ರಾಜ್ಯಸಭಾ ಸದಸ್ಯನಾದರೂ ನಾನೊಬ್ಬ ಸಾಮನ್ಯ ಕಾರ್ಯಕರ್ತ: ನಾರಾಯಣಸಾ ಭಾಂಡಗೆ

| Published : Mar 04 2024, 01:21 AM IST

ರಾಜ್ಯಸಭಾ ಸದಸ್ಯನಾದರೂ ನಾನೊಬ್ಬ ಸಾಮನ್ಯ ಕಾರ್ಯಕರ್ತ: ನಾರಾಯಣಸಾ ಭಾಂಡಗೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಸಭಾ ಸದಸ್ಯನಾದರೂ ನಾನೊಬ್ಬ ಸಾಮನ್ಯ ಕಾರ್ಯಕರ್ತ. ನನ್ನ ಬೂತ್‌ ಅನ್ನು ಶಕ್ತಿಶಾಲಿ ಆಗಿಟ್ಟುಕೊಳ್ಳುವ ಕರ್ತವ್ಯ ನನ್ನದು ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯಸಭಾ ಸದಸ್ಯನಾದರೂ ನಾನೊಬ್ಬ ಸಾಮನ್ಯ ಕಾರ್ಯಕರ್ತ. ನನ್ನ ಬೂತ್‌ ಅನ್ನು ಶಕ್ತಿಶಾಲಿ ಆಗಿಟ್ಟುಕೊಳ್ಳುವ ಕರ್ತವ್ಯ ನನ್ನದು ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಬಿ.ವಿ.ವಿ. ಸಂಘದ ಮಿನಿ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ವಿಧಾನಸಭಾ ಕ್ಷೇತ್ರದಿಂದ ಹಮ್ಮಿಕೊಂಡ ನೂತನ ರಾಜ್ಯಸಭಾ ಸದಸ್ಯರಿಗೆ ಸನ್ಮಾನ ಹಾಗೂ ಫಲಾನುಭವಿಗಳಗಳ ಸಂಪರ್ಕ ಅಭಿಯಾನದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.

ಪಕ್ಷಕ್ಕೆ ನಿಷ್ಠನಾದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಉನ್ನತ ಹುದ್ದೆ ನೀಡುವ ಏಕೈಕ ಪಕ್ಷ ಭಾರತೀಯ ಜನಾತಾ ಪಾರ್ಟಿ ಯಾಗಿದೆ. ಇಂಥ ಪಕ್ಷದ ಕಾರ್ಯಕರ್ತನಾಗಿರುವುದ್ದಕ್ಕೆ ನನಗೆ ಹೆಮ್ಮೆಯಿದೆ. ರಾಜ್ಯಸಭಾ ಸದಸ್ಯನಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ನನ್ನ ಬೂತ್‌ನ ಸಶಕ್ತೀಕರಣದ ಕರ್ತವ್ಯವನ್ನು ನಾನೇ ವಹಿಸಿಕೊಳ್ಳವೆ. ಅದರಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ತಮ್ಮ ಬೂತ್‌ನ್ನು ಮತ್ತಷ್ಟು ಗಟ್ಟಿಗೊಳಿಸಬೇಕು, ಬೂತ್‌ ಗೆದ್ದರೆ ದೇಶ ಗೆದ್ದಂತೆ. ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪಕ್ಷ ನನ್ನನ್ನು ಗುರುತಿಸಿ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿರುವುದಕ್ಕೆ ಪಕ್ಷದ ಎಲ್ಲ ಹಿರಿಯರಿಗೂ ಹಾಗೂ ಸದಾ ಜೊತೆಗೆ ಇರುವ ಹಿಂದಿನ ಶಾಸಕರು, ಹಿರಿಯರಾ ಡಾ.ವೀರಣ್ಣ ಚರಂತಿಮಠ ಅವರಿಗೆ ಧನ್ಯವಾದ ಸಲ್ಲಿಸುವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ನಾರಾಯಣಸಾ ಭಾಂಡಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಮತ್ತಷ್ಷು ಬಲ ಬಂದಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇದೆ ಎನ್ನುವುಕ್ಕೆ ಭಾಂಡಗೆ ಅವರೇ ಸಾಕ್ಷಿಯಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಮೊತ್ತಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ. ದೇಶದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರೋಣ. ಭಾರತ ವಿಶ್ವಗುರುವಾಗಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ರಾಜು ರೇವಣಕರ, ನಗರಮಂಡಲ ಅಧ್ಯಕ್ಷ ಸದಾನಂದ ನಾರಾ, ವೀರಣ್ಣ ಹಳೆಗೌಡರ, ಗುಂಡುರಾವ ಶಿಂಧೆ, ಮಹೇಶ ಅಥಣಿ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ಸತ್ಯನಾರಾಯಣ ಹೇಮಾದ್ರಿ, ರಾಜು ಮುದೇನೂರ, ಶಿವಾನಂದ ಟವಳಿ, ಭಾಗ್ಯಶ್ರಿ ಹಂಡಿ, ಅನಿತಾ ಸರೋದೆ, ಶಶಿಕಲಾ ಸುರೇಶ ಮಜ್ಜಗಿ, ಶೋಭಾ ರಾವ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಮಲ್ಲಿಕಾರ್ಜುನ ಕಾಂಬಳೆ, ನಾಗರಾಜ ನಾರಯಣಕರ, ಪ್ರಭು ಹಡಗಲಿ, ಸಾಗರ ಬಂಡಿ, ಬಸವರಾಜ ಅವರಾದಿ ಸೇರಿದಂತೆ ಅನೇಕರು ಇದ್ದರು.

ಇದೇ ಸಂಧರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಫಲಾನುಭಿಗಳ ಸಂಪರ್ಕ ಅಭಿಯಾನದ ಕುರಿತು ಮಾಹಿತಿ ನೀಡಲಾಯಿತು.