ಸಾರಾಂಶ
ಗೌರಬಿದನೂರು : ನಗರದಲ್ಲಿ ರಾಜಕಾಲುವೆಗಳು ಬಹುತೇಕ ಕಡೆಗಳಲ್ಲಿ ಒತ್ತುವರಿಯಾಗಿದ್ದು ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕೇವಲ ಸರ್ವೆಮಾಡಿ, ವರದಿ ಸಿದ್ದಪಡಿಸಿ ಮೌನಕ್ಕೆ ಶರಣಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ 22ನೇ ವಾರ್ಡಿನ ರಿಲಾಯನ್ಸ್ ಪೆಟ್ರೋಲ್ ಬಂಕ್ ಹಿಂಬಾಗದಲ್ಲಿ ರಾಜಕಾಲುವೆ ಹಾದುಹೋಗಿದ್ದು. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆಗಳು ನಿರ್ಮಾಣವಾಗಿವೆ. ಇದರಿಂದಾಗಿ ಮಳೆಗಾಲದಲ್ಲಿ ಪ್ರವಾಹ ಉಂಟಾಗಿ ಮನೆಗಳಿಗೆ ನೀರುನುಗ್ಗುತ್ತದೆ ಎಂದು ಬಡಾವಣೆನಿವಾಸಿಗಳು ದೂರುತ್ತಿದ್ದಾರೆ.
ರಾಜಕಾಲುವೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಂಡುಕಾಣದಂತೆ ವರ್ತಿಸುತ್ತಿದ್ದಾರೆ. ದೂರದೃಷ್ಟಿಕೊರತೆಯು, ರಿಯಲ್‌ಎಸ್ಟೇಟ್ ದಂಧೆಯೊ ಅಥವಾ ರಾಜಕಾರಣಿಗಳ ಲಾಭಿಯೋ ತಿಳೀಯದೆ ಸಾರ್ವಜನಿಕರು ಪರಿತಪಿಸುವಂತಾಗಿದೆ. ಸಾರ್ವಜನಿಕರು ಹಲವುಬಾರಿ ದೂರುಗಳನ್ನು ನೀಡಿದರು ಅಧಿಕಾರಿಗಳು ರಾಜಕಾಲುವೆಗಳ ಕಡೆ ಸೌಜನ್ಯಕ್ಕೂ ಬೇಟಿ ನೀಡಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ ಬಹುತೇಕ ಕಡೆಗಳಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದೆ. ಅಲ್ಲದೇ ಪಟ್ಟಣವ್ಯಾಪ್ತಿಯಲ್ಲಿ 8 ಅಡಿಗಳ ಬದಲಿಗೆ ಕೇವಲ 4 ಅಡಿಗಳಷ್ಟು ಅವೈಜ್ಞಾನಿಕವಾಗಿ ರಾಜಕಾಲುವೆಯನ್ನು ನಿರ್ಮಿಸಲಾಗಿದೆ. ವಿವಿಧೆಡೆ ಹಲವು ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡು ಬಡಾವಣೆ, ಕಾಂಪೌಂಡ್, ಶೆಡ್‌ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಒತ್ತಡ ಪ್ರಭಾವದಿಂದಾಗಿ ಒತ್ತುವರಿ ನೋಡಿಕೊಂಡು ಸುಮ್ಮನಿದ್ದಾರೆ.
ರಿಯಾಯಿತಿ ನೀಡಿ ತೆರಿಗೆ ಕಟ್ಟುವಂತೆ ಪ್ರೇರೇಪಿಸುತ್ತಾರೆ. ತೆರಿಗೆ ವಸೂಲಿಗೆ ತೋರುವ ಆಸಕ್ತಿಯನ್ನು ಜನರ ಕೆಲಸದ ವಿಷಯದಲ್ಲಿ ಏಕೆ ತೋರಬಾರದು. ತೆರಿಗೆ ಬಗ್ಗೆ ಇಷ್ಟೆಲ್ಲಾ ಯೋಚಿಸುವ ಆಯುಕ್ತರು, ರಾಜಕಾಲುವೆಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಟೀಕೆಗಳು ವ್ಯಕ್ತವಾಗಿವೆ.
ಮಳೆಯನೀರು ಮನೆಗೆ ನುಗ್ಗಿದಾಗ, ರಸ್ತೆಯಲ್ಲಿ ಸಂಗ್ರವಾದಾಗ ಮಾತ್ರ ಅಧಿಕಾರಿಗಳಿಗೆ ರಾಜಕಾಲುವೆಗಳ ನೆನಪಾಗುತ್ತದೆ. ಜನರಿಗೆ ಸಮಸ್ಯೆಯಾದಾಗ ಮಳೆಯಲ್ಲಿ ಕೊಡೆಹಿಡಿದು ಬಂದುಪೋಟೋತೆಗೆಸಿಕೊಂಡು ಹೋಗುತ್ತಾರೆ. ನಂತರ ಅಲ್ಲಿನ ಜನರಪಾಡೇನು ಎಂಬುವುದರ ಬಗ್ಗೆ ತಲೆಕೆಡಿಸಿಕೊಲ್ಳುವುದಿಲ್ಲ ಎಂದು ವಕೀಲ ಹೆಚ್.ಎಲ್.ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಹಲವುಕಡೆ ಚರಂಡಿಯೇ ಇಲ್ಲ
ನಗರದ ಬಹುತೇಕ ರಾಜಕಾಲುವೆಗಳು ಮುಚ್ಚಿವೆ. ನೀರುಸಮರ್ಪಕವಾಗಿ ಹರಿದುಹೋಗಲು ಆಗುತ್ತಿಲ್ಲ. ಹಲವುಕಡೆಗಳಲ್ಲಿ ಚರಂಡಿ ಇಲ್ಲದಂತಾಗಿದೆ. ಕಲುಷಿತನೀರು ರಸ್ತೆಯಮೇಲೆ ಹರಿಯುತ್ತಿದ್ದು ತಾಲ್ಲೂಕುಆಡಳಿತ, ನಗರಸಭೆ ಅಧಿಕಾರಿಗಳು ಅಮರೋಪಾದಿಯಲ್ಲಿ ರಾಜಕಾಲುವೆ ಒತ್ತವರಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.