ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ತಮ್ಮ 71ರ ಇಳಿ ವಯಸ್ಸಿನಲ್ಲಿಯೂ ಸಹ ಯುವಕನಂತೆ ಉತ್ಸಾಹದಿಂದ ವೈದ್ಯಕೀಯ ಸೇವೆಯ ಜೊತೆಗೆ ಸದಾ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿರುವ ನಗರದ ಪ್ರತಿಷ್ಠಿತ ಮಕ್ಕಳ ವೈದ್ಯ ಡಾ. ಎಲ್.ಬಿದರಿ ಅವರಿಗೆ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಳೆದ 45 ವರ್ಷಗಳಿಂದ ಸಿಗುತ್ತಿರುವ ಇವರ ವೈದ್ಯಕೀಯ ಸೇವೆ ದೇಶಾದ್ಯಂತ ಮನೆಮಾತಾಗಿದೆ. ನೂರಾರು ಉಚಿತ ಶಿಬಿರಗಳು ಹಾಗೂ ಚಿಕಿತ್ಸೆಗಳನ್ನು ನೀಡಿದ ಇವರ ಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಂತಾಗಿದೆ.
*ಶಶಿಕಾಂತ ಮೆಂಡೆಗಾರ.
ಕನ್ನಡಪ್ರಭ ವಾರ್ತೆ ವಿಜಯಪುರ: ತಮ್ಮ 71ರ ಇಳಿ ವಯಸ್ಸಿನಲ್ಲಿಯೂ ಸಹ ಯುವಕನಂತೆ ಉತ್ಸಾಹದಿಂದ ವೈದ್ಯಕೀಯ ಸೇವೆಯ ಜೊತೆಗೆ ಸದಾ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿರುವ ನಗರದ ಪ್ರತಿಷ್ಠಿತ ಮಕ್ಕಳ ವೈದ್ಯ ಡಾ. ಎಲ್.ಬಿದರಿ ಅವರಿಗೆ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಳೆದ 45 ವರ್ಷಗಳಿಂದ ಸಿಗುತ್ತಿರುವ ಇವರ ವೈದ್ಯಕೀಯ ಸೇವೆ ದೇಶಾದ್ಯಂತ ಮನೆಮಾತಾಗಿದೆ. ನೂರಾರು ಉಚಿತ ಶಿಬಿರಗಳು ಹಾಗೂ ಚಿಕಿತ್ಸೆಗಳನ್ನು ನೀಡಿದ ಇವರ ಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಂತಾಗಿದೆ.*ವಯಕ್ತಿಕ ವಿವರ.
ಡಾ.ಬಿದರಿಯ ಅಶ್ವಿನಿ ಆಸ್ಪತ್ರೆ ಹಾಗೂ ಅಶ್ವಿನಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ & ರಿಸರ್ಚ್ ಸೆಂಟರ್ ನ ಅಧ್ಯಕ್ಷರಾಗಿರುವ ಡಾ.ಎಲ್.ಎಚ್.ಬಿದರಿ ಅವರು 1953 ನವ್ಹೆಂಬರ್ 18ರಂದು ಜನಿಸಿದ್ದು, ಇವರು ಶಿಕ್ಷಣ ಎಂಡಿ, ಡಿಸಿಎಚ್, ಎಫ್‌ಐಎಪಿ ವೈದ್ಯಕೀಯ ಕೋರ್ಸ್ ಮುಗಿಸಿದ್ದಾರೆ.*ಸಾಧನೆಯ ಶಿಖರ.
ಕರ್ನಾಟಕ ಅಷ್ಟೆ ಅಲ್ಲದೇ ದೇಶದಲ್ಲಿಯೇ ಟಾಯರ್-3 ನಗರದಲ್ಲಿ 120 ಹಾಸಿಗೆಗಳ ಬಿ.ಎನ್.ಬಿ ಪೆಡಿಯಾಟ್ರಿಕ್ ಸ್ನಾತಕೋತ್ತರ ಕೇಂದ್ರವನ್ನು ಹೊಂದಿದ್ದು, ಅತ್ಯಂತ ವಿಶೇಷ ಸೇವೆಗಳನ್ನು ಜನರಿಗೆ ಕೈಗೆಟಕುವ ದರದಲ್ಲಿ ಹಾಗೂ ಸರಕಾರದ ಯೋಜನೆಯಲ್ಲಿ ಆರೋಗ್ಯ ಸೇವೆ ನೀಡುತ್ತಿದ್ದಾರೆ.*ಮಕ್ಕಳ ಪಾಲಿಗೆ ದೇವರು.
