ಸಾರಾಂಶ
ಧಾರವಾಡ:
69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಡು ಶ್ರೀಮಂತಗೊಳಿಸಿದವರನ್ನು ಯುವ ಪೀಳಿಗೆಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಧರೆಗೆ ದೊಡ್ಡವರು ಎಂಬ ವಿಶೇಷ ಮಾಲಿಕೆಯನ್ನು ನವೆಂಬರ್ ತಿಂಗಳು ಹಮ್ಮಿಕೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ನ. 5ರಿಂದ 30ರ ವರೆಗೆ ಭಾನುವಾರ ಹೊರತುಪಡಿಸಿ ನಿತ್ಯ ಬೆಳಗ್ಗೆ 10.30ರಿಂದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಾಡಿಗೆ ಕೊಡುಗೆ ನೀಡಿದ ಸಾಧಕರೊಬ್ಬರ ವ್ಯಕ್ತಿತ್ವ, ಬದುಕು ಪರಿಚಯಿಸುವ ಧರೆಗೆ ದೊಡ್ಡವರು ನಡೆಯಲಿದೆ. ಹಿರಿಯ ವಿಮರ್ಶಕ ಡಾ. ಹಂಪ ನಾಗರಾಜಯ್ಯ ನ. 5ರ ಬೆಳಗ್ಗೆ 10.30ಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
ಇವರೇ ಧರೆಗೆ ದೊಡ್ಡವರು:ಮೊದಲ ದಿನ ಹಂಪನಾ, ನ. 6ರಂದು ಡಾ.ಡಿ.ಎನ್. ಶಂಕರಭಟ್, 7ರಂದು ಡಾ.ವಿಜಯಮ್ಮ, 8ರಂದು ನ್ಯಾಯಮೂರ್ತಿ ಗೋಪಾಲಗೌಡರು, 9ರಂದು ಡಾ. ಕುಂ. ವೀರಭದ್ರಪ್ಪ, 11ರಂದು ಕೆ. ರಾಮಯ್ಯ, 12ರಂದು ಡಾ. ಯಲ್ಲಪ್ಪ ರೆಡ್ಡಿ, 13ರಂದು ಪಂ. ಎಂ. ವೆಂಕಟೇಶಕುಮಾರ, 14ರಂದು ಡಾ. ಶಾಂತಿನಾಯಕ, ರಂಜಾನ ದರ್ಗಾ, 15ರಂದು ಡಾ. ಪಂಡಿತಾರಾಧ್ಯರು, 16ರಂದು ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, 19ರಂದು ಡಾ. ನಾಗೇಶ ಹೆಗಡೆ, 20ರಂದು ಬಿ.ಟಿ. ಲಲಿತಾ ನಾಯಕ, 21ರಂದು ಸಿ. ಚೆನ್ನಬಸವಣ್ಣ ಹಾಗೂ ಡಾ. ರಾಮಕೃಷ್ಣ ಗುಂದಿ, 22ರಂದು ಬಿ.ಆರ್. ಪಾಟೀಲ ಹಾಗೂ ಪ್ರೊ. ಬಿ.ವಿ. ಶಿರೂರ, 23ರಂದು ಡಾ. ವೀರಣ್ಣ ದಂಡೆ ಹಾಗೂ ಸಿ. ಚಂದ್ರಶೇಖರ, 25ರಂದು ಡಾ. ಚಂದ್ರಶೇಖರ ಕಂಬಾರ, 26ರಂದು ಬೋಳುವಾರ ಮಹಮ್ಮದ ಕುಂಯಿ ಹಾಗೂ ಡಾ. ಎಸ್.ಆರ್. ಗುಂಜಾಳ, 27ರಂದು ಡಾ. ಗೊ.ರು. ಚೆನ್ನಬಸಪ್ಪ, 28ರಂದು ಚಿರಂಜೀವಿ ಸಿಂಗ್ ಹಾಗೂ ಡಾ. ಶಶಿಕಲಾ ವಸ್ತ್ರದ, 29ರಂದು ಡಾ. ಜಿ. ರಾಮಕೃಷ್ಣ ಹಾಗೂ 30ರಂದು ಸಮಾರೋಪ ನಡೆಯಲಿದ್ದು ಡಾ. ಬರಗೂರು ರಾಮಚಂದ್ರಪ್ಪ ಅವರ ಬದುಕು, ಕೊಡುಗೆ ಕುರಿತು ಚಿಂತಕರು ಮಾತನಾಡಲಿದ್ದಾರೆ ಎಂದರು.
ನಾಟಕ ನೋಡ ಬನ್ನಿ:ನ. 20ರಿಂದ 29ರ ವರೆಗೆ ಸಂಜೆ 5ರಿಂದ ನಿತ್ಯ ಇದೇ ಸಭಾಭವನದಲ್ಲಿ 10 ದಿನ ನಾಟಕೋತ್ಸವ ಸಹ ನಡೆಯಲಿದೆ. ನಾಟಕ ಅಕಾಡೆಮಿ ಸದಸ್ಯರಾದ ಗಾಯತ್ರಿ ಹಡಪದ ನ. 20ರ ಸಂಜೆ 5ಕ್ಕೆ ಉದ್ಘಾಟನೆ ಮಾಡಲಿದ್ದು, ತಲ್ಕಿ ನಾಟಕ ಪ್ರದರ್ಶನ ಜರುಗಲಿದೆ. ನಿತ್ಯ ಇಬ್ಬರು ಕಲಾವಿದರಿಗೆ ರಂಗ ಸನ್ಮಾನ ಸಹ ನಡೆಯಲಿದೆ ಎಂದ ಹಲಗತ್ತಿ ಅವರು, 21ರಂದು ಡಾ. ಪ್ರಕಾಶ ಗರುಡ ನಿರ್ದೇಶನದ ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ?, 22ರಂದು ನವೀನ ಭೂಮಿ ನಿರ್ದೇಶನದ ಸರಸತಿಯಾಗಲೊಲ್ಲೆ, 23ರಂದು ಝಕೀರ ನದಾಫ್ ಅವರ ದೇವಸೂರ, 24ರಂದು ಸಿಕಂದರ ದಂಡಿನ ಅವರ ಅಂಧ ಗಾಂಧಾರ-ಮಕ್ಕಳ ನಾಟಕ, 25ರಂದು ಮಲ್ಲಿಕಾರ್ಜುನ ಮುದಕವಿ ಅವರ ಕೃಷ್ಣ ಪಾರಿಜಾತ, 26ರಂದು ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಕಂಸಾಯಣ, 27ರಂದು ಡಾ. ಗಿರಡ್ಡಿ ಗೋವಿಂದರಾಜ ಅವರ ಕನಸು, 28ರಂದು ವಿಕ್ರಮ ವಿಸಾಜಿ ಅವರ ರಕ್ತ ವಿಲಾಪ ಹಾಗೂ 29ರಂದು ಭಾರತಿ ದಾವಣಗೆರೆ ಅವರ ಮಗ ಹೋದರೂ ಮಾಂಗಲ್ಯ ಬೇಕು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಒಟ್ಟಾರೆ, ನವೆಂಬರ್ ತಿಂಗಳು ಕನ್ನಡದ ಕಾರ್ಯಕ್ರಮಗಳು, ರಂಗಭೂಮಿ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಘದ ಆವರಣದಲ್ಲಿ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಹಲಗತ್ತಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಕುಂಬಿ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ ಇದ್ದರು.