ಬಂಟ್ವಾಳ: ಎ. 9ರಂದು ನಡೆಯುವ ಚುನಾವಣೆಯಲ್ಲಿ ಮಂಜೇಶ್ವರ ವಿಧಾನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಕೆ.ಅವರಿಗೆ ನಿಮ್ಮ ಮತವನ್ನು ನೀಡಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಅಂಗಡಿಮುಗೇರು ಮತ್ತು ದೇಲಂಪಾಡಿ ಗ್ರಾಮದ ಮನೆಮನೆಗಳಿಗೆ ತೆರಳಿ ಮತಯಾಚಿಸಿದರು.
ಈ ಬಾರಿ ನಿಮ್ಮ ಮತವನ್ನು ಬದಲಾಯಿಸಿ ನೋಡಿ ಬದಲಾವಣೆಯ ಹೊಸ ರೂಪ ನಿಮಗೆ ತಿಳಿಯುತ್ತದೆ ಎಂದು ಮತದಾರರ ಮನಪರಿವರ್ತನೆ ಮಾಡಿದರು. ನರೇಂದ್ರ ಮೋದಿಯವರ ಜನಪರವಾದ ಯೋಜನೆಗಳು ಕಾರ್ಯರೂಪಕ್ಕೆ ತರುವ ಕೆಲಸವನ್ನು ಸುರೇಂದ್ರನ್ ಕೆ ಅವರು ಮಾಡುತ್ತಾರೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ತಿಳಿಸಿದರು.ಬಿಜೆಪಿ ಕಾರ್ಯಕರ್ತರ ಜೊತೆಗೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಅವಲೋಕನ ನಡೆಸಿದ ಅವರು ಕಾರ್ಯಕರ್ತರ ಹುರುಪು ಹೆಚ್ಚಿಸಲು ಸಲಹೆಯನ್ನು ನೀಡಿದರು.
ಪ್ರತಿಯೊಂದು ಮನೆಯ ಸಂಪರ್ಕವನ್ನು ಕಾರ್ಯಕರ್ತರು ಮಾಡುವ ಜೊತೆಗೆ ಅವರ ಜೊತೆಗೆ ಸಂಪರ್ಕವನ್ನು ಇರಿಸಿಕೊಳ್ಳಲು ತಿಳಿಸಿದರು.ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಮಾದವ ಮಾವೆ, ಬಂಟ್ವಾಳ ಬಿಜೆಪಿ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಅಜಿತ್ ಶೆಟ್ಟಿ ಕಾವಳಮೂಡೂರು, ಕುಮಾರ್ ಅಳ್ವ, ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿ.ಎಮ್.ಎಸ್.ಮೇಘನಾ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಪುತ್ತಿಗೆ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ದೇರಡ್ಕ, ಬೂತ್ ಅಧ್ಯಕ್ಷ ಕೇಶವ ಮುಗು ಮತ್ತಿತರರು ಉಪಸ್ಥಿತರಿದ್ದರು.