಂತಹ ಮೇರು ನಟನ ಮೇಲೆ ಪ್ರಭಾವ ಬೀರಿದ್ದವರು ರಾಜೇಂದ್ರ ಶ್ರೀಗಳು ಎಂದರು.ಕಲಾ ಕ್ಷೇತ್ರದಲ್ಲಿ ಡಾಲಿ ಧನಂಜಯ್ ಹೆಸರು ಮಾಡಿದ್ದಾರೆ. ಚಲನಚಿತ್ರ ಮನುಷ್ಯನ ಮೇಲೆ ಅನೇಕ ಪರಿಣಾಮ ಬೀರುತ್ತವೆ. ಚಿತ್ರ ನೋಡಿದಾಗ ಮನುಷ್ಯನ ಗ್ರಹಿಕೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಪರಿಣಾಮ ಬೀರುತ್ತದೆ ಎಂದರು.
ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ್ ಮಾತನಾಡಿ, ರಾಜೇಂದ್ರ ಶ್ರೀಗಳ ದೂರದೃಷ್ಟಿಯ ಫಲವಾಗಿ ಇಂದು ನಮ್ಮ ಜೆಎಸ್ಎಸ್ ಸಂಸ್ಥೆಯು ಇಂದು ಎತ್ತರವಾಗಿ ಬೆಳೆದಿದೆ, ಅನ್ನ, ದಾಸೋಹ, ಜ್ಞಾನಕ್ಕೆ ಮಹತ್ವ ನೀಡಿದ ರಾಜೇಂದ್ರ ಶ್ರೀಗಳು ನಿಜವಾಗಲೂ ಪವಾಡ ಪುರುಷರು, ಅವರ ಶ್ರಮದ ಫಲವಾಗಿ ಇಂದು ನೂರಾರು ಕುಟುಂಬಗಳು, ಸಾವಿರಾರು ಜನರು ಉದ್ಯೋಗಸ್ಥರಾಗಿ ಸ್ವಾಭಿಮಾನದ ಜೀವನ ಕಟ್ಟಿಕೊಂಡಿದ್ದಾರೆ ಎಂದರು.ಕುಟುಂಬದ ಕಣ್ಣಾಗಿರುವ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು, ಕುಟುಂಬದಲ್ಲಿ ತಾಯಿ, ಅಕ್ಕ, ತಂಗಿ, ಹೆಂಡತಿ ನಗು ನಗುತ್ತಾ ಇದ್ದರೆ, ಕುಟುಂಬ ಚೆನ್ನಾಗಿರುತ್ತದೆ, ಊರು ಚೆನ್ನಾಗಿರುತ್ತದೆ.ರಾಜ್ಯ ಚೆನ್ನಾಗಿರುತ್ತದೆ, ದೇಶ ಚೆನ್ನಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗೌರಮ್ಮ ಅವರನ್ನ ಸನ್ಮಾನಿಸಲಾಯಿತು. ಅಲ್ಲದೇ ಪ್ರತಿಭಾ ಪುರಸ್ಕಾರ ಹಾಗೂ ದತ್ತಿ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಇದಕ್ಕೂ ಮುನ್ನ ರಾಜೇಂದ್ರ ಶ್ರೀಗಳ ಭಾವಚಿತ್ರದ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡು ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಅಂತ್ಯಗೊಂಡಿತು. ಕದಳಿ ಮಹಿಳಾ ವೇದಿಕೆ ವತಿಯಿಂದ ಭಜನೆ ನಡೆಯಿತು. ಜೆಎಸ್ಎಸ್ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ನಟ ಎನ್.ಎಸ್.ನಾಗಭೂಷಣ್, ಹರವೆ ವಿರಕ್ತ ಮಠದ ಸರ್ಪಭೂಪಣ ಸ್ವಾಮೀಜಿ. ಚಾ.ನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ, ಮಾಜಿ ಎಂಎಲ್ಸಿ ಪ್ರೊ.ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಟರ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಚಂದ್ರು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಡಿವೈಎಸ್ಪಿ ಸ್ನೇಹರಾಜ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಜೆ.ಎಂ.ತಿಪ್ಪೇಸ್ವಾಮಿ, ಮುಖಂಡರಾದ ಎಂ.ರಾಮಚಂದ್ರ, ಜಿ.ಕೆ.ರವಿಕುಮಾರ್ ಇತರರು ಹಾಜರಿದ್ದರು