ಉತ್ಕೃಷ್ಠ ದರ್ಜೆಯ ಚಿಕ್ಕಮಕ್ಕಳ ಘಟಕ, ನವಜಾತು ಶಿಶುಗಳ ಘಟಕ, ಚಿಕ್ಕ ಮಕ್ಕಳ ಎಲ್ಲ ತರಹದ ಶಸ್ತ್ರಚಿಕ್ಕಿತ್ಸೆಗಳ ವ್ಯವಸ್ಥೆ, ಮಕ್ಕಳ ಹೃದಯ ಶಸ್ತ್ರಚಿಕ್ಕಿತ್ಸೆ ವ್ಯವಸ್ಥೆ ಹಾಗೂ ಪುಪ್ಪಸದಲ್ಲಿಯ ಪರವಸ್ತು ತೆಗೆಯುವ ವ್ಯವಸ್ಥೆಯನ್ನು ಸತತ 30 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇದಲ್ಲದೆ ಮಕ್ಕಳ ಅಭಿವೃದ್ಧಿ ಕ್ಲಿನಿಕ್‌ನಿಂದ ಮಕ್ಕಳ ಮಂದ ಬೆಳವಣಿಗೆ, ಮಾತು ವಿಳಂಬ, ಸುಲೀನತೆಗೆ ಸಂಬಂಧಿಸಿದಂತೆ ಎಸ್.ಟಿ.ಬಿದರಿ ಟ್ರಸ್ಟನ್ ಅಡಿಯಲ್ಲಿ ಸೇವೆ ನೀಡುತ್ತಿದ್ದಾರೆ.*ನಿಸ್ವಾರ್ಥ ಸೇವೆ.
ಕಳೆದ 40 ವರ್ಷಗಳಿಂದ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ, ರೋಟರಿ ಐ.ಎಂ.ಎ ಸೇವೆಯೊಂದಿಗೆ ಮಕ್ಕಳ ಲಸಿಕಾ ಕಾರ್ಯಕ್ರಮ ಹಾಗೂ ಮಕ್ಕಳ ಶ್ರೆಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇದರ ಜೊತೆ ರೆಡ್ ಕ್ರಾಸ್ ಇಂಡಿಯನ್ ಸೋಸೈಟಿಗೆ ಅಪಾರ ದೇಣಿಗೆ ನೀಡಿ ಗುಣಮಟ್ಟದ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸಲು ನೆರವು ನೀಡಿದ್ದಾರೆ. ಮತ್ತು ಚೈಲ್ಡ್ ಅಕಾಡೆಮಿ ಹುಟ್ಟು ಹಾಕುವ ಮುಖಾಂತರ ಮಕ್ಕಳ ಕೌಶಲ್ಯಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬಡವರಿಗಾಗಿ ಉಚಿತ ಆರೋಗ್ಯ ಸೇವೆ, ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ಸಿ.ನರ್ಸಿಂಗ್, ಪ್ಯಾರಾಮೆಡಿಕಲ್ ಸೈನ್ಸ್ ನಡೆಸುತ್ತಿದ್ದಾರೆ.* ನವಜಾತು ಶಿಶು ಮರಣ ಪ್ರಮಾಣ ತಗ್ಗಿಸಿದವರು.
ವಿಶೇಷವೆಂದರೆ ಮಹಾರಾಷ್ಟ್ರದ ಗಢಚಿರೋಲಿಯ ಪದ್ಮಶ್ರೀ ಪುರಸ್ಕೃತ ಡಾ.ಅಭಯರಾಮ ರವರ ಮನೆಯಲ್ಲಿನ ಶಿಶು ಆರೈಕೆ ಮಾದರಿಯನ್ನು ಮೊಟ್ಟಮೊದಲಿಗೆ ಕರ್ನಾಟಕದಲ್ಲಿ ತಂದಿದ್ದಾರೆ. ಅಲ್ಲದೆ 15 ಹಳ್ಳಿಗಳಲ್ಲಿ ಅನುಕರಿಸಿ 25 ಮಹಿಳಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ನವಜಾತು ಶಿಶು ಮರಣ ಪ್ರಮಾಣ ತಗ್ಗಿಸುವಲ್ಲಿ ಮಹತ್ವದ ಪಾತ್ರವನ್ನು .ಎಲ್.ಎಚ್.ಬಿದರಿಯವರು ವಹಿಸಿದ್ದಾರೆ.*ರಾಜ್ಯೋತ್ಸವ ಅವಾರ್ಡ್.
ಡಾ.ಬಿದರಿ ಆಸ್ಪತ್ರೆ ಸಂಸ್ಥೆಯ ಮೂಲಕ ವೈದ್ಯಕೀಯ ಸೇವೆ, ವಿಶೇಷ ಆಸ್ಪತ್ರೆ, ಸಮಾಜಕ್ಕೆ ನೀಡಿರುವ ಸೇವೆ ಹಾಗೂ ಅವರು ಸಲ್ಲಿಸಿದ ಸಮಾಜಿಕ ಸೇವೆಗಾಗಿ ರಾಜ್ಯ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ.*ಕೋಟ್: ಕಳೆದ 45 ವರ್ಷಗಳಿಂದ ನಿರಂತರವಾಗಿ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆ ಸಲ್ಲಿಸಿದ್ದಕ್ಕೆ ನನಗೆ 2024ರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇಂದು ಪ್ರಶಸ್ತಿ ಬಂದಿರುವುದು ಅತೀವ ಸಂತೋಷವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಹಾಗೂ ಸಮಾಜ ಸೇವೆ ಮಾಡಲು ಇನ್ನಷ್ಟು ಉತ್ಸಾಹ ಬಂದಿದೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಆಯ್ಕೆ ಸಮೀತಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ಧನ್ಯವಾದಗಳು.
.ಡಾ.ಎಲ್.ಎಚ್.ಬಿದರಿ, ಖ್ಯಾತ ವೈದ್ಯರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಭಾಜನರು.